ಇರಾನ್ -ಇರಾಕ್ ಗಡಿಯಲ್ಲಿ ಭೂಕಂಪ, 140 ಮಂದಿ ಸಾವು

By: ವಿಕಾಸ್ ನಂಜಪ್ಪ
Subscribe to Oneindia Kannada

ತೆಹ್ರೇನ್, ನವೆಂಬರ್ 13: ಇರಾನ್ -ಇರಾಕ್ ಗಡಿಪ್ರದೇಶದಲ್ಲಿ ಭಾನುವಾರ ರಾತ್ರಿ ಭಾರಿ ಭೂಕಂಪ ಸಂಭವಿಸಿದೆ. ಈ ದುರ್ಘಟನೆಯಲ್ಲಿ 140ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಟರ್ಕಿ, ಕುವೈತ್ ಮತ್ತು ಅರಬ್ ರಾಷ್ಟ್ರಗಳಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ.

Earthquake of 7.3 magnitude hits Iraq-Iran border, 140 dead

ಅಮೆರಿಕದ ಜಿಯಾಲಾಜಿಕಲ್ ಸರ್ವೇ ಪ್ರಕಾರ ಹಲಾಬ್ಜಾದಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು, ಇರಾನ್ನಿನ ಈಶಾನ್ಯ ಗಡಿ ಭಾಗದಲ್ಲಿ 7.3 ತೀವ್ರತೆ ದಾಖಲಾಗಿದೆ.

ಸ್ಥಳೀಯ ಕಾಲಾಮಾನ 9.30ಕ್ಕೆ ಭಾರಿ ಭೂಕಂಪ ಸಂಭವಿಸಿದ್ದು, ಇರಾನ್‍ನ ಮಾಧ್ಯಮ ಸಂಸ್ಥೆ IRNA ಪ್ರಕಾರ ಈ ಭೂಕಂಪದಲ್ಲಿ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಘರ್ಸ್ ಇ ಶಿರಿನ್ ಗವರ್ನರ್ ಫರಾಮರ್ಜ್ ಅಕ್ಬರಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A massive earthquake of magnitude 7.3 struck Iraq on Sunday, 103 kms (64 miles) southeast of the city of As-Sulaymaniyah, the US Geological Survey said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