Trump's Economic War: ಅಮೆರಿಕದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಭುಗಿಲೆದ್ದ ಆಕ್ರೋಶ & ಭಾರತಕ್ಕೆ ಅಮೆರಿಕನ್ನರ ಬೆಂಬಲ!

ಭಾರತದ ವಿರುದ್ಧ ಭಾರಿ ತೆರಿಗೆ ಹೇರಿಕೆ ಮಾಡುವ ಮೂಲಕ ನಾನು ಗೆದ್ದೆ, ನಾನು ಗೆದ್ದೆ ಅಂತಾ ಮೆರೆಯುತ್ತಾ ಇದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಭಾರಿ ದೊಡ್ಡ ಹಿನ್ನಡೆ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ & ಭಾರತೀಯರ ಬೆಂಬಲ ಪಡೆದುಕೊಂಡೇ ಚುನಾವಣೆ ಗೆದ್ದಿದ್ದರು. ಅಲ್ಲದೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಕ್ಕೆ ನಿಂತಿದ್ದೇ ಭಾರತೀಯ ಸಮುದಾಯ. ಈ ರೀತಿ ಭಾರತೀಯರ ಬಲ ಪಡೆದು ಗೆದ್ದಿದ್ದ ಟ್ರಂಪ್ ಈಗ ಭಾರತಕ್ಕೆ ಕಾಟ ಕೊಡಲು ಶುರು ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಚೀನಾ, ರಷ್ಯಾ ಸೇರಿದಂತೆ ಜಗತ್ತಿನ ಶಕ್ತಿಶಾಲಿ ದೇಶಗಳೆಲ್ಲಾ ತಿರುಗಿ ಬಿದ್ದಿವೆ. ಯಾಕಂದ್ರೆ ವಿವಾದ ಪುರುಷ ಡೊನಾಲ್ಡ್ ಟ್ರಂಪ್ ಆರ್ಥಿಕ ಯುದ್ಧ ಘೋಷಣೆ ಮಾಡಿದ್ದು, ಪದೇ ಪದೇ ಭಾರತವನ್ನೇ ಟಾರ್ಗೆಟ್ ಮಾಡಿ ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದ್ರಲ್ಲೂ ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಶೇಕಡಾ 50 ಅನುಪಾತದಲ್ಲಿ ತೆರಿಗೆ ಹೇರಿಕೆ ಮಾಡಿದ್ದರು. ಅಂದ್ರೆ ಭಾರತ ರಫ್ತು ಮಾಡುವ ಯಾವುದೇ ವಸ್ತು ಮೇಲೆ ಕನಿಷ್ಠ ಶೇಕಡಾ 50 ಅನುಪಾತದಲ್ಲಿ ಟ್ಯಾಕ್ಸ್ ಕಟ್ಟುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ ಸ್ವತಃ ಅಮೆರಿಕದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಭುಗಿಲೆದ್ದಿದೆ ಆಕ್ರೋಶ.

Donald Trump Faces Increasing Pressure Over Tariff Dispute

ಡೊನಾಲ್ಡ್ ಟ್ರಂಪ್ ಭಾರಿ ಎಡವಟ್ಟು

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಈಗ ಭಾರತ & ರಷ್ಯಾ ನಡುವಿನ ಸ್ನೇಹ ಸಂಬಂಧ ಸಹಿಸಿಕೊಳ್ಳಲು ಆಗುತ್ತಿಲ್ಲ. ರಷ್ಯಾ ಜೊತೆಗೆ ಭಾರತ ಉತ್ತಮ ಸ್ನೇಹ ಇಟ್ಟುಕೊಂಡು, ತೈಲ ಖರೀದಿ ಮಾಡುತ್ತಿದ್ದ ಕಾರಣವನ್ನೇ ಟ್ರಂಪ್ ಮುಂದೆ ಇಟ್ಟುಕೊಂಡು ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿದ ಆರೋಪವೂ ಇದೀಗ ಕೇಳಿ ಬರುತ್ತಿದೆ. ಹೀಗೆ ಭಾರತದ ಮೂಲಕ ಅಮೆರಿಕಗೆ ರಫ್ತು ಆಗುವ ವಸ್ತುಗಳ ಮೇಲೆ ಮೊದಲಿಗೆ ಶೇ. 25 ರಷ್ಟು ಟ್ಯಾಕ್ಸ್ ಹಾಕಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಸುಂಕ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಶೇಕಡಾ 25 ರಷ್ಟು ಟ್ಯಾಕ್ಸ್ ಹಾಕುವ ಮೂಲಕ ಒಟ್ಟು ಶೇ. 50 ತೆರಿಗೆ ಕಟ್ಟುವಂತೆ ಮಾಡಿದ್ದಾರೆ. ಈ ಬಗ್ಗೆ ಇದೀಗ ಸ್ವತಃ ಅಮೆರಿಕದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ಭುಗಿಲೆದ್ದು, ಅಮೆರಿಕನ್ನರು ಭಾರತದ ಬೆಂಬಲಕ್ಕೆ ನಿಂತಿದ್ದಾರೆ!

ಬ್ರೆಜಿಲ್ ಅಧ್ಯಕ್ಷರಿಂದ ಭಾರತಕ್ಕೆ ಬೆಂಬಲ

ಭಾರತಕ್ಕೆ ಬೆಂಬಲ ನೀಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಮೆರಿಕನ್ನರು ಮಾತನಾಡುತ್ತಿದ್ದಾರೆ, ಹಾಗೇ ಟ್ರಂಪ್ ವಿರುದ್ಧ ಭಾರಿ ಆಕ್ರೋಶ ಈಗ ಮೊಳಗಿದೆ. ಮತ್ತೊಂದು ಕಡೆ ಭಾರತದ ರೀತಿ ಬ್ರೆಜಿಲ್ ವಿರುದ್ಧ ಕೂಡ ಟ್ರಂಪ್ ತೆರಿಗೆಯ ಯುದ್ಧ ಶುರು ಮಾಡಿದ್ದಾರೆ. ಈ ಬಗ್ಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗುಡುಗಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ನಾವು ಯಾವುದೇ ಕಾರಣಕ್ಕೂ ಡೊನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿರುವ ಹೆಚ್ಚಿನ ತೆರಿಗೆ ಬಗ್ಗೆ ಕೂಡ ಡೋಂಟ್ ಕೇರ್ ಎನ್ನುವಂತೆ ರಿಯಾಕ್ಷನ್ ಕೊಟ್ಟಿದ್ದಾರೆ. ಇದೇ ವೇಳೆ ಬ್ರೆಜಿಲ್‌ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಫೋನ್ ಮೂಲಕ ಮಾತುಕತೆ ನಡೆಸಿ ಭಾರತಕ್ಕೆ ಬೆಂಬಲವನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಟ್ರಂಪ್‌ಗೆ ಮತ್ತೆ ಮತ್ತೆ ಮುಖಭಂಗವಾಗುತ್ತಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+