• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಸಿಗಾಳಿ-ವಿಪರೀತ ಉಷ್ಣಾಂಶ: ಹೆದ್ದಾರಿಯಲ್ಲೇ ಧಗಧಗನೆ ಉರಿದ ಕಾರುಗಳು

By Nayana
|

ಬೆಂಗಳೂರು, ಜು27: ಬಿಸಿಗಾಳಿ ಹಾಗೂ ವಿಪರೀತ ಉಷ್ಣಾಂಶದ ಪರಿಣಾಮವಾಗಿ ಚಲಿಸುತ್ತಿರುವ ಕಾರ್ ವೊಂದಕ್ಕೆ ಬೆಂಕಿ ತಗುಲಿ ಒಂದು ಐತಿಹಾಸಿಕ ಕಟ್ಟಡವೂ ಸೇರಿದಂತೆ ಹಲವು ಮನೆಗಳಿಗೆ ಬೆಂಕಿ ವ್ಯಾಪಿಸಿದ ಘಟನೆ ಅಮೇರಿಕದ ಕಾಲಿಫೋರ್ನಿಯಾದ ಶಸ್ತ ಬಳಿಯ ರಾಷ್ಟ್ರೀಯ ಹೆದ್ದಾರಿ 299ರಲ್ಲಿ ಗುರುವಾರ ನಡೆದಿದೆ. ಇದರಿಂದ ಸಾಕಷ್ಟು ಮನೆಗಳುಸುಟ್ಟು ಭಸ್ಮವಾಗಿದ್ದು, ಸಾರ್ವಜನಿಕರಿಗೂ ಗಂಭೀರ ಗಾಯಗಳಾಗಿವೆ.

ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರಮೋದಿಯವರು ಮಣ್ಣಿನ ಸ್ಲ್ಯಾಬ್‌ ಮೇಲೆ ತಮ್ಮ ಬೆರಳಚ್ಚು ಮೂಡಿಸಿ ಹಸ್ತಾಕ್ಷರ ಹಾಕಿದರು. ಇನ್ನೊಂದೆಡೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ನೀರು ತುಂಬಿದ ಪೊಲೀಸ್ ಠಾಣೆಯಲ್ಲೂ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.

ಕರ್ನಾಟಕದಲ್ಲಿ ತಗ್ಗಿದ ಮಳೆ, ಉತ್ತರ ಭಾರತದಲ್ಲಿ ವರುಣನ ಆರ್ಭಟ

ಅಪೌಷ್ಠಿಕತೆ ಕೊರತೆಯಿಂದ ಬಳಲಿ ಸಾವಿಗೀಡಾದ ಮೂರು ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ತಾಯಿ ನವದೆಹಲಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಗುರುವಾರ ಹಾಜರಾದರು. ಅಪೌಷ್ಠಿಕತೆಯಿಂದ ಮೂರು ಮಕ್ಕಳು ಮನೆಯಲ್ಲಿ ಮೃತಪಟ್ಟಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿತ್ತು. ಗಾಜಿಯಾಬಾದ್‌ ಸುತ್ತಮುತ್ತಲು ಸುರಿದ ಭಾರಿ ಮಳೆಗೆ ಆದ ಅನಾಹುತಗಳನ್ನು ಚಿತ್ರಗಳ ಮೂಲಕ ವೀಕ್ಷಿಸಬಹುದಾಗಿದೆ.

ವಿಪರೀತ ಉಷ್ಣಾಂಶ: ನಿಂತಲ್ಲೇ ಸುಟ್ಟುಭಸ್ಮವಾದ ಕಾರುಗಳು

ವಿಪರೀತ ಉಷ್ಣಾಂಶ: ನಿಂತಲ್ಲೇ ಸುಟ್ಟುಭಸ್ಮವಾದ ಕಾರುಗಳು

ಕ್ಯಾಲಿಫೋರ್ನಿಯಾದಲ್ಲಿ ವಿಪರೀತ ಉಷ್ಣಾಂಶ ಹಾಗೂ ಬಿಸಿಗಾಳಿಯಿಂದಾಗಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡು ಕ್ಷಣಮಾತ್ರದಲ್ಲೇ ಸುಟ್ಟು ಬೂದಿಯಾದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿರುವ ಮನೆಗಳಿಗೂ ಬೆಂಕಿ ತಗುಲಿದೆ.

ಚಿತ್ರಗಳು:ವಿಜಯ ದಿವಸ: ಕಾರ್ಗಿಲ್‌ ಹುತಾತ್ಮ ಯೋಧರಿಗೆ ದೇಶದ ನಮನ

ಮಳೆಯ ನಡುವೆಯೂ ಕರ್ತವ್ಯ ಮೆರೆದ ಪೊಲೀಸ್‌ ಅಧಿಕಾರಿಗಳು

ಮಳೆಯ ನಡುವೆಯೂ ಕರ್ತವ್ಯ ಮೆರೆದ ಪೊಲೀಸ್‌ ಅಧಿಕಾರಿಗಳು

ಇನ್ನೊಂದೆಡೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ನೀರು ತುಂಬಿದ ಪೊಲೀಸ್ ಠಾಣೆಯಲ್ಲೂ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಪೊಲೀಸ್‌ ಠಾಣೆಯ ಒಳಗೇ ನೀರು ನುಗ್ಗಿದ್ದರೂ ಅದನ್ನು ಲೆಕ್ಕಿಸದೆ ಅಲ್ಲಿಯೇ ಕುಳಿತು ತಮ್ಮ ಕೆಲಸವನ್ನು ನಿಭಾಯಿಸಿದರು.

