ವಾರ್ಷಿಕ ಸಂಬಳ 1 ಡಾಲರ್ ಮಾತ್ರ ಪಡೆಯುವೆ: ಟ್ರಂಪ್

Posted By:
Subscribe to Oneindia Kannada

ನ್ಯೂಯಾರ್ಕ್, ನವೆಂಬರ್ 15: ಡೊನಾಲ್ಡ್ ಟ್ರಂಪ್ ಅವರು 'ಯುಎಸ್ ಅಧ್ಯಕ್ಷರಾಗಿ ಸಿಗುವ ಸಂಬಳವನ್ನು ಮುಟ್ಟುವುದಿಲ್ಲ' ಎಂಬ ಸುದ್ದಿಗೆ ಟ್ರಂಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರಿಗೆ ಸಿಗುವ ಲಕ್ಷ ಲಕ್ಷ ಡಾಲರ್ ಸಂಬಳವನ್ನು ಪಡೆಯದೆ ವಾರ್ಷಿಕ 1 ಡಾಲರ್ ಸಂಬಳ ಪಡೆಯುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಈ ಹಿಂದೆ ಸಂಬಳ ಪಡೆಯುವುದಿಲ್ಲ ಎಂದು ಹೇಳಿದ್ದೀರಿ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ 70 ವರ್ಷ ವಯಸ್ಸಿನ ಟ್ರಂಪ್, 'ನಾನು ಸಂಬಳ ಪಡೆಯುವುದಿಲ್ಲ' ಎಂದಿದ್ದಾರೆ. [ಯುಎಸ್ ಅಧ್ಯಕ್ಷರಾಗಿ ಸಿಗುವ ಸಂಬಳವನ್ನು ಟ್ರಂಪ್ ಮುಟ್ಟಲ್ವಂತೆ]

Donald Trump says will take $1 as salary with no vacations

ಅಮೆರಿಕದ ಅಧ್ಯಕ್ಷರಿಗೆ ಸಿಗುವ ವಾರ್ಷಿಕ ವೇತನ 4 ಲಕ್ಷ ಡಾಲರ್‌ (ಅಂದಾಜು 2 ಕೋಟಿ 70 ಲಕ್ಷ ರು ). ಆದರೆ, ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೇವಲ ಒಂದು ಡಾಲರ್‌ (67 ರು ಬದಲಾವಣೆಗೆ ಒಳಪಟ್ಟಿದೆ) ವೇತನ ಪಡೆಯುವುದಾಗಿ ಘೋಷಿಸಿದ್ದಾರೆ. [WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್]

'ಕಾನೂನಿನ ಪ್ರಕಾರ ವೇತನ ಪಡೆಯಬೇಕಾಗಿದೆ. ಹೀಗಾಗಿ ನಾನು ವಾರ್ಷಿಕ ಒಂದು ಡಾಲರ್‌ ವೇತನ ಪಡೆಯುತ್ತೇನೆ' ಎಂದು ಟ್ರಂಪ್‌ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಜನ ಸಾಮಾನ್ಯರಿಗೆ ತೆರಿಗೆ ಹೊರೆ ಕಡಿಮೆ ಮಾಡುವುದು, ಆರೋಗ್ಯ ಭದ್ರತೆ ನನ್ನ ಮುಖ್ಯ ಆದ್ಯತೆಯಾಗಿದೆ. ಪ್ರವಾಸ ರಜೆಯನ್ನು ಮೊಟಕುಗೊಳಿಸಲು ನಿರ್ಧರಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಆದರೆ, ಈ ಐತಿಹಾಸಿಕ ನಿರ್ಧಾರ ಕೈಗೊಂಡ ಅಮೆರಿಕ ಅಧ್ಯಕ್ಷರ ಪೈಕಿ ಡೊನಾಲ್ಡ್ ಟ್ರಂಪ್ ಮೊದಲಿಗರಲ್ಲ. ಟ್ರಂಪ್ ಅವರಿಗಿಂತ ಮೊದಲು ಹರ್ಬಟ್ ಹೂವರ್ ಹಾಗೂ ಜಾನ್ ಎಫ್ ಕೆನಡಿ ಅವರು ತಮಗೆ ಸಿಗುತ್ತಿದ್ದ ಸಂಬಳವನ್ನು ಪೂರ್ತಿಯಾಗಿ ದಾನ ಧರ್ಮಕ್ಕೆ ವಿನಿಯೋಗಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US President-elect Donald Trump has said he would take USD 1 as his salary a year and not the USD 400,000 that comes with the US president's job and will refrain from going on any vacation.
Please Wait while comments are loading...