Madhya Pradesh Election: ‘ನೀನಾ-ನಾನಾ’ ಕಾದಾಟದಲ್ಲಿ ಜಯ ಯಾರಿಗೆ?
ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಈ ಹೊತ್ತಲ್ಲಿ ಮಧ್ಯಪ್ರದೇಶದ ವಿಧಾನಸಭೆ ಎಲೆಕ್ಷನ್ ಕೂಡ ಹತ್ತಿರವೇ ಇದ್ದು, ಕುತೂಹಲ ಕೆರಳಿಸಿದೆ. ಗೆಲುವಿಗಾಗಿ ಕಾಂಗ್ರೆಸ್ & ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಕಾದಾಟವೂ ಶುರುವಾಗಿದ್ದು, ಇದೊಂದು ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಕೈ-ಕಮಲ ನಾಯಕರು ತೊಡೆತಟ್ಟಿದ್ದಾರೆ. ಹಾಗಾದ್ರೆ ಯಾವುದು ಆ ಕ್ಷೇತ್ರ? ಅಲ್ಲಿ ಗೆಲ್ಲಲೇಬೇಕು ಎಂಬ ಸೇಡೇಕೆ?
ಅಂದಹಾಗೆ ಒಟ್ಟು 230 ವಿಧಾನಸಭಾ ಸ್ಥಾನ ಹೊಂದಿರುವ ಮಧ್ಯಪ್ರದೇಶ ರಾಜ್ಯಕ್ಕೆ ನವೆಂಬರ್ 17ಕ್ಕೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ ಆಗಿದೆ. ಹೀಗಿದ್ದಾಗ, ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿನ ಬದ್ನಾವರ್ ವಿಧಾನಸಭೆ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಡೀ ಮಧ್ಯಪ್ರದೇಶದ ಚುನಾವಣೆ ಒಂದು ಲೆಕ್ಕವಾದರೆ, ಬದ್ನಾವರ್ ಕಾದಾಟವೇ ಮತ್ತೊಂದು ಲೆಕ್ಕ. ಇಲ್ಲಿ ಗೆಲುವು ಸಾಧಿಸಿ, ಸಂಭ್ರಮಿಸಬೇಕು ಅಂತಾ ಕಾಂಗ್ರೆಸ್ & ಬಿಜೆಪಿ ನಾಯಕರು ತಂತ್ರ ಹಾಗೂ ರಣತಂತ್ರವನ್ನು ರೂಪಿಸುತ್ತಿದ್ದಾರೆ. ಹಾಗಾದರೆ ಒಂದೇ ಒಂದು ಕ್ಷೇತ್ರಕ್ಕಾಗಿ ಇಷ್ಟೊಂದು ಜಿದ್ದು ಯಾಕೆ?

ಯಾಕೀ ಸೇಡು? ಯಾಕಿಷ್ಟು ಉದ್ವೇಗ?
ಬದ್ನಾವರ್ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದು ಬೀಗಬೇಕು ಎಂಬುದು ಬರೀ ಎಲೆಕ್ಷನ್ ಮ್ಯಾಟರ್ ಆಗಿ ಉಳಿದಿಲ್ಲ. ಆದರೆ ಈ ಕ್ಷೇತ್ರವನ್ನು ಬಿಜೆಪಿ & ಕಾಂಗ್ರೆಸ್ ನಾಯಕರು ವೈಯಕ್ತಿಕವಾಗಿ ಸ್ವೀಕರಿಸಿದ್ದಾರೆ. ಒಂದು ಕಡೆ ಬದ್ನಾವರ್ ಕ್ಷೇತ್ರದಿಂದ, ಬಿಜೆಪಿಯ ಅಭ್ಯರ್ಥಿಯಾಗಿ ಕಮಲ ಪಡೆಯ ರಾಜ್ಯ ನಾಯಕ & ಮಧ್ಯಪ್ರದೇಶ ಕೈಗಾರಿಕಾ ನೀತಿ ಮತ್ತು ಹೂಡಿಕೆ ಪ್ರಚಾರ ಸಚಿವ ರಾಜವರ್ಧನ್ ಸಿಂಗ್ ದತ್ತಿಗಾಂವ್ ಸ್ಪರ್ಧೆ ಮಾಡ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಭನ್ವರ್ ಸಿಂಗ್ ಶೇಖಾವತ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಹಾಗೇ ಇಬ್ಬರೂ ಒಂದೆ ಸಮುದಾಯಕ್ಕೆ ಸೇರಿರುವ ಕಾರಣ ಕುತೂಹಲ ದುಪ್ಪಟ್ಟಾಗಿದೆ.
