ಪಾಕಿಸ್ತಾನ: ಮಗುವನ್ನು ಕಚ್ಚಿದ ನಾಯಿಗೆ ಮರಣ ದಂಡನೆ ಶಿಕ್ಷೆ!
ನವದೆಹಲಿ, ಮೇ 17: ಮಗುವೊಂದನ್ನು ಕಚ್ಚಿದ್ದ ನಾಯಿಯೊಂದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿಯೊಬ್ಬರು ಮರಣ ದಂಡನೆ ಶಿಕ್ಷೆ ಜಾರಿ ಮಾಡಿದ ವಿಲಕ್ಷಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ತಾವು ನೀಡಿದ ಶಿಕ್ಷೆಯನ್ನು ಸಮರ್ಥಿಸಿಕೊಂಡಿರುವ ಅವರು, ಮಾನವೀಯತೆ ದೃಷ್ಟಿಯಿಂದ ಈ ಶಿಕ್ಷೆ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.
ಜಿಯೋ ಟಿವಿಯು ನೀಡಿದ ವರದಿಯ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಕ್ಕಾರ್ ಎಂಬಲ್ಲಿ ಬೀದಿ ನಾಯಿಯೊಂದು ಮಗುವೊಂದಕ್ಕೆ ಕಚ್ಚಿತ್ತು.

ಈ ಹಿನ್ನೆಲೆಯಲ್ಲಿ ಮಗುವಿನ ಪಾಲಕರು, ಪೊಲೀಸ್ ಠಾಣೆಗೆ ನಾಯಿ ಹಾಗೂ ಅದನ್ನು ಸಾಕಿದ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು. ಇದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮೊರೆ ಹೋದ ನಾಯಿಯ ಮಾಲೀಕ, ಆಕಸ್ಮಿಕವಾಗಿ ಆಗಿರುವ ಈ ಘಟನೆಯಿಂದ ತಮಗೂ ಬೇಸರವಾಗಿದೆ. ಆದರೆ, ದೂರನ್ನು ಮಾನ್ಯ ಮಾಡದೇ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಿದ್ದರು.
ಆಗ, ಎರಡೂ ಪಾರ್ಟಿಗಳನ್ನು ಕರೆದು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜಾ ಸಲೀಂ, ಮಗುವನ್ನು ಕಚ್ಚಿದ ನಾಯಿಗೆ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಿದ್ದಾರೆ. ಒಂದು ಬಾರಿ ಮನುಷ್ಯನನ್ನು ಕಚ್ಚಿದ ನಾಯಿಯಲ್ಲಿ ಅದೇ ಗೀಳು ಹುಟ್ಟುವ ಸಾಧ್ಯತೆಗಳಿರುವುದರಿಂದ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
{promotion-urls}












Click it and Unblock the Notifications