Israel: ಇಸ್ರೇಲ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ!

ಹಮಾಸ್ ಉಗ್ರರು ತಮ್ಮ ನೆಲದ ಮೇಲೆ ದಾಳಿ ಮಾಡಿದ ಬಳಿಕ ಇಸ್ರೇಲ್ ಕೂಡ ಪ್ರತಿದಾಳಿ ಆರಂಭಿಸಿದೆ. ಈ ಭೀಕರ ದಾಳಿಯಲ್ಲಿ ಗಾಜಾಪಟ್ಟಿ ಹಾಗೂ ಇಸ್ರೇಲ್ ಎರಡೂ ಕಡೆ ಭಾರಿ ಹಾನಿ ಉಂಟಾಗಿದೆ. ಈ ರಣಕಾಳಗದಲ್ಲಿ ಒಟ್ಟು 7000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕ ಅಧ್ಯಕ್ಷರು, ಇಸ್ರೇಲ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ಅಮೆರಿಕ ಅಧ್ಯಕ್ಷ ಹೇಳಿದ್ದೇನು? ಯುದ್ಧ ನಿಲ್ಲಿಸುತ್ತಾ ದೊಡ್ಡಣ್ಣ ಅಮೆರಿಕ?

ಅಮೆರಿಕ ಮತ್ತು ಇಸ್ರೇಲ್ ಪಕ್ಕಾ ದೋಸ್ತಿಗಳು, ಇಬ್ಬರ ನಡುವೆ ಸಾಕಷ್ಟು ಗಟ್ಟಿಯಾಗಿರುವ ಸಂಬಂಧ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಇಬ್ಬರ ದೋಸ್ತಿ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ ಅಂತಾ, ಅಮೆರಿಕ ಭಾರಿ ಪ್ರಮಾಣದಲ್ಲಿ ಸೇನಾ ನೆರವು ಘೋಷಣೆ ಮಾಡಿದೆ. ಇದರ ಜೊತೆ ಹಮಾಸ್ ಮತ್ತು ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರ ಎಂದು ಘೋಷಿಸಿದೆ. ಇಂತಹ ಸ್ಥಿತಿಯಲ್ಲೇ ಯುದ್ಧ ನಿಲ್ಲಿಸಲು ಅಮೆರಿಕದ ಮೇಲೆ ಒತ್ತಡ ಹಾಕಲಾಗುತ್ತಿದೆ. ಇನ್ನು ಈ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದು ಏನು ಗೊತ್ತಾ?

Discover What American President Joe Biden Said About The War Between Israel & Hamas

ಇಸ್ರೇಲ್‌ಗೆ ತನ್ನದೇ ಹಕ್ಕು ಇದೆ!

ಹೌದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಅದು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಸಮಯದಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಇಂದು ಅಮೆರಿಕ ಅಧ್ಯಕ್ಷರು ಈ ಯುದ್ಧದ ಬಗ್ಗೆ ಮಾತನಾಡುತ್ತಾ, ಇಸ್ರೇಲ್‌ಗೆ ಸ್ವಾಯತ್ತತೆ ಇದೆ. ಹೀಗಾಗಿ ಅವರ ನೆಲವನ್ನು ಕಾಪಾಡಿಕೊಳ್ಳುವ ಹಕ್ಕು ಕೂಡ ಇದೆ ಎಂದಿದ್ದಾರೆ ಜೋ ಬೈಡನ್. ಈ ಮೂಲಕ ಅಮೆರಿಕ ಇದೀಗ ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸೋಕೆ ಮುಂದಾಗುತ್ತಾ? ಎಂಬ ಪ್ರಶ್ನೆಗಳಿಗೂ ಜೋ ಬೈಡನ್ ಖಡಕ್ ಉತ್ತರ ನೀಡಿದ್ದಾರೆ.