ಮಣ್ಣಿನ ಸ್ಲ್ಯಾಬ್‌ ಮೇಲೆ ಮೋದಿ ಬೆರಳಚ್ಚು

ಮಣ್ಣಿನ ಸ್ಲ್ಯಾಬ್‌ ಮೇಲೆ ಮೋದಿ ಬೆರಳಚ್ಚು

ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್‌ ಸಮ್ಮಿತ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಸ್ಲ್ಯಾಬ್‌ ಮೇಲೆ ಬೆರಳಚ್ಚು ಮೂಡಿಸಿ, ಹಸ್ತಾಕ್ಷರ ಹಾಕಿದರು.

ಬ್ರಹ್ಮಪುತ್ರ ನದಿದೆ ಮುಂಗಾರು ಮೋಡಗಳ ಕವಚ

ಬ್ರಹ್ಮಪುತ್ರ ನದಿದೆ ಮುಂಗಾರು ಮೋಡಗಳ ಕವಚ

ಗುವಾಹಟಿ, ಮುಂಬೈ, ನವದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ, ಗುವಾಹಟಿಯಲ್ಲಿರುವ ಬ್ರಹ್ಮಪುತ್ರ ನದಿಯ ಮೇಲೆ ಕಾಣಿಸಿಕೊಂಡ ಮೋಡವು ನದಿಯ ಕವಚದ ರೀತಿಯಲ್ಲಿ ಕಾಣುತ್ತಿತ್ತು.

ಅಪೌಷ್ಠಿಕತೆಯಿಂದ ಅಸ್ವಸ್ಥಗೊಂಡು ಮೂವರು ಮಕ್ಕಳ ಸಾವು

ಅಪೌಷ್ಠಿಕತೆಯಿಂದ ಅಸ್ವಸ್ಥಗೊಂಡು ಮೂವರು ಮಕ್ಕಳ ಸಾವು

ನವದೆಹಲಿಯ ಮಂದಾವಾಲಿಯಲ್ಲಿ ಅಪೌಷ್ಠಿಕತೆಯಿಂದ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಕುರಿತು ಮಕ್ಕಳ ತಾಯಿ ನವದೆಹಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಗುರುವಾರ ಹಾಜರಾದರು, ಅವರನ್ನು ಕೋರ್ಟ್‌ಗೆ ಕರೆದೊಯ್ಯುತ್ತಿರುವ ದೃಶ್ಯವನ್ನು ನೀವು ನೋಡಬಹುದು.

ಗಾಜಿಯಾಬಾದ್‌ನಲ್ಲಿ ಸುರಂಗವಾದ ರಸ್ತೆ

ಗಾಜಿಯಾಬಾದ್‌ನಲ್ಲಿ ಸುರಂಗವಾದ ರಸ್ತೆ

ಗಾಜಿಯಾಬಾದ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ, ಕೆಲವೊಂದು ಕಡೆ ಸುರಂಗದಂತೆ ಮಣ್ಣುಗಳು ಕುಸಿದಿವೆ, ಜನಜೀವನ ಸಂಪೂರ್ಣವಾಗಿ ಅಸ್ಯವ್ಯಸ್ತವಾಗಿದೆ, ನೂರಾರು ಮನೆಗಳು ಬೀಳುವ ಅಪಾಯದಲ್ಲಿದೆ.

ವಿಪರೀತ ಮಳೆ, ನಿಲ್ಲೋಕೆ ಇಷ್ಟು ಜಾಗ ಸಿಕ್ಕರೆ ಸಾಕು

ವಿಪರೀತ ಮಳೆ, ನಿಲ್ಲೋಕೆ ಇಷ್ಟು ಜಾಗ ಸಿಕ್ಕರೆ ಸಾಕು

ನವದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳೋ ಸಂಪೂರ್ಣ ಜಲಾವೃತವಾಗಿದೆ, ಮುಷ್ಯರಿಗೆ ವಾಹನಗಳನ್ನು ತೆಗೆದುಕೊಂಡು ಹೋಗುವುದು ಹಾಗಿರಲಿ ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ, ಇನ್ನೂ ಪ್ರಾಣಿಗಳ ಗತಿಯೇನು ಎನ್ನುವುದರ ಬಗ್ಗೆ ಆಲೋಚಿಸಬೇಕಿದೆ. ಪುಟ್ಟ ಬೆಕ್ಕಿನ ಮರಿಯೊಂದು ಡಿವೈಡರ್‌ನಲ್ಲಿ ನಿಂತು ತಾತ್ಕಾಲಿಕವಾಗಿ ಆಶ್ರಯವನ್ನು ಪಡೆದಿರುವ ದೃಶ್ಯವನ್ನು ನೀವು ಈ ಚಿತ್ರದಲ್ಲಿ ನೋಡಬಹುದು.

English summary
An explosive wildfire tore through two small Northern California communities Thursday before reaching homes in Redding, destroying dozens of structures and a historic schoolhouse, and causing burns to civilians and firefighters, a state fire official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more