H1B Visa: ಭಾರತೀಯರಿಗೆ ಬೇಸರದ ನಡುವೆ ಖುಷಿ ಸುದ್ದಿ ನೀಡಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಮತ್ತು ಭಾರತದ ಸಂಬಂಧ ಹಾಳಾಗಿ ಹೋಗುವ ಜೊತೆಗೆ ಜಾಗತಿಕ ಮಟ್ಟದಲ್ಲೂ ಹೊಸ, ಹೊಸ ಚಿಂತನೆ ಆರಂಭವಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಈಗ ಭಾರತದ ವಿರುದ್ಧ ಬೇಕು, ಬೇಕು ಅಂತಲೇ ಹೆಚ್ಚಿನ ತೆರಿಗೆ ಹೇರಿಕೆ ಮಾಡುತ್ತಾ & ಮತ್ತೊಂದು ಕಡೆ ಭಾರತೀಯರ ವೀಸಾ ಪಡೆಯುವ ಹಕ್ಕಿಗೂ ಕಲ್ಲು ಹಾಕುತ್ತಿದ್ದಾರೆ ಅನ್ನೋ ಆರೋಪ ಇದೆ. ಹೀಗಿದ್ದಾಗ ಮತ್ತೊಂದು ದೊಡ್ಡ ಹೋರಾಟಕ್ಕೆ ಅಮೆರಿಕ ಸಜ್ಜಾಗಿತ್ತು, ಆದರೆ ಟ್ರಂಪ್ ಆಡಳಿತ ಇದೀಗ ತನ್ನ ವರಸೆ ಬದಲಿಸಿದೆ.

ಹೌದು, ಬಹುತೇಕ ಭಾರತೀಯರೇ ಬಳಸುವ ಎಚ್‌1ಬಿ ವೀಸಾ ನಿಯಮದಲ್ಲಿ ಭಾರಿ ದೊಡ್ಡ ಚೇಂಜ್ ಮಾಡಿದ್ದಾರೆ ಇದೇ ಡೊನಾಲ್ಡ್ ಟ್ರಂಪ್. ಭಾರತ ಮೂಲದ ಕೋಟ್ಯಂತರ ಜನರಿಗೆ, ಅಮೆರಿಕ ಎಂಬ ಕನಸಿನ ಲೋಕದಲ್ಲಿ ಕೆಲಸ ಮಾಡಲು ಸಹಾಯ ಮಾಡಿದ್ದು ಇದೇ ಎಚ್‌1ಬಿ ವೀಸಾ ನಿಯಮ. ಹೀಗೆ ಭಾರತೀಯರಿಗೆ ಸಹಾಯ ಮಾಡುತ್ತಿದ್ದ ಎಚ್‌1ಬಿ ವೀಸಾ ಇನ್ನುಮುಂದೆ ಯಾವುದೇ ಕಾರಣಕ್ಕೆ ನಮ್ಮ ಭಾರತ ಮೂಲದವರಿಗೆ ಸುಲಭವಾಗಿ ಸಿಗದಂತೆ ಮಾಡಿದ್ದಾರೆ ಟ್ರಂಪ್. ಮತ್ತೊಂದು ಕಡೆ ಭಾರತೀಯರು ಈಗಾಗಲೇ ಪಡೆದಿರುವ ಎಚ್‌1ಬಿ ವೀಸಾ ಮೇಲೆ ಕೂಡ ಹೆಚ್ಚಿನ ತೆರಿಗೆ ಹಾಕುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಅದಕ್ಕೆ ಟ್ರಂಪ್ ಸರ್ಕಾರದಿಂದಲೇ ಸ್ಪಷ್ಟನೆ ಸಿಕ್ಕಿದೆ...

Donald Trump Administration Gave Clarification Over H1B Visa Price Hike

ಭಾರತೀಯರಿಗೆ ಬೇಸರದ ನಡುವೆ ನೆಮ್ಮದಿ!

ಕೆಲಸಕ್ಕೆ ಪಡೆಯುವ ವೀಸಾ ಅಂತಾನೇ ಕರೆಸಿಕೊಳ್ಳುವ ಎಚ್‌1ಬಿ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಅಂದ್ರೆ ಸುಮಾರು 88,00,000 ರೂಪಾಯಿ ಮೀರಿ ಶುಲ್ಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಆಡಳಿತ ಕೈಗೊಂಡಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಈ ಯೋಜನೆಗೆ ಸಹಿ ಹಾಕಿದ ನಂತರವೇ ದೊಡ್ಡ ಗಲಾಟೆ ಶುರುವಾಗಿತ್ತು. ಅಲ್ಲದೆ ಅಮೆರಿಕದ ಈ ರೀತಿಯ ವರ್ತನೆ ಬಗ್ಗೆ ಭಾರಿ ಚರ್ಚೆಯೂ ಶುರುವಾಗಿತ್ತು. ಹೀಗಿದ್ದಾಗಲೇ ಭಾರತೀಯರಿಗೆ ಭರ್ಜರಿ ಸುದ್ದಿಯನ್ನ ನೀಡಿದೆ ಟ್ರಂಪ್ ಸರ್ಕಾರ.

ಹಳೆಯ ವೀಸಾ ಇದ್ದವರಿಗೆ ಇಲ್ಲ ಟೆನ್ಷನ್!

ಹೌದು, ಈಗ ಟ್ರಂಪ್ ಆಡಳಿತದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಎಚ್‌1ಬಿ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಹೇರಿಕೆ ಮಾಡಿರುವುದು ಹೊಸ ವೀಸಾಗಳಿಗೆ ಮಾತ್ರ. ಆದರೆ ಈಗಾಗಲೇ ತೆಗೆದುಕೊಂಡ ವೀಸಾಗಳಿಗೆ ಇದು ಅನ್ವಯ ಆಗಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಲಕ್ಷ ಲಕ್ಷ ಭಾರತೀಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದ್ದು, ಈಗಾಗಲೇ ಸುಮಾರು ಅರ್ಧ ಕೋಟಿಗೂ ಹೆಚ್ಚು ಭಾರತೀಯರು ಅಮೆರಿಕದಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೀಗಾಗಿ ಟ್ರಂಪ್ ಸರ್ಕಾರದಿಂದ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ? ಅನ್ನೋದು ಭಾರಿ ಕುತೂಹಲ ಕೆರಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+