Wine River: ಜೀವನದಲ್ಲಿ ನೀವು ಎಂದಾದರೂ ‘ವೈನ್’ ನದಿ ನೋಡಿದ್ದೀರಾ?

ನೀರಿನ ನದಿ ನೋಡಿದ್ದೀವಿ, ಹಿಮ ನದಿಯನ್ನೂ ನೋಡಿದ್ದೀವಿ, ಆದ್ರೆ ಜೀವನದಲ್ಲಿ ನೀವು ಎಂದಾದರೂ 'ವೈನ್' ನದಿ ನೋಡಿದ್ದೀರಾ? ಅಕಸ್ಮಾತ್ ಮದ್ಯ ಪ್ರಿಯರಿಗೆ ಇಂತಹ ವೈನ್ ನದಿ ಸಿಕ್ಕರೆ ಏನಾಗುತ್ತೆ? ಅರೆರೆ ನಿಲ್ಲಿ ನಿಲ್ಲಿ ವೈನ್ ನದಿ ಅಡ್ರೆಸ್ ಕೇಳೋದಕ್ಕೂ ಮೊದಲು ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.

ಕೆಲವರಿಗೆ ಎಣ್ಣೆ ಹೊಡೆಯೋದು ಶೋಕಿ & ಇನ್ನೂ ಕೆಲವರಿಗೆ ಎಣ್ಣೆ ಹೊಡೆಯದೆ ನಿದ್ದೆನೆ ಬರಲ್ಲ ಅನ್ನೋ ಭ್ರಮೆ. ಇಂತಹವರ ನಡುವೆ ಬಿಟ್ಟಿ ಸಿಕ್ಕಾಗ ಎಣ್ಣೆ ಹೊಡೆಯೋರ ಸಂಖ್ಯೆ ಏನೂ ಕಡಿಮೆ ಇಲ್ಲ. ಹೀಗೆ ಪ್ರಪಂಚ ಅಂದಮೇಲೆ ವೆರೈಟಿ ವೆರೈಟಿ ಕುಡುಕರು ಇರ್ತಾರೆ. ಅದರಲ್ಲೂ 'ವೈನ್' ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬಹುತೇಕ ಎಲ್ಲರಿಗೂ ಇಷ್ಟ ಈ ವೈನ್. ಇದೇ ಕಾರಣಕ್ಕೆ 'ವೈನ್'ಗೆ ಭಾರಿ ಬೇಡಿಕೆ ಇದೆ. 200 ರೂಪಾಯಿಂದ ಹಿಡಿದು 1 ಲಕ್ಷ ರೂಪಾಯಿಗೂ ಮೀರಿ ವಿಧ ವಿಧದ ವೈನ್ ಮಾರಾಟವಾಗುತ್ತದೆ. ಆದ್ರೆ ಈ ದೇಶದಲ್ಲಿ ವೈನ್ ನದಿಯೇ ಹರಿದುಬಿಟ್ಟಿದೆ!

Discover why this Portugal city road transforms into a Red Wine River

ರಸ್ತೆಗೆ ಬಂದ ವೈನ್ ನದಿ!

ಹೌದು, ಈ ಘಟನೆ ನಡೆದಿರುವುದು ಯುರೋಪ್‌ನ ಪೋರ್ಚುಗಲ್‌ ದೇಶದಲ್ಲಿ. ಅಷ್ಟಕ್ಕೂ ಏನಾಯ್ತು ಅಂದ್ರೆ 20 ಲಕ್ಷ ಲೀಟರ್ ರೆಡ್‌ ‌ವೈನ್ ತುಂಬಿದ ಬ್ಯಾರೆಲ್‌ ಬ್ಲಾಸ್ಟ್ ಆದ ಕಾರಣಕ್ಕೆ, ರಸ್ತೆಯ ಮೇಲೆ 'ವೈನ್'‌ ಹೊಳೆ ಹರಿದ ಘಟನೆ ಪೋರ್ಚುಗಲ್‌ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ರೆಡ್‌ ವೈನ್‌ ರಸ್ತೆಯ ಮೇಲೆ ನದಿ ರೀತಿ ರಭಸವಾಗಿ ಹರಿಯುತ್ತಿರುವ ವಿಡಿಯೋ ಈಗ ಫುಲ್ ವೈರಲ್ ಆಗಿದೆ. ಹಾಗೇ ಮದ್ಯಪ್ರಿಯರು ಈ ವಿಡಿಯೋ ನೋಡಿ ವೆರೈಟಿ ವೆರೈಟಿ ಕಮೆಂಟ್ ಮಾಡ್ತಿದ್ದಾರೆ.

ಅಯ್ಯೋ ದೇವರೆ.. ವೇಸ್ಟ್ ಆಯ್ತು.. ಅಂದ್ರು!

