India VS Canada: ಕೆನಡಾದಲ್ಲಿ ಭಾರತದ ವೀಸಾ ಸೇವೆ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ!
ಕೆನಡಾ ಪ್ರಧಾನಿ ಟ್ರುಡೋ ಅದ್ಯಾವ ಘಳಿಗೆಯಲ್ಲಿ ಭಾರತದ ವಿರುದ್ಧ ಆರೋಪ ಮಾಡಿ, ಕಿಚ್ಚು ಹಚ್ಚಿದರೋ ಗೊತ್ತಿಲ್ಲ. ಆ ಕ್ಷಣದಿಂದಲೇ ಭಾರತ ಮತ್ತು ಕೆನಡಾ ಸಂಬಂಧ ಕೂಡ ಸಂಪೂರ್ಣ ಹಳಸಿ ಹೋಗಿದೆ. ಕೆನಡಾ ಸರ್ಕಾರಕ್ಕೆ ಪಾಠ ಕಲಿಸಲು ಭಾರತ ಕೂಡ ಹಲವು ದೃಢ ನಿಲುವು ತೆಗೆದುಕೊಳ್ಳುತ್ತಿದೆ. ಈ ಕಾರಣಕ್ಕೆ ವೀಸಾ ಸೇವೆ ರದ್ದುಗೊಂಡ ಬಳಿಕ ಜನ ಪರದಾಡಿದ್ದರು. ಇಷ್ಟೆಲ್ಲ ಘಟನೆ ನಡುವೆ ಕೆನಡಾದಲ್ಲಿ ಈಗ ಭಾರತದ ವೀಸಾ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ.
ಭಾರತ & ಕೆನಡಾ ಉತ್ತಮ ಸ್ನೇಹಿತರು, ಜೊತೆಗೇ ಎರಡೂ ದೇಶಗಳ ನಡುವೆ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ಕೂಡ ನಡೆಯುತ್ತದೆ. ಭಾರತದಿಂದ ವಲಸೆ ಹೋಗಿರುವ ಲಕ್ಷಾಂತರ ಜನರು ಕೆನಡಾ ದೇಶವನ್ನು ಅಭಿವೃದ್ಧಿ ಹಳಿಗೆ ತರಲು ಶ್ರಮಿಸಿದ್ದಾರೆ & ಈಗ ಕೂಡ ಶ್ರಮಿಸುತ್ತಿದ್ದಾರೆ. ಇಷ್ಟಾದರೂ ಕೆನಡಾ ಪ್ರಧಾನಿ ಮಾತ್ರ ಖಲಿಸ್ತಾನಿ ಉಗ್ರನೊಬ್ಬನ ಹತ್ಯೆ ವಿಚಾರವಾಗಿ ಮಾತನಾಡುತ್ತ, ಭಾರತದ ವಿರುದ್ಧ ಆರೋಪ ಮಾಡಿ ಕಿಚ್ಚು ಹೊತ್ತಿಸಿ ಸಂಬಂಧ ಹಾಳಾಗಲು ಪರೋಕ್ಷವಾಗಿ ಕಾರಣವಾಗಿದ್ದರು. ಹೀಗಿದ್ದಾಗಲೇ ಎಲ್ಲವೂ ಹಾಳಾಗಿ ಲಕ್ಷಾಂತರ ಜನ ಪರಿತಪಿಸಿದ್ದರು. ಆದರೆ ಇದೀಗ ನೆಮ್ಮದಿ ನೀಡುವ ಸುದ್ದಿ ಹೊರಬಿದ್ದಿದೆ.

ವೀಸಾ ಪಡೆಯುವವರಿಗೆ ಸಿಹಿಸುದ್ದಿ!
ಮೊದಲೇ ಹೇಳಿದಂತೆ ಭಾರತದ ಲಕ್ಷಾಂತರ ಜನ ಕೆನಡಾದಲ್ಲಿ ಇದ್ರೆ, ಲಕ್ಷಾಂತರ ಕೆನಡಾ ಪ್ರವಾಸಿಗರು ಭಾರತಕ್ಕೆ ಬಂದು ಹೋಗುತ್ತಾರೆ. ಆದರೆ ದಿಢೀರ್ ಎರಡೂ ದೇಶಗಳ ನಡುವೆ ಕಿತ್ತಾಟ ಶುರುವಾಗಿ ರಾಜತಾಂತ್ರಿಕ ಅಧಿಕಾರಿಗಳನ್ನ ವಾಪಸ್ ಕರೆಸಿಕೊಳ್ಳಲಾಗಿತ್ತು. ಹೀಗಾಗಿ ಪರದಾಟ ಶುರುವಾಗಿ, ವೀಸಾ ಪಡೆಯಲು ಜನ ಒದ್ದಾಡಿದ್ದರು. ಹೀಗಿದ್ದಾಗ ಭಾರತ ದೃಢ ನಿಲುವು ತೆಗೆದುಕೊಂಡು ಅಕ್ಟೋಬರ್ 26ರಿಂದ ಕೆನಡಾದಲ್ಲಿ ಕೆಲ ವೀಸಾ ಸೇವೆಗಳನ್ನ ಪುನರ್ ಆರಂಭಿಸಲು ಸಿದ್ಧತೆ ನಡೆಸಿದೆ, ಕೆನಡಾದಲ್ಲಿ ಇರುವ ಭಾರತದ ಹೈಕಮಿಷನ್ ಈಗ ಮಾಹಿತಿ ನೀಡಿದೆ.
