ಡೊನಾಲ್ಡ್ ಟ್ರಂಪ್ ಜೊತೆ ಝೆಲೆನ್‌ಸ್ಕಿ ಚರ್ಚೆ: ಉಕ್ರೇನ್ ಅಧ್ಯಕ್ಷನಿಗೆ ಧೈರ್ಯ ಹೇಳಿದ ಟ್ರಂಪ್
ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ಅಧ್ಯಕ್ಷರಾಗಿ ಮತ್ತೊಮ್ಮೆ ಅಧಿಕಾರ ಹಿಡಿಯುವ ಬಗ್ಗೆ ಚಿಂತನೆಯಲ್ಲಿ ಇದ್ದಾರೆ. ಇದಕ್ಕಾಗಿ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರ ವಿರುದ್ಧ ಚುನಾವಣಾ ಸೆಣೆಸಾಟ ನಡೆಸುತ್ತಿದ್ದಾರೆ. ಹೀಗಿದ್ದಾಗ ಅಮೆರಿಕದ ನೆಲದಲ್ಲಿ ಮಹತ್ವದ ಘಟನೆಯೊಂದು ಸಂಭವಿಸಿದೆ. ರಷ್ಯಾ & ಉಕ್ರೇನ್ ಯುದ್ಧ ನಡೆಯುತ್ತಿರುವ ಈ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ಝೆಲೆನ್‌ಸ್ಕಿ ಚರ್ಚೆ ನಡೆಸಿದ್ದು, ಘೋರ ಯುದ್ಧಕ್ಕೆ ಬ್ರೇಕ್ ಹಾಕುವ ಮಾತು ಕೊಟ್ಟಿದ್ದಾರೆ!
ಹೌದು, ಅಮೆರಿಕ ಮಾಜಿ ಅಧ್ಯಕ್ಷರು ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭೇಟಿ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ನೆಮ್ಮದಿ ಪಡೆದಿದ್ದಾರೆ. ಅರೆರೆ ಡೊನಾಲ್ಡ್ ಟ್ರಂಪ್ ಜೊತೆ ಭೇಟಿ ಮಾಡುವುದಕ್ಕು ವೊಲೊಡಿಮಿರ್ ಝೆಲೆನ್‌ಸ್ಕಿ ನೆಮ್ಮದಿಯಾಗಿ ಇರುವುದಕ್ಕೂ ಕಾರಣ ಏನು ಅಂದ್ರಾ? ಇಲ್ಲಿ ಕಾರಣ ಇದೆ. ಆ ನೆಮ್ಮದಿ ತರುವ ವಿಚಾರವು ಏನಪ್ಪಾ ಅಂದ್ರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಪಡೆದಿರುವ ಟ್ರಂಪ್ ಯುದ್ಧ ನಿಲ್ಲಿಸುವ ಭರವಸೆ ನೀಡಿದ್ದಾರಂತೆ. ಖುದ್ದು ಈ ಬಗ್ಗೆ ಡೊನಾಲ್ಡ್ ಟ್ರಂಪ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಯುದ್ಧ ನಿಲ್ಲಿಸುವೆ ಎಂದ ಟ್ರಂಪ್!
ಡೊನಾಲ್ಡ್ ಟ್ರಂಪ್ ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಜೊತೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ರಷ್ಯಾ & ಉಕ್ರೇನ್ ಯುದ್ಧಕ್ಕೆ ತಕ್ಷಣ ಬ್ರೇಕ್ ಹಾಕುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಾಗೇ, ಮತ್ತೊಂದು ಕಡೆ ಇದೇ ಸಮಯವನ್ನು ಕಮಲಾ ಹ್ಯಾರಿಸ್ ವಿರುದ್ಧ ಆರೋಪಕ್ಕೂ ವೇದಿಕೆ ಮಾಡಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್. ರಷ್ಯಾ ಹಾಗೂ ಉಕ್ರೇನ್ ವಾರ್ ನಿಲ್ಲಿಸಲು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋತು ಹೋಗಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಇದೀಗ ಟ್ರಂಪ್.
ರಷ್ಯಾ ಸೇನೆಯಿಂದ ಭೀಕರ ದಾಳಿ
ಉಕ್ರೇನ್ ಸೇನೆಯ ಬುಡ ಅಲುಗಾಡಿಸಲು ರಷ್ಯಾ ಪ್ರತಿಬಾರಿ ಕೂಡ ವಿಚಿತ್ರ ವಿಚಿತ್ರ ಐಡಿಯಾ ಹುಡುಕುತ್ತದೆ. ಈ ಬಾರಿ ಉಕ್ರೇನ್‌ನ ಪ್ರಮುಖ ವಿದ್ಯುತ್ ಸಂಪರ್ಕ ಜಾಲವನ್ನೇ ಧೂಳ್ ಧೂಳ್ ಮಾಡಿರುವ ರಷ್ಯಾ ಸೇನೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ಬಾಂಬ್ ಇಟ್ಟು ಉಡಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಉಕ್ರೇನ್ ರಾಜಧಾನಿ ಕೀವ್ ಮೇಲೆ ಡ್ರೋನ್‌ಗಳ ದಾಳಿ ತೀವ್ರವಾಗಿದ್ದು, ರಷ್ಯಾ ಬಳಿ ಇರುವ ಕ್ಷಿಪಣಿ ವ್ಯವಸ್ಥೆ ಕಂಡು ಉಕ್ರೇನ್ ಕಂಗಾಲಾಗಿ ಹೋಗಿದೆ. ಇದೇ ಕಾರಣಕ್ಕೆ ರಷ್ಯಾ ಹಾರಿಸಿದ್ದ ಕ್ಷಿಪಣಿಗಳನ್ನು ಹೊಡೆದು ಉರುಳಿಸಲು ಈಗ ಉಕ್ರೇನ್ ರಕ್ಷಣಾ ಪಡೆಗಳು 5 ಗಂಟೆ ಪರದಾಡಿವೆ ಎನ್ನಲಾಗಿದೆ.












Click it and Unblock the Notifications