ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದ ಡೊಮಿನಿಕಾ
ನವದೆಹಲಿ, ಜೂನ್ 10: ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚಿಸಿ ತಲೆ ಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ಅಕ್ರಮ ವಲಸಿಗ ಎಂದು ಡೊಮಿನಿಕಾ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾವನ್ನು ಪ್ರವೇಶಿಸಿರುವ ವಲಸಿಗ ಎಂಬ ಘೋಷಣೆಯು ಭಾರತಕ್ಕೆ ಹಸ್ತಾಂತರಿಸುವ ಪ್ರಕರಣಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ರಾಷ್ಟ್ರೀಯ ಭದ್ರತೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಆದೇಶ ಪ್ರತಿ ಇಂಡಿಯಾ ಟುಡೆ ಬಳಿಯಿದೆ.
ಈ ಆದೇಶ ಪ್ರತಿ ಪ್ರಕಾರ, "ವಲಸೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್ 5 (1) (ಎಫ್) ಪ್ರಕಾರ 2017ರ ಕಾಮನ್ ವೆಲ್ತ್ ಆಫ್ ಡೊಮಿನಿಕಾದ ಪರಿಷ್ಕೃತ ಕಾನೂನುಗಳ ಅಧ್ಯಾಯ 18:01, ಮೆಹುಲ್ ಚಿನುಭಾಯ್ ಚೋಕ್ಸಿ ಅನ್ನು ನಿಷೇಧಿತ ವಲಸೆಗಾರ ಎಂದು ಘೋಷಿಸಲಾಗಿದೆ.

"ನೀವು ಡೊಮಿನಿಕಾ ಪ್ರವೇಶಿಸಲು ಅನುಮತಿಯಿಲ್ಲ"
"ಕಾಮನ್ ವೆಲ್ತ್ ಆಫ್ ಡೊಮಿನಿಕಾ ಪ್ರವೇಶಿಸುವುದಕ್ಕೆ ನಿಮಗೆ ಯಾವುದೇ ರೀತಿ ಅನುಮತಿಯಿಲ್ಲ. ನಿಮ್ಮನ್ನು ವಾಪಸ್ ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ" ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಅಪಹರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಚೋಕ್ಸಿ
"ಅಂಟಿಗುವಾದ ಮೂವರು ಮತ್ತು ಭಾರತದ ಇಬ್ಬರು ಪ್ರಜೆಗಳು ನನ್ನನ್ನು ಅಪಹರಿಸಿ ಹಡಗಿನಲ್ಲಿ ಡೊಮಿನಿಕಾಗೆ ಕರೆದುಕೊಂಡು ಹೋಗಿದ್ದಾರೆ" ಎಂದು ಉದ್ಯಮಿ ಮೆಹುಲ್ ಚೋಕ್ಸಿ ಕಳೆದ ಜೂನ್ 2ರಂದು ಅಂಟಿಗುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು. ತಮ್ಮ ಕಾನೂನು ತಜ್ಞರ ಸಲಹೆ ಮೇರೆಗೆ ಅಂಟಿಗುವಾ ಪೊಲೀಸರಿಗೆ ಮೆಹುಲ್ ಚೋಕ್ಸಿ ದೂರು ನೀಡಿದ್ದಾರೆ. ತಮ್ಮ ಅಪಹರಣದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಪರಿಚಯವಾದ ಗೆಳತಿ ಬರ್ಬರಾದ ಜಬಾರಿಕಾ ಭಾರತೀಯ ಏಜೆಂಟ್ ಆಗಿ ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ದೂರಿನಲ್ಲಿ ದೂಷಿಸಲಾಗಿದೆ. ಮೇ 23ರ ರಾತ್ರಿ ಮೆಹುಲ್ ಚೋಕ್ಸಿ ನಾಪತ್ತೆಗೂ ಮೊದಲು ತಮ್ಮ ಗೆಳತಿ ಜಬಾರಿಕಾ ಭೇಟಿಗೆ ತೆರಳಿದ್ದರು ಎಂದು ಹೇಳಲಾಗಿತ್ತು.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿದ್ದು ಯಾವಾಗ?
ಕಳೆದ ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ಆರ್ಕ್‌ನ ಯಾಚ್ ಕ್ಯಾಲಿಯೋಪ್‌ನಲ್ಲಿ ಚೋಕ್ಸಿಯನ್ನು ಡೊಮಿನಿಕಾಗೆ ಕರೆತರಲಾಯಿತು ಎಂದು ಡೊಮಿನಿಕಾ ವಿರೋಧ ಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಹೇಳಿಕೆ ನೀಡಿರುವ ಬಗ್ಗೆ ಅಸೋಸಿಯೇಟ್ಸ್ ಟೈಮ್ಸ್ನ ವರದಿ ಮಾಡಿದೆ. ಮೇ 23 ರಂದು ಸಂಜೆ 5 ಗಂಟೆಯವರೆಗೆ ಅವರು ಆಂಟಿಗಾದಲ್ಲಿದ್ದರು ಎಂದು ಚೋಕ್ಸಿ ಅವರ ಕುಟುಂಬ ಹೇಳಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳಲ್ಲಿ 120 ಮೈಲಿ ದೂರವನ್ನು ಕ್ರಮಿಸಲು ಅಸಾಧ್ಯವಾಗುತ್ತದೆ. ಅದಕ್ಕೆ ಕನಿಷ್ಠ 12-13 ಗಂಟೆ ಬೇಕಾಗುತ್ತದೆ. ಕಸ್ಟಮ್ಸ್ ದಾಖಲೆಯ ಪ್ರಕಾರ, ದೋಣಿ ಆಂಟಿಗಾದಿಂದ ಬೆಳಿಗ್ಗೆ 10 ಗಂಟೆಗೆ ಹೊರಟಿದೆ ಎಂದು ಹೇಳಿದ ವರದಿಗೆ ಇದು ವಿರುದ್ಧವಾಗಿದೆ. ಲಿಂಟನ್ ಹೇಳಿಕೊಳ್ಳುವ ದೋಣಿಯಲ್ಲಿ ಚೋಕ್ಸಿ ಪ್ರಯಾಣಿಸಲಿಲ್ಲ ಎಂಬುದನ್ನು ಈ ವ್ಯತ್ಯಾಸವೇ ಸೂಚಿಸುತ್ತದೆ.

ಪಿಎನ್ ಬಿ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಕೇಸ್?
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications