Ukraine War: ರಷ್ಯಾ & ಉಕ್ರೇನ್ ಕದನಕ್ಕೂ ವಿರಾಮ, ಶಾಂತಿಯತ್ತ ಸಾಗುತ್ತಿದೆಯಾ ಜಗತ್ತು?

ಉಕ್ರೇನ್ & ರಷ್ಯಾ ನಡುವೆ ನಡೆಯುತ್ತಿರುವ ಭೀಕರ ಕದನ ಇದೀಗ ಅಂತಿಮ ಹಂತ ತಲುಪಿ ಭಾರಿ ಭರ್ಜರಿ ಸುದ್ದಿ ಸಿಗುತ್ತಿದೆ. ರಷ್ಯಾ ನೇರವಾಗಿ ಉಕ್ರೇನ್ ಜೊತೆಗೆ ಮಾತುಕತೆ ಮಾಡಿ & ಈ ಮೂಲಕ ಕದನ ವಿರಾಮ ಘೋಷಣೆ ಮಾಡಲು ಸಜ್ಜಾಗಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಖುದ್ದಾಗಿ ಈ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಉಕ್ರೇನ್ & ರಷ್ಯಾ ಯುದ್ಧದಲ್ಲಿ ಮುಂದಿನ ಬೆಳವಣಿಗೆ ಏನು?

2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಈ ರಷ್ಯಾ & ಉಕ್ರೇನ್ ಯುದ್ಧ ಬರೋಬ್ಬರಿ 3 ವರ್ಷ ಪೂರೈಸಿ, ಇದೀಗ 4ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಈ ಯುದ್ಧ ಭಾರಿ ಸಂಚಲನ ಸೃಷ್ಟಿ ಮಾಡಿರುವ ಈ ಸಮಯದಲ್ಲೇ ಮತ್ತೆ ರಷ್ಯಾ & ಉಕ್ರೇನ್ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿಗೆ ಮುಂದಾಗಿದ್ದರು. ಇದು ಗಡಿ ಭಾಗದಲ್ಲಿ ಹೆಚ್ಚಾಗುತ್ತಿರುವ ಸೂಕ್ಷ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿತ್ತು. ಆದರೆ ರಷ್ಯಾ ಅಧ್ಯಕ್ಷ ಪುಟಿನ್ ಇದೀಗ ಈ ವಿಚಾರದಲ್ಲಿ ತಮ್ಮ ಮನಸ್ಸು ಬದಲಾಯಿಸಿ ಮಾತುಕತೆಗೆ ಒಲವು ತೋರಿಸಿದ್ದಾರೆ.

Discover What Will Be Next In Russia And Ukraine Conflict

ಭೀಕರ ಯುದ್ಧ ಕೊನೆಗೂ ಫಿನಿಶ್?

ರಷ್ಯಾ & ಉಕ್ರೇನ್ ಫೈಟಿಂಗ್ ನೋಡಿ ಏನು ಮಾಡಬೇಕು ಅಂತಾ ಜಗತ್ತಿಗೆ ಗೊತ್ತಾಗಿರಲಿಲ್ಲ. ಈ ಪೈಕಿ ಯುರೋಪ್ ಖಂಡದ ದೇಶಗಳಲ್ಲಿ ಭಾರಿ ಆತಂಕಕಾರಿ ವಾತಾವರಣ ನಿರ್ಮಾಣ ಆಗಿತ್ತು. ಈಗಾಗಲೇ ಯುರೋಪ್ ದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಮತ್ತೆ ರಷ್ಯಾ & ಉಕ್ರೇನ್ ಬಡಿದಾಡುತ್ತಿರುವ ರೀತಿ ನೋಡಿ ವಿಶ್ವಸಂಸ್ಥೆ ಕೂಡ ಆತಂಕದ ಸುಳಿಗೆ ಸಿಲುಕಿತ್ತು. ಆದರೆ ಇದೇ ಸಮಯದಲ್ಲಿ ಭಾರಿ ಮಹತ್ವದ ನಿರ್ಧಾರಕ್ಕೆ ರಷ್ಯಾ ಮುಂದಾಗಿದೆ. ಇದು ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮತ್ತಷ್ಟು ಪ್ರೋತ್ಸಾಹ ನೀಡಿದಂತೆ ಇದೆ.

ಶಾಂತಿ... ಶಾಂತಿ... ಶಾಂತಿ...

ಉಕ್ರೇನ್ ಇದೀಗ ರಷ್ಯಾ ವಿರುದ್ಧ ಮಾತ್ರವಲ್ಲದೆ, ರಷ್ಯಾಗೆ ಸಹಾಯವನ್ನ ಮಾಡುತ್ತಿರುವ ಎಲ್ಲಾ ದೇಶಗಳಿಗೂ ಪಾಠ ಕಲಿಸಲು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಈ ಕಾರಣಕ್ಕೆ ರಷ್ಯಾ ಬೆನ್ನಿಗೆ ನಿಂತಿರುವ ಚೀನಾ ವಿರುದ್ಧ ಕೂಡ ತೊಡೆತಟ್ಟಿ ನಿಂತಿರುವ ಉಕ್ರೇನ್, ಚೀನಾದ ವಿರುದ್ಧ ಕೂಡ ಗಂಭೀರ ಆರೋಪ ಮಾಡಿತ್ತು. ಅದ್ರಲ್ಲೂ ಉಕ್ರೇನ್ ಮಿಲಿಟರಿ ಸೆರೆಹಿಡಿದ ಚೀನಾ ಸೈನಿಕರನ್ನು ಕರೆದುಕೊಂಡು ಬಂದು ಪರೇಡ್ ಮಾಡಿಸಿ ಚೀನಾಗೆ ದೊಡ್ಡ ಆಘಾತ ನೀಡಿತ್ತು. ಹೀಗೆ ದೊಡ್ಡ ಮಟ್ಟದಲ್ಲಿ ಈ ಯುದ್ಧ ತಲುಪುತ್ತಿದೆ ಎಂಬ ಭಯ ಮೂಡಿರುವ ಸಮಯದಲ್ಲೇ, ಶಾಂತಿಯ ಮಾತುಕತೆ ಬಗ್ಗೆ ಚರ್ಚೆ ಕೂಡ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+