Nobel Award: ನೊಬೆಲ್ ಪ್ರಶಸ್ತಿ ಪ್ರಕಟ, 2024ರ ಪ್ರಶಸ್ತಿ ಪಡೆದವರು ಯಾರು?
ಪ್ರಪಂಚದಲ್ಲಿ ಒಂದು ಮಾತು ಇದೆ, ಯಾರದ್ದೇ ಸಾಧನೆಯ ಬಗ್ಗೆ ಹೋಲಿಕೆ ಮಾಡುವಾಗ ಸಹಜವಾಗಿ 'ನೊಬೆಲ್ ಪ್ರಶಸ್ತಿ' ಎಂಬ ಪದ ಬಳಕೆ ಆಗೇ ಆಗುತ್ತದೆ. ಯಾಕಂದ್ರೆ ನೊಬೆಲ್ ಪ್ರಶಸ್ತಿಗೆ ಅಷ್ಟೊಂದು ಗೌರವ ಮತ್ತು ಹೆಸರು ಇದ್ದು, 'ನೊಬೆಲ್ ಪ್ರಶಸ್ತಿ' ಪಡೆಯುವುದೇ ಪ್ರತಿಯೊಬ್ಬ ಸಂಶೋಧಕರ ಗುರಿಯಾಗಿರುತ್ತದೆ. ಹೀಗಿದ್ದಾಗಲೇ, 2024ರ ಸಾಲಿನ ನೊಬೆಲ್ ಪ್ರಶಸ್ತಿಯನ್ನ 'ಮೈಕ್ರೋ ಆರ್‌ಎನ್‌ಎ' ಆವಿಷ್ಕರಿಸಿದ ಸಾಧಕರಿಗೆ ಅರ್ಪಿಸಲಾಗಿದೆ. ಹಾಗಾದ್ರೆ ಈ ಸಂಶೋಧನೆ ಮನುಷ್ಯರಿಗೆ ಹೇಗೆ ಸಹಾಯ ಮಾಡಲಿದೆ? ಬನ್ನಿ ತಿಳಿಯೋಣ.
'ನೊಬೆಲ್ ಪ್ರಶಸ್ತಿ' ಎಲ್ಲಾ ವಿಭಾಗದಲ್ಲೂ ನಂಬರ್ 1 ಅಂತಾ ಹೇಳಬಹುದು. ಯಾಕಂದ್ರೆ ಜಗತ್ತಿನ ಅತ್ಯಂತ ದುಬಾರಿ ಪ್ರಶಸ್ತಿ ಎಂಬ ಹೆಗ್ಗಳಿಕೆಯನ್ನು ಪಡೆದ ಈ 'ನೊಬೆಲ್' ವಿಜ್ಞಾನಿಗಳ ಪಾಲಿಗೆ ಆಸ್ಕರ್ ಅವಾರ್ಡ್ ಇದ್ದಂತೆ. 2024ರ 'ನೊಬೆಲ್ ಪ್ರಶಸ್ತಿ' ಯಾರಿಗೆ ಸಿಗಬಹುದು? ಈ ಪ್ರಶಸ್ತಿ ಪಡೆಯಲಿರುವ ಶ್ರಮಜೀವಿ ಯಾರು? ಎಂಬ ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ, ಸಾಕಷ್ಟು ಕುತೂಹಲ ಕೂಡ ಕೆರಳಿಸಿತ್ತು. ಇಂತಹ ಸಮಯದಲ್ಲೇ 'ಮೈಕ್ರೋ ಆರ್‌ಎನ್‌ಎ' ಸಂಶೋಧಕರಿಗೆ ಈಗ 2024ರ 'ನೊಬೆಲ್ ಪ್ರಶಸ್ತಿ' ನೀಡಲಾಗಿದೆ. ಹಾಗಾದ್ರೆ 2024ರ ನೊಬೆಲ್ ಪ್ರಶಸ್ತಿ ಪಡೆದ ಸಾಧಕರು ಯಾರು? ಯಾವ ದೇಶದವರು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ನೊಬೆಲ್ ಪಡೆದ ಸಾಧಕರು ಯಾರು?
ಅಷ್ಟಕ್ಕೂ, ಮೈಕ್ರೋ ಆರ್‌ಎನ್‌ಎ ಆವಿಷ್ಕಾರ ಮುನಷ್ಯರ ಭವಿಷ್ಯಕ್ಕೆ ದೊಡ್ಡ ಕೊಡುಗೆಯನ್ನ ನೀಡಲಿದೆ. ಇದೇ ಕಾರಣಕ್ಕೆ ಅಮೆರಿಕದ ವಿಕ್ಟರ್ ಆಯಂಬ್ರೋಸ್ & ಗ್ಯಾರಿ ರುಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅಂದಹಾಗೆ ಇವರ ಈ ಸಂಶೋಧನೆ, ಜೀವಿಗಳ ಬೆಳವಣಿಗೆ & ಕಾರ್ಯ ಚಟುವಟಿಕೆಗಳಲ್ಲಿ ಜೀನ್‌ಗಳ ಪಾತ್ರದ ಬಗ್ಗೆ ಕಠಿಣ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಯಶಸ್ಸು ತಂದುಕೊಟ್ಟಿದೆ. ಈ ಜೋಡಿ ಇದೇ ವೇಳೆ ಕಂಡುಹಿಡಿದ ಮೈಕ್ರೋ ಆರ್‌ಎನ್‌ಎ ಸಂಶೋಧನೆಗೆ ಇದೀಗ ನೊಬೆಲ್ ಪ್ರಶಸ್ತಿ ನೀಡಿದ್ದು ಗಮನ ಸೆಳೆದಿದೆ.
ಸಂಶೋಧನೆ ಮೂಲಕ ಮನುಷ್ಯರಿಗೆ...
ಒಟ್ನಲ್ಲಿ 'ನೊಬೆಲ್ ಪ್ರಶಸ್ತಿ' ಜಾಗತಿಕ ಮಟ್ಟದಲ್ಲಿ ಎಂದೆಂದಿಗೂ ಅತ್ಯಂತ ದೊಡ್ಡ ಪ್ರಶಸ್ತಿ ಎಂಬ ಸ್ಥಾನ ಹೊಂದಿದೆ. ಹಾಗೇ ಈ ಪ್ರಶಸ್ತಿಗೆ ಇರುವ ಗೌರವ ಎಂದೆಂದಿಗೂ ಕಡಿಮೆ ಆಗಲ್ಲ ಎನ್ನಬಹುದು. ಅದರಲ್ಲೂ 'ನೊಬೆಲ್ ಪ್ರಶಸ್ತಿ' ಪಡೆಯುವ ಸಾಧಕರಿಗೆ ಸಿಗುವ ಹಣ ಕೂಡ ದೊಡ್ಡ ಪ್ರಮಾಣದಲ್ಲೇ ಇರುತ್ತದೆ. ಪ್ರತಿವರ್ಷ ಕೂಡ ವಿವಿಧ ವಿಭಾಗಗಳಲ್ಲಿ ಸಾಧನೆಯನ್ನ ಮಾಡುವವರಿಗೆ ನೊಬೆಲ್ ಪ್ರಶಸ್ತಿಯನ್ನ ನೀಡಲಾಗುತ್ತದೆ.












Click it and Unblock the Notifications