ಸಾಕಷ್ಟು ಸಹಾಯ ಮಾಡುತ್ತಿದೆ ಅಮೆರಿಕ

ಇಸ್ರೇಲ್‌ಗೆ ಇದೀಗ ಹಮಾಸ್ ವಿರುದ್ಧ ಹೋರಾಡಲು ಅಗತ್ಯ ಇರುವ ಸಲಕರಣೆಗಳನ್ನು ಈ ದೇಶವೇ ಕೊಡುತ್ತಿದೆ. ಅಂದರೆ ಅಮೆರಿಕ ಇದೀಗ ಇಸ್ರೇಲ್ ಗೆಲುವಿಗಾಗಿ ಕಾಯುತ್ತಿದೆ. ಆದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಬಗ್ಗೆ ದೊಡ್ಡ ಆಕ್ರೋಶ ಮೊಳಗುತ್ತಿದೆ. ಆದರೂ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೇಲೆ ಕೂಡ ಒತ್ತಡ ಹೆಚ್ಚಾಗುತ್ತಿದ್ದು, ಇದೇ ವಿಚಾರವಾಗಿ ಬೈಡನ್ ಈಗ ರಿಯಾಕ್ಟ್ ಮಾಡಿದ್ದಾರೆ. ಅಲ್ಲದೆ ತಾವು ಇಸ್ರೇಲ್ ಪರ ಅಂತಾ ಪರೋಕ್ಷವಾಗಿ ತಿಳಿಸಿದ್ದಾರೆ.

ಹೀಗೆ ಇಸ್ರೇಲ್ ಮತ್ತು ಹಮಾಸ್ ಮಧ್ಯದ ರಣಕಾಳಗ ಸದ್ಯಕ್ಕೆ ಮುಗಿಯುವುದಿಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಅಮೆರಿಕ ಇಂತಹ ಮಾತನ್ನ ಹೇಳಿರುವುದು ಸಹಜವಾಗಿ ಕುತೂಹಲ ಕೆರಳಿಸಿದೆ. ಇನ್ನೊಂದು ಕಡೆ ರಷ್ಯಾ ಇದೇ ವಿಚಾರ ಮುಂದಿಟ್ಟುಕೊಂಡು ಈಗ ಅಮೆರಿಕ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅಲ್ಲದೆ ರಷ್ಯಾ ಅಧ್ಯಕ್ಷ ಪುಟಿನ್ ಅಮೆರಿಕ ಬಗ್ಗೆ ಹಾಗೂ ಅಮೆರಿಕ ಅಧ್ಯಕ್ಷರ ಬಗ್ಗೆ ಈ ವಿಚಾರದಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

Discover What American President Joe Biden Said About The War Between Israel & Hamas

ಅಮೆರಿಕದ ನಿಲುವು ಬದಲಾಗುತ್ತಾ?

ಇದನ್ನೆಲ್ಲಾ ನೋಡುತ್ತಿದ್ರೆ ಮತ್ತೊಂದು ಜಾಗತಿಕ ಯುದ್ಧಕ್ಕೆ ಜಗತ್ತು ಸಜ್ಜಾಗಬೇಕಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಅದರಲ್ಲೂ ಅಮೆರಿಕ ಕೂಡಲೇ ತನ್ನ ನಿಲುವನ್ನು ಬದಲು ಮಾಡಿ, ಉಕ್ರೇನ್ ವಿರುದ್ಧದ ರಷ್ಯಾ ಕಾರ್ಯಾಚರಣೆಯನ್ನು ವಿರೋಧಿಸಿದ ರೀತಿ ಹಮಾಸ್ & ಇಸ್ರೇಲ್ ಯುದ್ಧವನ್ನು ವಿರೋಧಿಸಲಿ. ಹಾಗೂ ಈ ಯುದ್ಧವನ್ನ ನಿಲ್ಲಿಸಲು ಯತ್ನಿಸಲಿ ಎಂಬ ಒತ್ತಡದ ಮಾತುಗಳು ಕೇಳಿಬರುತ್ತಿವೆ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+