Donald Trump: ಇರಾನ್ ಕಡೆಗೆ ಮತ್ತಷ್ಟು ಯುದ್ಧ ನೌಕೆಗಳು, ಭೀಕರ ಯುದ್ಧ ಭೀತಿಯಲ್ಲಿ ಮಧ್ಯಪ್ರಾಚ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ನೇರವಾಗಿ ವಾರ್ನಿಂಗ್ ಕೊಟ್ಟು, ಈಗ ತಮ್ಮ ಸೇನೆಯಲ್ಲಿ ಇರುವ ಬಲಿಷ್ಠ ನೌಕೆಗಳನ್ನು ಆ ಕಡೆಗೆ ನುಗ್ಗಿಸುತ್ತಿದ್ದಾರೆ. ಈಗಾಗಲೇ ಯುದ್ಧ ಭೀತಿ & ಹಿಂಸಾಚಾರದ ಆತಂಕ ಎದುರಾಗಿರುವ ಸಮಯದಲ್ಲೇ ಟ್ರಂಪ್ ಈ ಪ್ರಮುಖ ನಿರ್ಧಾರ ಕೈಗೊಂಡು ಶತ್ರು ದೇಶಕ್ಕೆ ನಡುಕ ಹುಟ್ಟುವಂತೆ ಮಾಡಿದ್ದಾರೆ. ಈಗಾಗಲೇ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಎಂಬ ಬೃಹತ್ ಸೇನಾ ಹಡಗು ಅಮೆರಿಕ ಕಡೆಯಿಂದ ಹೊರಟು, ಇರಾನ್ ತಲುಪಿದೆ. ಇದು ಸಾಲದು ಎಂಬಂತೆ ಇನ್ನಷ್ಟು ಯುದ್ಧ ನೌಕೆಗಳನ್ನು ಕಳುಹಿಸಲು ಸಜ್ಜಾಗಿದ್ದಾರಂತೆ ಡೊನಾಲ್ಡ್ ಟ್ರಂಪ್ ಅವರು.
ಇರಾನ್ ಬೆನ್ನಿಗೆ ನಿಂತು ಚೀನಾ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ. ವಿಶ್ವಸಂಸ್ಥೆ ಚೀನಾ ರಾಯಭಾರಿ ಫು ಕಾಂಗ್ ಮಹತ್ವದ ಹೇಳಿಕೆಯನ್ನ ಇತ್ತೀಚೆಗೆ ನೀಡಿದ್ದರು. ಪಶ್ಚಿಮ ಏಷ್ಯಾ ಪ್ರಮುಖ ಶಕ್ತಿ ಪೈಪೋಟಿ ಪರಿಣಾಮ ಕುಸ್ತಿಯ ನೆಲ ಆಗಬಾರದು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದರು. ಅಲ್ಲದೆ ಯಾವುದೇ ಮಿಲಿಟರಿ ಸಾಹಸವು ಒಂದು ನಿರ್ದಿಷ್ಟ ಪ್ರದೇಶವನ್ನ ಪ್ರಪಾತಕ್ಕೆ ತಳ್ಳುತ್ತದೆ ಎಂದಿತ್ತು ಚೀನಾ. ಹೀಗೆ ಚೀನಾ ಹೇಳಿಕೆ ಬೆನ್ನಲ್ಲೇ ತಮ್ಮ ಕೋಪ ಹೆಚ್ಚಿಸಿಕೊಂಡಿರುವ ಟ್ರಂಪ್ ಅವರು ಮತ್ತಷ್ಟು ನೌಕೆಗಳನ್ನು ಕಳುಹಿಸಿದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ಪ್ರತಿಷ್ಠೆ
ಇರಾನ್ ಪದೇ ಪದೇ ತಮ್ಮ ಮಾತು ಕೇಳುತ್ತಿಲ್ಲ, ತಮಗೆ ಎದುರು ನಿಂತು ಉತ್ತರ ಕೊಡುತ್ತಿದೆ ಎಂಬ ವಿಚಾರ ಅಮೆರಿಕದ ನಿದ್ದೆಗೆಡಿಸಿದೆ. ಅದರಲ್ಲೂ ಪರಮಾಣು ಕಾರ್ಯಕ್ರಮಗಳ ವಿಚಾರದಲ್ಲಿ ಟ್ರಂಪ್ ಮಾತು ಕೇಳದೆ ಪದೇ ಪದೇ ಇರಾನ್ ತನಗೆ ತಿಳಿದಿದ್ದನ್ನೇ ಮಾಡುತ್ತಿದೆ. ಹೀಗಾಗಿ ಅಮೆರಿಕ & ಇರಾನ್ ನಡುವೆ ದೊಡ್ಡ ಮಟ್ಟದ ದ್ವೇಷ ಬೆಳೆದಿದೆ. ಹೀಗಿದ್ದರೂ ಇರಾನ್ ಮಾತ್ರ ಪರಮಾಣು ಒಪ್ಪಂದಕ್ಕೆ ಈಗ ಸಿದ್ಧವಿಲ್ಲ, ಅಕಸ್ಮಾತ್ ಇರಾನ್ ಬಳಿ ಪರಮಾಣು ಬಾಂಬ್ ಬಂದುಬಿಟ್ಟರೆ ಅದು ಮಧ್ಯಪ್ರಾಚ್ಯ ಭಾಗಕ್ಕೆ ಆಪತ್ತು ಎಂಬುದು ಅಮೆರಿಕ ಮತ್ತು ಇಸ್ರೇಲ್ ಆರೋಪ. ಇಷ್ಟೆಲ್ಲದರ ನಡುವೆ ಈಗ ಭೀಕರ ಯುದ್ಧ ಭೀತಿ ಆವರಿಸಿದೆ. ಮತ್ತೊಂದು ಕಡೆ ಈ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರತಿಷ್ಠೆ ಪ್ರಶ್ನೆ ಕೂಡ ಎದುರಾಗಿದೆ.












Click it and Unblock the Notifications