Trump: ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸುವ ದೇಶಗಳಿಗೆ ಶೇ 50ರಷ್ಟು ಸುಂಕದ ಬರೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಇರಾನ್ ಜೊತೆಗಿನ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಠಿಣ ವ್ಯಾಪಾರ ನೀತಿಯನ್ನು ಪ್ರಕಟಿಸಿದ್ದಾರೆ. ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ಯಾವುದೇ ದೇಶದ ಮೇಲೆ ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಶೇ 50ರ ಸುಂಕ (Tariff) ವಿಧಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ನಿರ್ಧಾರವು ಇರಾನ್‌ಗೆ ಆರ್ಥಿಕ ಮತ್ತು ಮಿಲಿಟರಿ ನೆರವು ನೀಡುತ್ತಿರುವ ರಾಷ್ಟ್ರಗಳನ್ನು ಕಟ್ಟಿಹಾಕುವ ನೇರ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ 'ಟ್ರೂತ್ ಸೋಶಿಯಲ್'ನಲ್ಲಿ (Truth Social) ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, "ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳ ವಿರುದ್ಧ ಈ ಕ್ರಮ ತಕ್ಷಣವೇ ಜಾರಿಗೆ ಬರಲಿದೆ. ಇದರಲ್ಲಿ ಯಾವುದೇ ವಿನಾಯಿತಿ ಅಥವಾ ಹೊರತುಪಡಿಸುವಿಕೆ ಇರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Donald Trump

ಇರಾನ್ ಈಗಾಗಲೇ ಯುರೇನಿಯಂ ಪುಷ್ಟೀಕರಣವನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿರುವ ಅವರು, ಒಂದು ಕಡೆ ಇರಾನ್ ಮೇಲೆ ಸುಂಕ ಮತ್ತು ನಿರ್ಬಂಧಗಳ ಸಡಿಲಿಕೆಯ ಬಗ್ಗೆ ಮಾತುಕತೆ ನಡೆಸುತ್ತಲೇ, ಮತ್ತೊಂದೆಡೆ ಅದಕ್ಕೆ ಶಸ್ತ್ರಾಸ್ತ್ರ ನೀಡುವ ರಾಷ್ಟ್ರಗಳಿಗೆ ಈ ದೊಡ್ಡ ಆರ್ಥಿಕ ಹೊಡೆತ ನೀಡಲು ಮುಂದಾಗಿದ್ದಾರೆ.

ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಸಂದರ್ಭದಲ್ಲಿ ರಷ್ಯಾ ಮತ್ತು ಚೀನಾವು ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿವೆ ಎಂಬ ವರದಿಗಳ ನಡುವೆ ಟ್ರಂಪ್ ಅವರ ಈ ಘೋಷಣೆ ಹೊರಬಿದ್ದಿದೆ. ಈ ಶೇ 50ರ ಸುಂಕವು ಆಯಾ ದೇಶಗಳ ಜಾಗತಿಕ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಅಮೆರಿಕದ ಅತಿದೊಡ್ಡ ಮಾರುಕಟ್ಟೆಯನ್ನು ಪ್ರವೇಶಿಸಲು ಆ ದೇಶಗಳು ಈಗ ದುಬಾರಿ ಬೆಲೆ ತೆರಬೇಕಾಗುತ್ತದೆ.

ಸದ್ಯಕ್ಕೆ ಹೋರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸಲು ಒಪ್ಪಿರುವ ಇರಾನ್ ಜೊತೆಗಿನ ಮಾತುಕತೆಗಳು ಇಸ್ಲಾಮಾಬಾದ್‌ನಲ್ಲಿ ಮುಂದುವರಿಯಲಿದ್ದು, ಈ ಸುಂಕದ ನೀತಿಯು ಮುಂಬರುವ ಶಾಂತಿ ಒಪ್ಪಂದದ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕದನ ವಿರಾಮಕ್ಕಾಗಿ ಇರಾನ್ ಭಿಕ್ಷೆ ಬೇಡಿದೆ: ಅಮೆರಿಕ

ಅಮೆರಿಕದ ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡುತ್ತಾ, ಇರಾನ್ ಮೇಲಿನ ಅಮೆರಿಕದ ವಿಜಯವನ್ನು ಕೊಂಡಾಡಿದ್ದಾರೆ. ಈ ಕ್ಷಣ ಸೃಷ್ಟಿಯಾಗಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೃಢ ನಿರ್ಧಾರಗಳೇ ಕಾರಣ. ಇರಾನ್ ಈ ಕದನ ವಿರಾಮಕ್ಕಾಗಿ ಅಮೆರಿಕದ ಮುಂದೆ ಭಿಕ್ಷೆ ಬೇಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ ಎಂದು ಹೆಗ್ಸೆತ್ ಗುಡುಗಿದ್ದಾರೆ.

ಅಮೆರಿಕ ಇರಾನ್ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ವಿವರಿಸಿದ ಅವರು, ಆಪರೇಷನ್ ಎಪಿಕ್ ಫ್ಯೂರಿ ಯುದ್ಧಭೂಮಿಯಲ್ಲಿ ಕಂಡ ಒಂದು ಐತಿಹಾಸಿಕ ಮತ್ತು ಅಪ್ರತಿಮ ಜಯವಾಗಿದೆ. ಈ ಕಾರ್ಯಾಚರಣೆಯು ಇರಾನ್‌ನ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಹೇಳಿದ್ದಾರೆ. ಅಮೆರಿಕದ ಈ ಭೀಕರ ದಾಳಿಯಿಂದಾಗಿ ಇರಾನ್ ಸೈನ್ಯವು ಮುಂದಿನ ಹಲವು ವರ್ಷಗಳ ಕಾಲ ಯುದ್ಧ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಇರಾನ್ ಸೇನೆಯನ್ನು ನಾವು ಸಂಪೂರ್ಣವಾಗಿ ಹತ್ತಿಕ್ಕಿದ್ದೇವೆ ಎಂದು ಹೆಗ್ಸೆತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+