Taliban Fight: ಪಾಕಿಸ್ತಾನದ ಬುಡಕ್ಕೆ ಮತ್ತೊಮ್ಮೆ ಬಾಂಬ್ ಇಟ್ಟ ಅಫ್ಘಾನಿಸ್ತಾನ ಆರ್ಮಿ ತಾಲಿಬಾನ್!

ಪಾಕಿಸ್ತಾನ ಹೀನ ಬುದ್ಧಿ ತೋರಿಸುತ್ತಾ, ಅಕ್ಕಪಕ್ಕ ಇರುವ ಎಲ್ಲಾ ದೇಶಗಳನ್ನೂ ಎದುರು ಹಾಕಿಕೊಂಡು ಒದ್ದಾಡುತ್ತಿದೆ. ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡು ಈಗಾಗಲೇ ಸರಿಯಾಗಿ ಏಟು ತಿಂದಿರುವ ಪಾಪಿ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನ ಜೊತೆಯಲ್ಲೂ ಬಡಿದಾಡುತ್ತಾ ದೊಡ್ಡ ಅವಾಂತರ ಸೃಷ್ಟಿಸುತ್ತಿದೆ. ಇದರ ಪರಿಣಾಮ ತಾಲಿಬಾನ್ ಮತ್ತೊಮ್ಮೆ ಪಾಕಿಸ್ತಾನದ ಹೆಣ ಬೀಳಿಸಲು ಮುಂದೆ ನುಗ್ಗಿದ್ದು, ಗಡಿ ಭಾಗದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.

ಕೆಲವು ದಿನಗಳ ಹಿಂದಷ್ಟೇ ವಿವಾದಿತ ಪ್ರದೇಶ ಡ್ಯುರಾಂಡ್ ರೇಖೆ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆಯ ವಿರುದ್ಧ ಭೀಕರ ದಾಳಿ ನಡೆಸಿದ್ದ ತಾಲಿಬಾನ್, ಪಾಪಿ ಪಾಕಿಸ್ತಾನ ಪಡೆಗೆ ಸರಿಯಾಗಿ ಪಾಠ ಕಲಿಸಿತ್ತು. ನಂತರ ಸಂಧಾನ ನಡೆದು ದಿಢೀರ್ ಯುದ್ಧ ನಿಲ್ಲಿಸಲಾಗಿತ್ತು. 58 ಪಾಕಿಗಳ ಹೆಣ ಕೆಡವಿದ್ದ ತಾಲಿಬಾನ್ ಖಡಕ್ ಸಂದೇಶ ರವಾನಿಸಿತ್ತು. ಆದರೆ ಇಷ್ಟೆಲ್ಲಾ ನಡೆದ ನಂತರ ಕೂಡ ಸುಮ್ಮನೆ ಕೂರದ ಪಾಕಿಸ್ತಾನ ಮತ್ತೆ ಕಿರಿಕ್ ಮಾಡಿದ್ದು, ಅಫ್ಘಾನಿಸ್ತಾನ ಕೊಟ್ಟ ಏಟಿಗೆ ನಲುಗಿ ಹೋಗಿ ಶರಣಾಗಿಬಿಟ್ಟಿದೆ.

Dozens Killed and Injured in New Pakistan-Afghanistan Border Clashes

ಪಾಕಿಸ್ತಾನದ ಕೆಪಾಸಿಟಿ ಇಷ್ಟೇನಾ?

ಹೌದು, ಡ್ಯುರಾಂಡ್ ರೇಖೆ ಬಳಿ ಕೆಲವು ದಿನಗಳ ಹಿಂದೆ ಬಡಿದಾಡಿದ್ದ ಪಾಕಿಸ್ತಾನ ಈಗ ಕಂದಹಾರ್ ಬಳಿ ಕೂಡ ಫೈಟ್ ಮಾಡಿದೆ. ಅಕ್ಟೋಬರ್ 15 ಬುಧವಾರ ಬೆಳ್ಳಂಬೆಳಗ್ಗೆ ಶುರುವಾಗಿದ್ದ ಸಂಘರ್ಷದಲ್ಲಿ ಭಾರಿ ಹಿಂಸಾಚಾರ ಕೂಡ ನಡೆದು ಹೋಗಿದ್ದು, ಹತ್ತಾರು ಜನರ ಜೀವ ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲದೆ, ತಾಲಿಬಾನ್ ಕೊಟ್ಟ ಏಟಿಗೆ ನಲುಗಿ ಹೋದ ಪಾಕಿಸ್ತಾನ ಕೇವಲ 15 ನಿಮಿಷದಲ್ಲೇ ಸುಸ್ತಾಗಿ ಶರಾಗತಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಕೆಪಾಸಿಟಿ ಇಷ್ಟೇನಾ? ಅಂತಾ ಇದೀಗ ಸೋಷಿಯಲ್ ಮೀಡಿಯಾ ತುಂಬಾ ಟ್ರೋಲ್ ಮಾಡಲಾಗುತ್ತಿದೆ.

ಶತ್ರುಗಳಿಗೆ ಸರಿಯಾದ ಉತ್ತರ ನೀಡಿದ ತಾಲಿಬಾನ್!

ಜಗತ್ತಿನಲ್ಲಿ ಯಾರನ್ನು ಬೇಕಾದರೂ ನಂಬಬಹುದು, ಆದರೆ ಪಾಕಿಸ್ತಾನವನ್ನು ಇಡೀ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ. ಚೀನಾ ಕೂಡ ಈ ವಿಚಾರದಲ್ಲಿ ಪಾಕಿಸ್ತಾನ ಎಂಬ ನರಿ ಬುದ್ಧಿಯ ದೇಶವನ್ನ ನಂಬಲಾರದು. ತಿಂದ ಮನೆಗೇ ಬೆಂಕಿ ಇಡುವ ಬುದ್ಧಿ ಪಾಕಿಸ್ತಾನ ರಾಜಕಾರಣಿಗಳದ್ದು, ಹೀಗೆ ಪಾಕಿಸ್ತಾನ ತನ್ನ ನೆರೆ ದೇಶಗಳ ಜೊತೆ ಸುಖಾಸುಮ್ಮನೆ ಕಿರಿಕ್ ಮಾಡಿ ಫೈಟ್ ಮಾಡುವುದು ಮಾಮೂಲಿ. ಅದರಲ್ಲೂ ಇದೇ ರೀತಿ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ನೆಲದ ಮೇಲೂ ದಾಳಿ ಮಾಡಿ, ಕಿರಿಕ್ ಮಾಡಿತ್ತು ಪಾಪಿ ಪಾಕ್. ಇದೀಗ ಅದಕ್ಕೆಲ್ಲಾ ತಕ್ಕ ಉತ್ತರ ನೀಡಿದೆ ತಾಲಿಬಾನ್ ಪಡೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+