ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕಾರ

Posted By:
Subscribe to Oneindia Kannada

ವಾಷಿಂಗ್ಟನ್ ಡಿಸಿ, ಜನವರಿ 20 : ಬರಾಕ್ ಒಬಾಮ ಆಡಳಿತ ಅವಧಿ ಮುಗಿದು, ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಗಾದಿ ಏರುತ್ತಾರೆ. ಮುಂದಿನ ನಾಲ್ಕು ವರ್ಷ ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷ ಪದವಿ ಸ್ವೀಕಾರ ಸಮಾರಂಭದ ನೇರ ಮಾಹಿತಿಗಳು ನಿಮ್ಮೆದುರಿಗಿವೆ.

ವಾಷಿಂಗ್ಟನ್ ನ ವೈಟ್ ಹೌಸ್ ಮೇಲೆ ಇಂದು ಜಗತ್ತಿನ ಎಲ್ಲ ಮಾಧ್ಯಮಗಳು ಕಣ್ಣು ನೆಟ್ಟು ಕುಂತಿವೆ. ಯಾರು ಬಂದರು, ಏನಾಯಿತು ಮತ್ತಿತರ ವಿವರಗಳು ನಿಮ್ಮೆದುರಿಗೆ ಸಿಗಲಿವೆ. ಕೈ ಬೆರಳ ತುದಿಯಲ್ಲಿ ಆ ಎಲ್ಲ ಮಾಹಿತಿ ನಿಮ್ಮ ಪಾಲಿಗೆ.

ಡೊನಾಲ್ಡ್ ಟ್ರಂಪ್-ಅಮೆರಿಕದ ನಲವತ್ತೈದನೇ ಅಧ್ಯಕ್ಷ. ಪದವಿ ಸ್ವೀಕಾರ ಸಮಾರಂಭದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.[ಟ್ರಂಪ್ ಭವಿಷ್ಯ : ಮೇಟಿಯಂತಹ ಪ್ರಕರಣ ವೈಟ್ ಹೌಸ್ ಮುತ್ತಿಡಲಿವೆ]

Donald Trump set to take oath as America president

* ಡೊನಾಲ್ಡ್ ಟ್ರಂಪ್ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ

* ಉಪ ರಾಷ್ಟ್ರಪತಿಯಾಗಿ ಮೈಕ್ ಪೆನ್ಸ್ ಪ್ರಮಾಣ ವಚನ

* ಉದ್ಘಾಟನಾ ಸಮಿತಿ ಅಧ್ಯಕ್ಷೆ ಭಾಷಣದ ನಂತರ ಪ್ರಾರ್ಥನೆ ಆರಂಭ

* ಇನ್ನು ಕೆಲ ನಿಮಿಷಗಳಲ್ಲಿ ಡೊನಾಲ್ಡ್ ಟ್ರಂಪ್ ಪದವಿ ಪ್ರಮಾಣ

* ವಾಷಿಂಗ್ಟನ್ ನಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ತರಲು ಪೊಲೀಸರಿಂದ ಪೆಪ್ಪರ್ ಸ್ಪ್ರೇ ಬಳಕೆ

* ರೆಸ್ಟೋರೆಂಟ್ ಗಾಜುಗಳನ್ನು ಪುಡಿ ಮಾಡಿದ ಆಕ್ರೋಶಿತ ಜನರು

* ಕ್ಯಾಪಿಟಾಲ್ ಹಾಲ್ ಗೆ ಟ್ರಂಪ್ ಹಾಗೂ ಒಬಾಮ ಆಗಮನ

* ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷರು ಹಾಗೂ ಅವರ ಪತ್ನಿಯರ ಉಪಸ್ಥಿತಿ

* ವೈಟ್ ಹೌಸ್ ನಿಂದ ಹೊರಟ ಮಿಷೆಲ್ ಒಬಾಮ, ಮೆಲಾನಿಯಾ ಟ್ರಂಪ್

* ಅಮೆರಿಕ ಸೇರಿದಂತೆ ವಿಶ್ವದ ವಿವಿಧೆಡೆ ಟ್ರಂಪ್ ವಿರೋಧಿ ಪ್ರತಿಭಟನೆ

* ಕಾರ್ಯಕ್ರಮಕ್ಕೆ ಬಿಲ್ ಹಾಗೂ ಹಿಲರಿ ಕ್ಲಿಂಟನ್ ಆಗಮನ

* ಪದವಿ ಪ್ರಮಾಣ ಸಮಾರಂಭಕ್ಕೆ ಪ್ರತಿಭಟನೆ ಕಾವು

* ಮಾಜಿ ರಾಷ್ಟ್ರಾಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಪತ್ನಿ ಲೌರಾ ಆಗಮನ

Trump-Obama

* ವೈಟ್ ಹೌಸ್ ನಲ್ಲಿ ಟ್ರಂಪ್ ಗೆ ಸ್ವಾಗತ ಕೋರಿದ ಒಬಾಮ

* ವೈಟ್ ಹೌಸ್ ಗೆ ಬಂದ ಮೈಕ್ ಪೆನ್ಸ್ ಗೆ ಸ್ವಾಗತ ಕೋರಿದ ಜೋ ಬಿಡೆನ್ ದಂಪತಿ

* ಅಮೆರಿಕನ್ನರಿಗೆ ಧನ್ಯವಾದ ಹೇಳಿ ಅಂತಿಮವಾಗಿ ಓವಲ್ ಹೌಸ್ ನಿಂದ ಹೊರಟ ಬರಾಕ ಒಬಾಮ

* ಸೇಂಟ್ ಜಾನ್ ಚರ್ಚ್ ನಿಂದ ವೈಟ್ ಹೌಸ್ ಗೆ ಹೊರಟ ಟ್ರಂಪ್

* ಬರಾಕ್ ಒಬಾಮರನ್ನು ವೈಟ್ ಹೌಸ್ ನಲ್ಲಿ ಭೇಟಿ ಮಾಡಲಿರುವ ಟ್ರಂಪ್ ದಂಪತಿ

* ಲಂಡನ್, ಗ್ಲಾಸ್ಗೋ ಮತ್ತು ಪ್ಯಾರಿಸ್ ನಲ್ಲಿ ಟ್ರಂಪ್ ವಿರೋಧಿ ಪ್ರತಿಭಟನೆ

* ನಿಮ್ಮ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಅತಿ ದೊಡ್ಡ ಗೌರವ: ಬರಾಕ್ ಒಬಾಮ

* ನ್ಯೂಯಾರ್ಕ್ 10th ಸ್ಟ್ರೀಟ್ ನಲ್ಲಿ ಟ್ರಂಪ್ ಬೆಂಬಲಿಗರನ್ನು ತಡೆದ ಪ್ರತಿಭಟನಾನಿರತರು

* ಬ್ಲೇರ್ ಹೌಸ್ ನಿಂದ ಹೊರಟ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್

* ವಾಷಿಂಗ್ಟನ್ ನಲ್ಲಿ ಎಂದಿಗಿಂತ ಕಡಿಮೆ ಇರುವ ವಾಹನ ಸಂಚಾರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Donald Trump is to be sworn in as 45th president of the US.
Please Wait while comments are loading...