ರೆಡ್‌ ವೈನ್‌ ರಸ್ತೆಯ ಮೇಲೆ ಚೆಲ್ಲಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಫುಲ್ ವೈರಲ್ ಆಗಿದೆ. ಹಾಗೇ ಇಷ್ಟೊಂದು ವೈನ್ ವೇಸ್ಟ್ ಆಗಿದ್ದನ್ನ ಕಂಡು ಬೇಜಾರ್ ಮಾಡ್ಕೊಂಡಿದ್ದಾರೆ ಮದ್ಯಪ್ರಿಯರು. ಲೆವಿರಾ ಡಿಸ್ಟಿಲರಿ ಕಂಪನಿಗೆ ಸೇರಿದ ರೆಡ್‌ ‌ವೈನ್ ತುಂಬಿದ ಬ್ಯಾರೆಲ್‌ ಬ್ಲಾಸ್ಟ್ ಆಗಿ 20 ಲಕ್ಷ ಲೀಟರ್‌ ವೈನ್ ಬಾಟೆಲ್‌ಗೆ ತುಂಬುವ ಮೊದಲೇ ಮಣ್ಣುಪಾಲಾಗಿದೆ. ಆದರೂ ಹೀಗೆ ದಿಢೀರ್ ರೆಡ್ ವೈನ್ ರಸ್ತೆಗೆ ಬಂದಾಗ ಜನ ಏನ್ ಮಾಡಿದ್ರು ಗೊತ್ತಾ?

ಕೆಂಪು ನೀರು ನೋಡಿ ಭಯಪಟ್ಟರು!

ಮೊದಲಿಗೆ ಪೋರ್ಚುಗಲ್‌ನ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ಹೀಗೆ ವೈನ್ ರಸ್ತೆಯ ಮೇಲೆ ಹರಿಯುತ್ತಿರುವುದನ್ನ ನೋಡಿದ ಜನರು ಹೆದರಿದರು. ಏನಿದು ರಕ್ತ ಎಂಬ ಭಯದ ನಡುವೆ, ಇದು ರೆಡ್ ವೈನ್ ಅನ್ನೋದು ಆಮೇಲೆ ಗೊತ್ತಾಯ್ತು. ದಿಢೀರ್ ಇಕ್ಕಟ್ಟಾದ ರಸ್ತೆ ಮೇಲೆ ಭಾರಿ ಪ್ರಮಾಣದ ಕೆಂಪು ವೈನ್ ಹರಿದಿದ್ದನ್ನು ನೋಡಿ ಜನ ಓಡಿದ್ದಾರೆ. ಆದರೆ ಸತ್ಯ ಸಂಗತಿ ಗೊತ್ತಾದ ಮೇಲೆ ವೈನ್ ವೇಸ್ಟ್ ಆಯ್ತು ಅಂತಾ ಬೇಜಾರ್ ಮಾಡ್ಕೊಂಡಿದ್ದಾರೆ.

Discover why this Portugal city road transforms into a Red Wine River

ನದಿಗೆ ಸೇರುತ್ತಾ ರೆಡ್ ವೈನ್?

ಈ ತಮಾಷೆ ಮಾತು ಹಾಗಿರಲಿ, ಇದೀಗ ರೆಡ್ ವೈನ್ ರಸ್ತೆಗೆ ಹರಿದ ಪರಿಣಾಮ ಪ್ರಕೃತಿಯ ಮೇಲೆ ದೊಡ್ಡ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ. ಸೆರ್ಟಿಮಾ ನದಿಗೆ ಈ ವೈನ್‌ ಸೇರುವ ಆತಂಕ ಮೂಡಿದೆ. ನದಿಗೆ ವೈನ್‌ ಹರಿದು ಹೋಗದಂತೆ ತಡೆಯಲು ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಅಧಿಕಾರಿಗಳು ಕೂಡ ವೈನ್ ಹರಿವನ್ನ ಬೇರೆ ಕಡೆ ತಿರುಗಿಸಿದ್ದಾರೆ.

ಎಷ್ಟೋ ಮನೆಗಳ ಒಳಗೂ ರೆಡ್ ವೈನ್ ನುಗ್ಗಿ ಇಡೀ ಊರೇ ವೈನ್ ವಾಸನೆ ಬೀರುತ್ತಿದೆ. ಸ್ಥಳೀಯ ಅಧಿಕಾರಿಗಳು ಘಟನೆ ಬಗ್ಗೆ ತನಿಖೆಗೆ ಮುಂದಾಗಿದ್ದು, ಘಟನೆಯ ಕುರಿತು ಜನರು ಆಕ್ರೋಶ ಹೊರಹಾಕಿದ್ದಾರೆ. ಹೀಗೆ ಒಂದು ವೈನ್ ಕಂಪನಿಯಲ್ಲಿ ನಡೆದ ಘಟನೆ ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡಿ ಸುದ್ದಿಯಾಗಿದೆ. ಮದ್ಯ ಪ್ರಿಯರು ಛೇ.. ಅಂತಾ ಬೇಸರ ವ್ಯಕ್ತಪಡಿಸಿದರೆ, ಪರಿಸರ ಪ್ರಿಯರು ಘಟನೆ ಬಗ್ಗೆ ಆಕ್ರೋಶಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+