ರಜಪೂತ ನಾಯಕರ ರಣರಂಗ!
51 ವರ್ಷದ ರಾಜವರ್ಧನ್ ಸಿಂಗ್ ದತ್ತಿಗಾಂವ್ & 72 ವರ್ಷದ ಭನ್ವರ್ ಸಿಂಗ್ ಶೇಖಾವತ್‌ಗೆ ಅವರ ಸಮುದಾಯದ ಬಲವಿದೆ. ಇಬ್ಬರು ನಾಯಕರು ರಜಪೂತ ಸಮುದಾಯಕ್ಕೆ ಸೇರಿದ್ದು ನವೆಂಬರ್ 17 ರಂದು ನಡೆಯಲಿರುವ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸತತ 3ನೇ ಬಾರಿ ಕಾದಾಡಲಿದ್ದಾರೆ. 2003, 2008, 2018 ಮತ್ತೆ 2020ರಲ್ಲಿ ರಾಜವರ್ಧನ್ ಸಿಂಗ್ ದತ್ತಿಗಾಂವ್ ಗೆಲುವು ಸಾಧಿಸಿದ್ದರೆ, 2013ರಲ್ಲಿ ಮಾತ್ರ ಭನ್ವರ್ ಸಿಂಗ್ ಶೇಖಾವತ್‌ಗೆ ಗೆಲುವು ಸಿಕ್ಕಿತ್ತು. ಹೀಗೆ ಇಬ್ಬರ ನಡುವೆ ನೇರವಾಗಿ 3 ಬಾರಿ ಸ್ಪರ್ಧೆ ನಡೆದಿದ್ದು, ಈ ಬಾರಿ ಗೆಲುವು ಯಾರಿಗೆ ಒಲಿಯುತ್ತೆ?
ಬೇರೆ ಯಾವ ಸಮುದಾಯ ಶಕ್ತಿಯುತ?
2.21 ಲಕ್ಷ ಮತದಾರರು ಇರುವ ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಬದ್ನಾವರ್ ವಿಧಾನಸಭೆ ಕ್ಷೇತ್ರದಲ್ಲಿ, ರಜಪೂತ ಸಮುದಾಯವೇ ಪ್ರಬಲವಾಗಿದೆ. ಇವರ ಜೊತೆ ಬುಡಕಟ್ಟು ಮತ್ತು ಪಾಟಿದಾರ್ ಸಮುದಾಯ ಕೂಡ ಪ್ರಬಲವಾಗಿದೆ. ಹೀಗಾಗಿ ಗೆಲುವು ಸಾಧಿಸಲು ಇಬ್ಬರಿಗೂ ಸಮಾನ ಅಕವಾಶ ಇದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ರಾಜವರ್ಧನ್ ಸಿಂಗ್ ದತ್ತಿಗಾಂವ್ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದು. ಇದೇ ಕಾರಣಕ್ಕೆ ಕುತೂಹಲ ಕೆರಳಿದೆ, ಭನ್ವರ್ ಸಿಂಗ್ ಶೇಖಾವತ್ ಅವರು ಈ ವರ್ಷದ ಸೆಪ್ಟೆಂಬರ್ 2 ರಂದು ಆಡಳಿತಾರೂಢ ಬಿಜೆಪಿ ತೊರೆದು ವಿರೋಧ ಪಕ್ಷ ಕಾಂಗ್ರೆಸ್ ಸೇರಿದ್ದರು.

ಕಾಂಗ್ರೆಸ್ ಟಿಕೆಟ್ ಪಡೆದು ರಾಜಕೀಯ ಎದುರಾಳಿಯ ವಿರುದ್ಧ ಹೋರಾಡಲು ಶೇಖಾವತ್ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಇಡಿ ಮಧ್ಯಪ್ರದೇಶ ಚುನಾವಣೆಯಲ್ಲಿ ಬದ್ನಾವರ್ ಸಾಕಷ್ಟು ಗಮನ ಸೆಳೆದಿದೆ. ಘಟಾನುಘಟಿ ನಾಯಕರೇ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಗೆಲುವು ಯಾರಿಗೆ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications