Get Updates
Get notified of breaking news, exclusive insights, and must-see stories!

US Elections 2024: ಅಮೆರಿಕದಲ್ಲಿ ಅಸಲಿ ಆಟ ಇದೀಗ ಶುರು, ಜೋ ಬೈಡನ್ ಸರ್ಕಾರದ ಕ್ರಮಗಳ ಮೇಲೆ ಜಗತ್ತಿನ ಚಿತ್ತ!

ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು 2024ರ ಅಧ್ಯಕ್ಷೀಯ ಚುನಾವಣೆ ಘೋಷಣೆಯಾದ ಬಳಿಕ, ತಾನು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು. ಆ ಬಳಿಕ, ಅವರನ್ನು ಕುಂಟ ಬಾತುಕೋಳಿ (ಲೇಮ್ ಡಕ್) ಎಂದು ಪರಿಗಣಿಸಲಾಗಿದೆ. ಅಂದರೆ, ಅವರ ಪ್ರಭಾವ ಬಹಳಷ್ಟು ಕುಂಠಿತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ಮುಕ್ತಾಯಗೊಂಡಿದ್ದು, ಡೊನಾಲ್ಡ್ ಟ್ರಂಪ್ ಅವರು ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಮಲಾ ಹ್ಯಾರಿಸ್ ಅವರು ಈಗಾಗಲೇ ಸೋಲು ಕಂಡಿರುವುದರಿಂದ, ತನ್ನ ಕ್ರಮಗಳು ಕಮಲಾ ಹ್ಯಾರಿಸ್ ಅವರ ಗೆಲುವಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಕುರಿತು ಬೈಡನ್ ಇನ್ನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಮುಂದಿನ ತಿಂಗಳುಗಳಲ್ಲಿ ಬೈಡನ್ ಅವರು ಇಂತಹ ಚಿಂತೆಗಳಿಲ್ಲದೆ, ಚುನಾವಣೆಗೂ ಮುನ್ನ ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗುವ ಅವಕಾಶಗಳನ್ನು ತಪ್ಪಿಸುವಂತಿದ್ದ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆಯೇ?

Discover How Can The Joe Biden Can Take Strong Decisions As A President Of US After Trump Victory

ಗಮನ ಹರಿಸಬೇಕಾದ ಎರಡು ಮುಖ್ಯ ಕ್ಷೇತ್ರಗಳು

ಇಸ್ರೇಲ್‌ಗೆ ಮಧ್ಯ ಪೂರ್ವದ ಪರಿಸ್ಥಿತಿಯನ್ನು ಉಲ್ಬಣಗೊಳಿಸದಂತೆ ಅಮೆರಿಕಾ ಈಗಾಗಲೇ ಎಚ್ಚರಿಸಿತ್ತು. ಇದರ ಮುಂದುವರಿಕೆಯಾಗಿ, ಜೋ ಬೈಡನ್ ಗಾಜಾದಲ್ಲಿನ ಮಾನವೀಯ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ನೀಡಿ, ಇಸ್ರೇಲ್‌ಗೆ ನೀಡುತ್ತಿರುವ ಮಿಲಿಟರಿ ನೆರವನ್ನು ಕಡಿಮೆಗೊಳಿಸಬಹುದು. ಯುರೇಷ್ಯಾ ಗ್ರೂಪ್‌ನ ಅಮೆರಿಕಾ ನಿರ್ದೇಶಕರಾದ ಕ್ಲೇಟನ್ ಅಲ್ಲೆನ್ ಅವರು ಇಂತಹ ಒಂದು ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿದ್ದರೂ, ಅದಕ್ಕೆ ಅಮೆರಿಕಾದೊಳಗೇ ಭಾರೀ ರಾಜಕೀಯ ಪ್ರತಿರೋಧ ಎದುರಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಜನವರಿ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನುವುದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ, ಕೆಲವು ಷರತ್ತುಗಳನ್ನು ವಿಧಿಸಿ, ಇಸ್ರೇಲ್‌ಗೆ ಅಮೆರಿಕಾದ ಬೆಂಬಲವನ್ನು ಕಡಿಮೆಗೊಳಿಸುವುದರಿಂದ ಇಸ್ರೇಲ್ ಮೇಲೆ ಅಂತಹ ಪರಿಣಾಮ ಬೀರಲಾರದು. ಯಾಕೆಂದರೆ, ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ, ಇಸ್ರೇಲ್ ಮೇಲೆ ಅಂತಹ ಯಾವುದೇ ಷರತ್ತುಗಳನ್ನು ವಿಧಿಸದೆಯೇ ಅವಶ್ಯಕ ಬೆಂಬಲ ಒದಗಿಸಬಲ್ಲರು ಎಂದು ನೆತನ್ಯಾಹು ಭಾವಿಸಿದ್ದಾರೆ. ಆದ್ದರಿಂದ, ಈಗ ಬೈಡನ್ ಸರ್ಕಾರ ವಿಧಿಸುವ ಷರತ್ತುಗಳನ್ನು ತಕ್ಷಣವೇ ಒಪ್ಪಿಕೊಳ್ಳದೆ, ಅಮೆರಿಕಾದಲ್ಲಿ ನೂತನ ಆಡಳಿತ ಚಾಲ್ತಿಗೆ ಬರುವ ತನಕ ಕಾಯುವ ನಿರ್ಧಾರವನ್ನು ಇಸ್ರೇಲೆ ತೆಗೆದುಕೊಳ್ಳಬಹುದು

ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎರಡೂವರೆ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ನೆತನ್ಯಾಹು ನಂಬಿಕೆ ಇರಿಸಿದ್ದಾರೆ. ಆದ್ದರಿಂದ, ಗಾಜಾದ ಕುರಿತಂತೆ ಇಸ್ರೇಲ್ ತನ್ನ ‌ನಿಲುವುಗಳಲ್ಲಿ ಈಗಲೇ ಯಾವುದೇ ಬದಲಾವಣೆ ತರುವ ಸಾಧ್ಯತೆಗಳಿಲ್ಲ. ಅಂತಹ ನಿರ್ಧಾರವನ್ನೇನಾದರೂ ಬೈಡನ್ ಆಡಳಿತ ಕೈಗೊಂಡರೂ, ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಅದನ್ನು ಹಿಂಪಡೆಯಬಹುದು.

ಇನ್ನು ಗಾಜಾದಲ್ಲಿನ ಕ್ರಮಗಳಿಗೆ ಇಸ್ರೇಲನ್ನು ಹೊಣೆಯಾಗಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರಗಳನ್ನು ತಡೆಯದಿರುವ ನಿಲುವನ್ನು ಜೋ ಬೈಡನ್ ತಾಳಬಹುದು. ಅಂದರೆ, ಜೋ ಬೈಡನ್ ವಿಶ್ವಸಂಸ್ಥೆ ಇಸ್ರೇಲನ್ನು ಖಂಡಿಸುವಾಗ ಅಥವಾ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವಾಗ ಇಸ್ರೇಲ್ ಪರ ವಿಟೊ ಪ್ರಯೋಗಿಸದಿರಲು ನಿರ್ಧರಿಸಬಹುದು. ಬೈಡನ್ ಆಡಳಿತ ಈ ಹಿಂದೆ ಮಾರ್ಚ್ ತಿಂಗಳಲ್ಲೂ ಇಂತಹದ್ದೇ ಒಂದು ಕ್ರಮ ಕೈಗೊಂಡಿತ್ತು. ಮಾರ್ಚ್ ತಿಂಗಳಲ್ಲಿ, ವಿಶ್ವಸಂಸ್ಥೆ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯ ಕೈಗೊಂಡಾಗ ಅಮೆರಿಕಾ ಈ ನಿರ್ಧಾರಕ್ಕೆ ತಡೆ ಒಡ್ಡಿರಲಿಲ್ಲ. ಇದು ನೆತನ್ಯಾಹು ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಈ ಕ್ರಮಗಳು ಕೇವಲ ಸಾಂಕೇತಿಕವಾಗಿದ್ದು, ನೆತನ್ಯಾಹು ಮೇಲೆ ಹೆಚ್ಚೇನೂ ಪರಿಣಾಮ ಬೀರಿರಲಿಲ್ಲ. ಯಾಕೆಂದರೆ, ನೆತನ್ಯಾಹು ಇಸ್ರೇಲ್ ನಿರ್ಧಾರಗಳ ಕುರಿತ ವಿಶ್ವಸಂಸ್ಥೆಯ ಅಭಿಪ್ರಾಯಗಳನ್ನು ತಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾದ ಮುಂದಿರುವ ಇನ್ನೊಂದು ಆಯ್ಕೆ ಎಂದರೆ, ರಷ್ಯಾದಲ್ಲಿನ ಗುರಿಗಳ ಮೇಲೆ ದಾಳಿ ನಡೆಸಲು ದೀರ್ಘ ವ್ಯಾಪ್ತಿಯ ಆಯುಧಗಳನ್ನು ಬಳಸಲು ಉಕ್ರೇನ್‌ಗೆ ಅನುಮತಿ ನೀಡುವುದು. ಇಲ್ಲಿಯತನಕ ಅಂತಹ ಪ್ರಯೋಗಗಳನ್ನು ಅಮೆರಿಕಾ ನಿರ್ಬಂಧಿಸಿದೆ. ಅಲ್ಲೆನ್ ಅವರು ಅಮೆರಿಕಾ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಿಂತಲೂ, ಉಕ್ರೇನ್‌ಗೆ ದೀರ್ಘ ವ್ಯಾಪ್ತಿಯ ಆಯುಧ ಬಳಸಲು ಅನುಮತಿ ನೀಡುವುದು ಒಂದು ಸಂಭಾವ್ಯ ಬದಲಾವಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಯಾಕೆಂದರೆ, ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುವ ಮುನ್ನವೇ ಅಮೆರಿಕಾ ಈ ಸಾಧ್ಯತೆಗಳ ಕುರಿತು ಚಿಂತನೆ ನಡೆಸಿತ್ತು.

ವಾರ್ಷಿಕ ರಕ್ಷಣಾ ಹೂಡಿಕೆ ಮಸೂದೆಯಾದ ಎನ್‌ಡಿಎಎ (ನ್ಯಾಷನಲ್ ಡಿಫೆನ್ಸ್ ಆಥರೈಸೇಷನ್ ಆ್ಯಕ್ಟ್) ಅಡಿಯಲ್ಲಿ ಉಕ್ರೇನ್ ಕುರಿತು ಅಧಿಕೃತ ಭದ್ರತಾ ಜವಾಬ್ದಾರಿ ತೆಗೆದುಕೊಳ್ಳುವ ನಿರ್ಧಾರವನ್ನು ಬೈಡನ್ ಕೈಗೊಳ್ಳಬಹುದು ಎಂದು ಅಲ್ಲೆನ್ ವಿವರಿಸಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿ ಅಗತ್ಯ ಬೆಂಬಲ ಲಭಿಸಿದರೆ ಮಾತ್ರವೇ ಅಮೆರಿಕಾ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ.

ಅಂತಿಮವಾಗಿ, ಅಧಿಕಾರ ವರ್ಗಾವಣೆಯ ಈ ಅವಧಿಯಲ್ಲಿ ಅಮೆರಿಕಾದ ನೀತಿಗಳಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ. ಜೆಲೆನ್ಸ್‌ಕಿ ಸಹ ಇದನ್ನು ಅರ್ಥ ಮಾಡಿಕೊಂಡಂತೆ ತೋರುತ್ತಿದ್ದು, ಟ್ರಂಪ್ ಅವರನ್ನು ಅಭಿನಂದಿಸುವ ಟ್ವೀಟ್‌ನಲ್ಲಿ, ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ, 'ನ್ಯಾಯಯುತ ಶಾಂತಿ' ಸ್ಥಾಪನೆಗಾಗಿ ಜೊತೆಯಾಗಿ ಕಾರ್ಯಾಚರಿಸುವ ಇಚ್ಛೆಯನ್ನು ಜೆಲೆನ್ಸ್‌ಕಿ ವ್ಯಕ್ತಪಡಿಸಿದ್ದಾರೆ. ಟ್ರಂಪ್ ತಾನು ಅಧಿಕಾರ ವಹಿಸಿಕೊಂಡ 24 ಗಂಟೆಗಳೊಳಗೆ ಉಕ್ರೇನ್ ಯುದ್ಧವನ್ನು ಮುಗಿಸುವುದಾಗಿ ಭರವಸೆ ನೀಡಿದ್ದು, ಅದನ್ನು ಹೇಗೆ ಸಾಧಿಸುವುದು ಎಂಬ ಕುರಿತು ಯಾವುದೇ ಮಾರ್ಗಸೂಚಿಯನ್ನು ಇನ್ನೂ ವಿವರಿಸಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+