ಪಪುವಾ ನ್ಯೂ ಗಿನಿಯಾದಲ್ಲಿ 8 ಪ್ರಮಾಣದ ಭೀಕರ ಭೂಕಂಪ, ಸುನಾಮಿ ಎಚ್ಚರಿಕೆ

Posted By:
Subscribe to Oneindia Kannada

ನ್ಯೂ ಐರ್ಲೆಂಡ್ ವಲಯದಲ್ಲಿ ಬರುವ ಪಪುವಾ ನ್ಯೂ ಗಿನಿಯಾದಲ್ಲಿ ಶನಿವಾರ ಸಂಜೆ 8 ಪ್ರಮಾಣದ ಭೀಕರ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಆದರೆ, ಇದರಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ಸುನಾಮಿ ಸಂಭವಿಸುವ ಸಾಧ್ಯತೆ ಇಲ್ಲ ಎಂದು ಆಸ್ಟ್ರೇಲಿಯಾ ಸುನಾಮಿ ಎಚ್ಚರಿಕೆ ಕೇಂದ್ರ ಪ್ರಕಟಣೆ ಹೊರಡಿಸಿದೆ. ಈ ದ್ವೀಪರಾಷ್ಟ್ರ 1949 ಜುಲೈ 1ರಂದು ಆಸ್ಟ್ರೇಲಿಯಾದಿಂದ ಸ್ವಾತಂತ್ರ್ಯ ಪಡೆಯಿತು.

Earthquake of 8 magnitude felt in Papua New Guinea, tsunami alert

ನ್ಯೂ ಐರ್ಲೆಂಡ್ ನಿಂದ 60 ಕಿ.ಮೀ. ದೂರದಲ್ಲಿರುವ ಟರೋನ್ ಎಂಬಲ್ಲಿ 73.4 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಆಘಾತಕಾರಿ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿವೆ ಎಂದು ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಎಚ್ಚರಿಕೆ ನೀಡಿದೆ.

ಪಪುವಾ ನ್ಯೂ ಗಿನಿಯಾ ಪ್ರಾಂತ್ಯದಲ್ಲಿ ಭೂಕಂಪಗಳು ಸರ್ವೇಸಾಮಾನ್ಯ. ಆದರೆ, ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಪಪುವಾ ನ್ಯೂ ಗಿನಿಯಾ, ಸೋಲೋಮನ್ ದ್ವೀಪಗಳು, ಇಂಡೇನೇಷ್ಯಾ, ನೌರು ಮತ್ತಿತರ ದ್ವೀಪಗಳಲ್ಲಿ ಸುನಾಮಿ ಏಳಬಹುದೆಂದು ಎಚ್ಚರಿಕೆ ನೀಡಲಾಗಿದೆ.

ಆಫ್ಟರ್ ಶಾಕ್ : ಕೆಲ ಗಂಟೆಗಳ ನಂತರ 6.4 ಪ್ರಮಾಣದ ಮತ್ತೊಂದು ಪ್ರಬಲ ಭೂಕಂಪ ಪಪುವಾ ನ್ಯೂ ಗಿನಿಯಾವನ್ನು ನಡುಗಿಸಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಸಾವು, ನೋವಿನ ವರದಿ ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tsunami alert issued after earthquake of 8.0-magnitude was felt in Papua New Guinea. The Pacific Tsunami Warning Centre has said widespread hazardous tsunami waves are possible.
Please Wait while comments are loading...