Donald Trump: ಡೊನಾಲ್ಡ್ ಟ್ರಂಪ್ ಮಾಡಿದ್ದ ಅವಮಾನಕ್ಕೆ ಉತ್ತರ ಕೊಡ್ತಾರಾ ಜೋ ಬೈಡನ್?

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಸವಾರಿ ಆರಂಭಿಸಲು ಕೌಂಟ್‌ಡೌನ್ ಶುರುವಾಗಿದೆ. ಡೊನಾಲ್ಡ್ ಟ್ರಂಪ್ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಬೀಗಿ, ಇದೀಗ ಜೋ ಬೈಡನ್ ಅವರಿಂದ ಅಧಿಕಾರ ಹಸ್ತಾಂತರ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ. ನಾಳೆ ಇಷ್ಟೊತ್ತಿಗೆ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ. ಆದರೆ ಈ ಸಮಯದಲ್ಲೇ ಬಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ!

ಹೌದು, ಡೊನಾಲ್ಡ್ ಟ್ರಂಪ್ & ಜೋ ಬೈಡನ್ ನಡುವೆ ಕಳೆದ 6 ವರ್ಷಗಳಿಂದಲೂ ಆರದ ಕಿಚ್ಚು ಹೊತ್ತಿಕೊಂಡಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಆಗಿ ಜೋ ಬೈಡನ್ ಆಯ್ಕೆ ಆಗಿದ್ದು ಮತ್ತು ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡುವುದು ಕನ್ಫರ್ಮ್ ಆದ ನಂತರ ಸಂಚಲನ ಸೃಷ್ಟಿ ಆಗಿತ್ತು. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರು ಟ್ರಂಪ್‌ಗೆ ಸೋಲಿನ ರುಚಿ ತೋರಿಸಿದ್ದರು. ಆದರೆ ಸೋತು ಹೋದ ನಂತರ ಟ್ರಂಪ್ ಹೊಸ ಕಿರಿಕ್ ಶುರು ಮಾಡಿದ್ದರು.

Donald Trump Did This To Joe Biden In 2021 And It May Be Repeat In 2025

ಸೋಲು & ಗೆಲುವಿನ ಫೈಟಿಂಗ್!

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಕೊರೊನಾ ಬಿರುಗಾಳಿಗೆ ಅಮೆರಿಕ ತತ್ತರಿಸಿ ಹೋಗಿತ್ತು. ಅಮೆರಿಕದ ಪ್ರಜೆಗಳು ತಮ್ಮಲ್ಲೇ ಇದ್ದ ಸಿಟ್ಟನ್ನು ಚುನಾವಣೆ ಮೂಲಕ ತೀರಿಸಿಕೊಂಡು ಡೊನಾಲ್ಡ್ ಟ್ರಂಪ್‌ಗೆ ಸೋಲಿನ ರುಚಿ ತೋರಿಸಿದ್ದರು. ಆದರೆ ತಾವು ಸೋತ ವಿಚಾರ ಒಪ್ಪಿಕೊಳ್ಳದ ಟ್ರಂಪ್ ಕಿರಿಕ್ ಶುರು ಮಾಡಿದ್ದರು.

ಹೀಗೆ ಡೊನಾಲ್ಡ್ ಟ್ರಂಪ್ ತಾವು ಅಧಿಕಾರ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಜೋ ಬೈಡನ್ ಅಧಿಕೃತವಾಗಿ ಅಮೆರಿಕ ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡ ನಂತರ, ಟ್ರಂಪ್ ಹೇಳದೆ ಕೇಳದೆ ಎಸ್ಕೇಪ್ ಆಗಿದ್ದರು. ಇದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂಪ್ರದಾಯ ಮುರಿದಂತೆ ಆಗಿತ್ತು.

2021ರಲ್ಲಿ ಆಗಿದ್ದು ಏನು ಅಂದ್ರೆ...

ಅಮೆರಿಕದಲ್ಲಿ ಒಂದು ವಾಡಿಕೆ ಇದ್ದು, ಹೊಸ ಅಧ್ಯಕ್ಷರು ಆಯ್ಕೆಯಾಗಿ ವೈಟ್‌ಹೌಸ್‌ಗೆ ಬರುವ ದಿನ ಮಾಜಿ ಅಧ್ಯಕ್ಷರು ಸ್ವಾಗತ ಕೋರಬೇಕು. ಅಲ್ಲದೆ ವೈಟ್‌ಹೌಸ್ ಅಂದ್ರೆ ಅಮೆರಿಕ ಅಧ್ಯಕ್ಷ ವಾಸ ಇರುವ ಅಧಿಕೃತ ನಿವಾಸ ಹಸ್ತಾಂತರ ಮಾಡಬೇಕು. ಆದರೆ 2021 ರಲ್ಲಿ ಹೀಗೆ ಆಗಲೇ ಇಲ್ಲ.

ಯಾಕಂದ್ರೆ ಚುನಾವಣೆಯಲ್ಲಿ ನನಗೆ ಮೋಸ ಮಾಡಿದ್ದಾರೆ ಅಂತಾ ಆರೋಪಿಸಿದ್ದರು ಟ್ರಂಪ್. ಹೀಗಾಗಿಯೇ ಜೋ ಬೈಡನ್ ಅವರನ್ನು ಸ್ವಾಗತ ಮಾಡದೆ, ವೈಟ್‌ಹೌಸ್ ಬಿಟ್ಟು ತಮ್ಮ ಹೆಂಡತಿ & ಮಗನ ಜೊತೆಗೆ ಹೊರ ಹೋಗಿದ್ದರು. ಹೀಗಿದ್ದಾಗ ಜೋ ಬೈಡನ್ ಕೂಡ ಟ್ರಂಪ್ ರೀತಿಯೇ ಮಾಡಿ ಇದೀಗ ತಮ್ಮ ಸೇಡು ತೀರಿಸಿಕೊಳ್ಳುತ್ತಾರಾ? ಎಂಬ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+