ಇಂಡೋನೇಷಿಯಾದಲ್ಲಿ ಭೂಕಂಪ 72ಕ್ಕೂ ಹೆಚ್ಚು ಸಾವು

ಜಕಾರ್ತಾ, ಡಿಸೆಂಬರ್ 7: ಇಂಡೋನೇಷಿಯಾದಲ್ಲಿ ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ 6.5 ರಷ್ಟಿದೆ. ಭೂಕಂಪದಲ್ಲಿ 72ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. 12ಕ್ಕೂ ಹೆಚ್ಚು ಭಾರಿ ಕಟ್ಟಡಗಳು ನೆಲಸಮಗೊಂಡಿವೆ.

ಬಂದಾ ಅಚೆಯಲ್ಲಿ ಭೂಕಂಪವು ಸುಮಾರು 20 ಕಿಲೋಮೀಟರ್ ಉತ್ತರಕ್ಕೆ 90 ಕಿಲೋಮೀಟರ್ ಮತ್ತು ಆಳಕ್ಕೆ 8.2 ಕಿಲೋ ಮೀಟರ್ ಆಳಕ್ಕೆ ಸಂಭವಿಸುರುವುದಾಗಿ ಯು ಎಸ್ ಜಿಯಾಲಜಿಕಲ್ ಸರ್ವೆ ತಿಳಿಸಿದೆ.[ಭಾರತ-ನೇಪಾಳ ಗಡಿಯಲ್ಲಿ 5.2ರಷ್ಟು ತೀವ್ರತೆ ಭೂಕಂಪ]

earthquake hits northern Sumatra, Indonesia

ಇಂಡೋನೇಷಿಯಾದ ಉತ್ತರ ಸುಮಾತ್ರಾ, ಅಚೆ, ಪ್ರದೇಶದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಅನೇಕ ಮನೆಮಠಗಳು ನೆಲಸಮವಾಗಿದೆ. ರಸ್ತೆಗಳು ಬಿರುಕು ಬಿಟ್ಟಿವೆ. ಕೆಲವು ಕಡೆ ನೆಲಸಮವಾದ ಮನೆಗಳಲ್ಲಿ ಜನರ ಅಕ್ರಂದನ ಕೇಳಿ ಬರುತ್ತಿದೆ ಎಂದು ನ್ಯಾಷನಲ್ ಡಿಸಾಸ್ಟರ್ ಮ್ಯಾನೆಜ್ ಮೆಂಟ್ ಎಜೆನ್ಸಿ ಅಧಿಕಾರಿ ತಿಳಿಸಿದರು.

ಭೂಕಂಪದಿಂದ ಅನೇಕ ಮಂದಿ ಗಾಯಗೊಂಡಿರುವ ಪರಿಣಾಮ ರೆಡ್ ಕ್ರಾಸ್ ಸಂಸ್ಥೆ ಗಾಯಾಳುಗಳಿಗೆ ಬೀದಿಗಳಲ್ಲಿಯೆ ಚಿಕಿತ್ಸೆ ನೀಡುತ್ತಿದೆ.

ಇಂಡೋನೇಷಿಯಾದಲ್ಲಿ ಭೂಕಂಪನದಿಂದಾಗಿ ಜಕಾರ್ತಾ, ಸುಮಾತ್ರಾ, ಅಚೆಯಲ್ಲಿ ಸುಮಾರು ಮೂವತ್ತು ನಿಮಿಷಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+