ಉಕ್ರೇನ್-ರಷ್ಯಾ ಯುದ್ಧದ ಬೆನ್ನಲ್ಲೇ ತೈವಾನ್ ಮೇಲೆ ಚೀನಾ ಕಣ್ಣು!

ಕೀವ್, ಮಾರ್ಚ್ 2: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರದಲ್ಲಿ ತೈವಾನ್ ಮೇಲೆ ಮುಂದಿನ ಆಕ್ರಮಣ ನಡೆಯಬಹುದು ಎಂದು ಯುನೈಟೆಡ್ ಸ್ಟೇಟ್ಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿನ್ ಸಂತೋಷದಿಂದ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ವಿರುದ್ಧ ಡೊನಾಲ್ಡ್ ಟ್ರಂಪ್ ನೇರ ವಾಗ್ದಾಳಿ ನಡೆಸಿದರು. ತೈವಾನ್‌ನ ಸಂಭಾವ್ಯ ಆಕ್ರಮಣವನ್ನು ತಾನು ನಿರೀಕ್ಷಿಸುತ್ತಿದ್ದೇನೆ. "ಏಕೆಂದರೆ, ಯುನೈಟೆಡ್ ಸ್ಟೇಟ್ಸ್ ಎಷ್ಟು ಮೂರ್ಖತನದಿಂದ ನಡೆಸಲ್ಪಡುತ್ತಿದೆ," ಎಂದು ಟ್ರಂಪ್ ಹೇಳಿದರು.

Donald Trump warned that Taiwan may be the next invasion after Ukraine Russia War

"ನಮ್ಮ ನಾಯಕರೇ ಅಸಮರ್ಥರು":

"ನಮ್ಮ ನಾಯಕರು ಅಸಮರ್ಥರು ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. ಆದ್ದರಿಂದಲೇ ಅವರು ಇದನ್ನೆಲ್ಲ ಮಾಡುತ್ತಿದ್ದಾರೆ, ಇದು ಅವರ ಸಮಯವಾಗಿದೆ," ಎಂದು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷವನ್ನು ಚೀನಾ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಳೆದ ವರ್ಷ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಸ್ಥಳಾಂತರಿಸುವಿಕೆಯನ್ನು ಯುನೈಟೆಡ್ ಸ್ಟೇಟ್ಸ್ ನಿರ್ವಹಿಸಿದ ರೀತಿಯಿಂದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸುಳಿವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. "ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೆಚ್ಚಿನ ಗುಪ್ತಚರ ಮೂಲವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರು ಅಫ್ಘಾನಿಸ್ತಾನದಲ್ಲಿ ಏನಾಯಿತು ಎಂಬುದನ್ನೂ ನೋಡಿದ್ದಾರೆ.

ಅಫ್ಘಾನಿಸ್ತಾನವನ್ನು ತೊರೆದಿದ್ದನ್ನು ಚೀನಾ ನೋಡಿದೆ:

"ನಾವು ಅಫ್ಘಾನಿಸ್ತಾನದಿಂದ ಹೊರ ಬಂದಿರುವುದನ್ನು ಚೀನಾ ನೋಡಿದೆ. ನಮ್ಮ ಪ್ರಜೆಗಳನ್ನೂ ಸಹ ಅಲ್ಲಿಯೇ ಬಿಟ್ಟು ಬಂದಿದ್ದು, ಇಂದಿಗೂ ಆ ಜನರು ಹೊರ ಬರುವುದಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಕ್ಸಿ ಜಿನ್ ಪಿಂಗ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಮಗೆ ಬೇಕಾಗಿರುವುದನ್ನು ಮಾಡುವುದಕ್ಕೆ ಅವರಿಗೆ ಇದು ಸದಾವಕಾಶವಾಗಿದೆ," ಎಂದು ಡೊನಾಲ್ಡ್ ಟ್ರಂಪ್ ದೂಷಿಸಿದ್ದಾರೆ.

ರಷ್ಯಾ ದಾಳಿಯನ್ನು ಖಂಡಿಸಿದ ತೈವಾನ್:

ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ತೀವ್ರವಾಗಿ ಖಂಡಿಸಿದ್ದಾರೆ. ರಷ್ಯಾದ ಆಕ್ರಮಣದಿಂದ ಉಕ್ರೇನಿಯನ್ ಸಾರ್ವಭೌಮತ್ವ ಉಲ್ಲಂಘನೆ ಆಗಿದ್ದು, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ನಾಶಪಡಿಸಿದೆ ಎಂದು ಹೇಳಿದ್ದಾರೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯು ತೈವಾನ್‌ಗಿಂತ ಮೂಲಭೂತವಾಗಿ ಭಿನ್ನವಾಗಿದೆ. ತೈವಾನ್ ತನ್ನದೇ ಆದ ವಿಶಿಷ್ಟ ಭೌಗೋಳಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಯಾವುದೇ ಆಕಸ್ಮಿಕಗಳಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+