ಟ್ರಂಪ್ ಮೊಂಡು ವಾದ, ಹಾರ್ವರ್ಡ್ ವಿವಿ ವಿಚಾರದಲ್ಲಿ ತಮ್ಮ ನಿರ್ಧಾರ ಸಮರ್ಥನೆ! Harvard University
ಡೊನಾಲ್ಡ್ ಟ್ರಂಪ್ ಅವರಿಗೆ ಆರು ಮೂರಾದರೂ, ಮೂರು ಆರಾದರೂ ತಮ್ಮ ನಿರ್ಧಾರ ಸರಿ ಅಷ್ಟೇ. ಯಾಕಂದ್ರೆ ಬೇರೆಯವರ ಮಾತನ್ನು ತಾಳ್ಮೆಯಿಂದ ಕೇಳದ & ಎಂದಿಗೂ ಇದರ ಬಗ್ಗೆ ಆಲೋಚನೆ ಮಾಡದ ಡೊನಾಲ್ಡ್ ಟ್ರಂಪ್ ಪದೇ ಪದೇ ಎಡವಟ್ಟು ಮಾಡಿಕೊಳ್ಳುತ್ತಾ ಇದ್ದಾರೆ. ಇದೇ ರೀತಿ ಹಾರ್ವರ್ಡ್ ವಿವಿ ವಿಚಾರದಲ್ಲೂ ಟ್ರಂಪ್ ಮಾಡಿಕೊಂಡ ಎಡವಟ್ಟಿನ ಬಗ್ಗೆ ದೊಡ್ಡ ಚರ್ಚೆ ನಡೆದಿದೆ. ಇಂತಹ ಸಮಯದಲ್ಲೇ, ವಿವಾದದ ಬಗ್ಗೆ ರಿಯಾಕ್ಷನ್ ಕೂಡ ಕೊಟ್ಟಿದ್ದಾರೆ ಟ್ರಂಪ್.
ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದು, ಈಗಲೂ ತಮ್ಮ ವಿವಾದಗಳ ಸರಮಾಲೆ ನಿಲ್ಲಿಸುತ್ತಿಲ್ಲ. ಬದಲಾಗಿ ಈಗಲೂ ತಮ್ಮ ಕಿರಿಕ್ ಮುಂದುವರಿಸಿ, ಹೊಸ ಹೊಸ ತಲೆನೋವು ತರುತ್ತಿದ್ದಾರೆ ಎಂಬ ಆರೋಪ ಇದೆ. ಡೊನಾಲ್ಡ್ ಟ್ರಂಪ್ 2016ರ ಸಮಯದಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಸಮಯದಲ್ಲೂ ನೂರಾರು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಹೀಗಿದ್ದಾಗ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಇದೀಗ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾದರೂ ತಮ್ಮ ಕಿರಿಕ್ ಬಿಡುತ್ತಿಲ್ಲ.

ಟ್ರಂಪ್ ಎಡವಟ್ಟು ಒಂದಾ.. ಎರಡಾ...
ಅಮೆರಿಕದಲ್ಲಿ ಓದಬೇಕು, ಈ ಮೂಲಕ ಅಮೆರಿಕದಲ್ಲಿ ಒಳ್ಳೆಯ ಕೆಲಸ ಪಡೆಯಬೇಕು ಎಂಬ ಆಸೆ ಇಟ್ಟುಕೊಂಡು ಲಕ್ಷ ಲಕ್ಷ ಭಾರತೀಯರು ಕನಸು ಕಟ್ಟಿಕೊಂಡಿದ್ದರು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟು ನಿರ್ಧಾರಗಳೇ ಇದೀಗ ಬೆಂಕಿಯನ್ನ ಹೊತ್ತಿಸಿದೆ. ಅದರಲ್ಲೂ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಡೊನಾಲ್ಡ್ ಟ್ರಂಪ್ ಆಡಳಿತದ ನಡುವಿನ ಜಟಾಪಟಿ ಮುಗಿಲು ಮುಟ್ಟಿದ್ದು, ಹಾರ್ವರ್ಡ್ ವಿವಿಗೆ ಭಾರತವೂ ಸೇರಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್ ಆಡಳಿತ ತಡೆ ನೀಡಿದೆ. ಈ ಬಗ್ಗೆ, ಟ್ರಂಪ್ ಸರ್ಕಾರ ಹೊಸ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದ್ದಾಗಲೇ ಅದನ್ನೂ ಈಗ ಸುಳ್ಳು ಮಾಡಿದ್ದಾರೆ ಟ್ರಂಪ್!
5 ಕೋಟಿ 20 ಲಕ್ಷ ಡಾಲರ್ ಕಥೆ!
ಹೌದು, ಹಾರ್ವರ್ಡ್ ವಿಶ್ವವಿದ್ಯಾಲಯ ವಿಚಾರದಲ್ಲಿ ತಮ್ಮ ನಿರ್ಧಾರ ಸಮರ್ಥನೆ ಮಾಡಿ & ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಷ್ಟು ಸಂಚಲನ ಸೃಷ್ಟಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ಹಾರ್ವರ್ಡ್ ಆಡಳಿತ ತನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇ. 31 ರಷ್ಟು ಸ್ಟೂಡೆಂಟ್ಸ್ ವಿದೇಶದಿಂದ ಬಂದವರು ಅನ್ನೋದನ್ನ ಯಾಕೆ ಹೇಳುತ್ತಿಲ್ಲ? ಹೀಗೆ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪೈಕಿ ಹಲವು ದೇಶಗಳು ಅಮೆರಿಕ ಪರವಾಗಿಲ್ಲ ಎಂದು ಹೊಸ ವಿವಾದದ ಬಾಂಬ್ ಕೂಡ ಸಿಡಿಸಿದ್ದಾರೆ. ಹೀಗೆ ಹಾರ್ವರ್ಡ್ ವಿಶ್ವವಿದ್ಯಾಲಯ ಈಗ ತನ್ನ ಬಳಿ ಸುಮಾರು 5 ಕೋಟಿ 20 ಲಕ್ಷ ಡಾಲರ್ ಹೊಂದಿದೆ, ಅದನ್ನ ಮೊದಲು ಬಳಕೆ ಮಾಡಲಿ ಎಂದಿದ್ದಾರೆ ಟ್ರಂಪ್ ಅವರು.












Click it and Unblock the Notifications