ಹಾಗಾದರೆ ಯಾವ ಯಾವ ವೀಸಾ ಸಿಗುತ್ತೆ?
ಇನ್ನು ಕೆನಡಾದಲ್ಲಿ ಇರುವ ಭಾರತದ ಹೈಕಮಿಷನ್ ಇದೀಗ ನೀಡಿರುವ ಮಾಹಿತಿ ಪ್ರಕಾರ, ನಾಳೆಯಿಂದಲೇ ಕೆಲವು ವೀಸಾ ಸೇವೆ ಆರಂಭ ಆಗಲಿವೆ. ಅದರಂತೆ, ಪ್ರವೇಶ ವೀಸಾ ಸೇರಿ ವಾಣಿಜ್ಯ ವೀಸಾ, ವೈದ್ಯಕೀಯ ವೀಸಾ & ಕಾನ್ಫರೆನ್ಸ್ ವೀಸಾ ಸೇವೆಯನ್ನು ಮತ್ತೆ ಆರಂಭಿಸಲಿದೆ ಎನ್ನಲಾಗಿದೆ. ಹಾಗಾದ್ರೆ ಖಲಿಸ್ತಾನಿಗಳ ವಿಚಾರಕ್ಕೆ ಭಾರತ ಹಾಗೂ ಕೆನಡಾ ನಡುವೆ ಕಿಚ್ಚು ಹೊತ್ತಿಕೊಂಡಿದ್ದು ಏಕೆ? 2 ಭೀಕರ ಯುದ್ಧದ ನಡುವೆ ಪರಿಸ್ಥಿತಿ ಹೇಗಿದೆ? ಎಲ್ಲವೂ ಇದೀಗ ಶಾಂತವಾಗಿ, ಭಾರತ ಮತ್ತು ಕೆನಡಾ ಸಂಬಂಧ ಮೊದಲಿನ ರೀತಿ ಆಗುತ್ತಾ? ಈ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.
The latest Press Release on resumption of visa service may be seen here. @MEAIndia @IndianDiplomacy @PIB_India @DDNewslive @ANI @WIONews @TOIIndiaNews @htTweets @cgivancouver @IndiainToronto pic.twitter.com/iwKIgF2qin
— India in Canada (@HCI_Ottawa) October 25, 2023
ಯಾರ ಹತ್ಯೆ ಬಗ್ಗೆ ಇಷ್ಟು ಕಿರಿಕ್?
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಕೊಲೆಯನ್ನು ಭಾರತದ ಏಜೆಂಟ್‌ಗಳೇ ಮಾಡಿದ್ದಾರೆ ಎಂಬ ಆರೋಪವನ್ನ ಜಸ್ಟಿನ್ ಟ್ರುಡೋ ಮಾಡಿದ್ರು. ಇದು ಭಾರತ ಸರ್ಕಾರವನ್ನ ಕೂಡ ಕೋಪಗೊಳ್ಳುವಂತೆ ಮಾಡಿತ್ತು. ಸೂಕ್ತ ಸಾಕ್ಷ್ಯ ಇಲ್ಲದೆ ಈ ರೀತಿಯಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ವಿಚಾರ ಎರಡೂ ದೇಶಗಳ ನಡುವೆ ದೊಡ್ಡ ಸಂಘರ್ಷ ಸೃಷ್ಟಿ ಮಾಡಿದೆ. ವೀಸಾ ಪಡೆದು ತೆರಳಲು ಎರಡೂ ದೇಶದ ಪ್ರಜೆಗಳು ಪರದಾಡುತ್ತಿದ್ದಾರೆ. ಪರಿಸ್ಥಿತಿ ಕಠಿಣವಾದ ವೇಳೆಯೇ ಭಾರತ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಖಲಿಸ್ತಾನಿ ಉಗ್ರರ ಕಾರಣಕ್ಕೆ ಭಾರತ & ಕೆನಡಾ ಸಂಬಂಧ ಹಾಳಾಗಿದ್ದು ಸರಿಯಲ್ಲ ಅಂತಿದ್ದಾರೆ ಅಂತಾರಾಷ್ಟ್ರೀಯ ರಾಜಕೀಯ ತಜ್ಞರು. ಇದರ ಜತೆಗೆ ಕೆನಡಾ & ಭಾರತ ಕೂತು ಮಾತುಕತೆ ಮೂಲಕ ವಿವಾದ ಬಗೆಹರಿಸಬೇಕು ಎಂಬ ಸಲಹೆ ಕೂಡ ಕೇಳಿಬಂದಿದೆ. ಆದರೂ ಕೆನಡಾ ಮತ್ತೆ ಮತ್ತೆ ತನ್ನ ಹಠ ಮುಂದುವರಿಸಿ, ಭಾರತದ ಕೆಂಗಣ್ಣಿಗೂ ಗುರಿಯಾಗುತ್ತಿದೆ. ರಷ್ಯಾ & ಉಕ್ರೇನ್ ಸೇರಿದಂತೆ ಹಮಾಸ್ ಹಾಗೂ ಇಸ್ರೇಲ್ ಯುದ್ಧದ ನಡುವೆ ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.












Click it and Unblock the Notifications