ಬುರ್ಜ್ ಕಲಿಫಾಕ್ಕೆ ಕಳೆ ನೀಡಿದ ನಮ್ಮ ಹೆಮ್ಮೆಯ ತ್ರಿವರ್ಣಧ್ವಜ!

ದುಬೈ, ಫೆಬ್ರವರಿ 10: ಪ್ರಧಾನಿ ನರೇಮದ್ರ ಮೋದಿಯವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಹಲವು ಐತಿಹಾಸಿಕ, ಪ್ರಸಿದ್ಧ ಕಟ್ಟಡಗಳು ಭಾರತದ ಧ್ವಜದಿಂದ ಕಂಗೊಳಿಸುತ್ತಿವೆ!

ದುಬೈನ ಬುರ್ಜ್ ಕಲಿಫಾ, ದುಬೈ ಫ್ರೇಮ್ ಸೇರಿದಂತೆ ಹಲವು ಐಕಾನಿಕ್ ಕಟ್ಟಡಗಳಲ್ಲಿ ಲೇಸರ್ ಮೂಲಕ ಭಾರತೀಯ ರಾಷ್ಟ್ರ ಧ್ವಜದ ಬಣ್ಣಗಳನ್ನು ಮೂಡಿಸಲಾಗುತ್ತಿದೆ. 2017 ರ ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದೂ ಇದೇ ರೀತಿ ಲೇಸರ್ ಶೋ ಮೂಲಕ ಈ ಗಗನಚುಂಬಿ ಕಟ್ಟಡದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಮೂಡಿಸಲಾಗಿತ್ತು.

ಅರಬ್ ದೇಶದಲ್ಲಿರುವ ಲಕ್ಷಾಂತರ ಭಾರತೀಯರಿಗೆ ಈ ದೃಶ್ಯ ಅಮೋಘವೆನ್ನಿಸಿತ್ತು. ದೇಶಭಕ್ತಿಯನ್ನು ಸ್ಫುರಿಸುವ ಈ ದೃಶ್ಯವನ್ನು ಕಣ್ತುಂಬಿಕೊಂಡಷ್ಟೂ ಸಾಲದು ಅನ್ನಿಸಿತು. ಈ ಮನಮೋಹಕ ಚಿತ್ರಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಭಾರತೀಯ ರಾಯಭಾರಿ ನವ್ದೀದ್ ಸುರಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು(ಫೆ.10) ಸಂಜೆ ಅಬು ದಾಬಿ ತಲುಪಲಿದ್ದಾರೆ. ಸಂಜೆ ಅಬುದಾಬಿ ರಾಜ ಶೇಖ್ ಮೊಹ್ಮದ್ ಬಿನ್ ಜಯಾದ್ ಅಲ್ ನಹ್ಯಾನ್ ರನ್ನು ಭೇಟಿ ಮಾಡುವ ಮುನ್ನ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+