ತಾಲಿಬಾನ್ ನಾಡಲ್ಲಿ ಮತ್ತೆ ಭೀಕರ ಬಾಂಬ್ ಬ್ಲಾಸ್ಟ್: ಕಾರಣ ತಿಳಿಯಿರಿ!
ತಾಲಿಬಾನ್ ಸರ್ಕಾರ ಮತ್ತು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಸರ್ಕಾರ ಎರಡು ಒಂದೇ ಅನ್ನಬಹುದು. ಯಾಕಂದ್ರೆ ಉತ್ತರ ಕೊರಿಯಾ ಸರ್ವಾಧಿಕಾರಿ ನಾಡಲ್ಲಿ ಜನಗಳು, ತಮ್ಮ ದೇಶ ಹಾಗೂ ತಮ್ಮ ನೆಲದಲ್ಲಿ ನರಕ ನೋಡುತ್ತಿದ್ದಾರೆ. ಹೀಗೆಯೇ ತಾಲಿಬಾನಿ ಆಡಳಿತದಲ್ಲಿಯೂ ಅಫ್ಘಾನ್ ಪ್ರಜೆಗಳಿಗೆ ಟಾರ್ಚರ್ ಕೊಡಲಾಗುತ್ತಿದೆ. ಹೀಗೆ ಇಡೀ ವ್ಯವಸ್ಥೆ ಹಾಳಾಗಿ, ಗಬ್ಬೆದ್ದು ಹೋಗಿರುವ ಸಮಯದಲ್ಲೇ ಅಫ್ಘಾನಿಸ್ತಾನದಲ್ಲಿ ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದೆ.
ಅಫ್ಘಾನ್‌ನ ನೆಲದಲ್ಲಿ ತಾಲಿಬಾನ್ ಉಗ್ರರು ಮತ್ತೆ ಸರ್ಕಾರ ರಚಿಸಿ 3 ವರ್ಷಗಳೇ ಕಳೆದಿದೆ. ಅಷ್ಟಕ್ಕೂ ಸುಮಾರು 20 ವರ್ಷ ಸುದೀರ್ಘ ಹೋರಾಟದ ಬಳಿಕ, 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಸಂಪೂರ್ಣ ಅಫ್ಘಾನಿಸ್ತಾನ ತೊರೆದು ಹೊರಬಂದಿತ್ತು. ಜೋ ಬೈಡನ್ ಆಗಿನ ಸಮಯಕ್ಕೆ 2021ರ ಆಗಸ್ಟ್ 31ನ್ನು ಡೆಡ್‌ಲೈನ್ ಆಗಿ ನೀಡಿ ಅಮೆರಿಕದ ಸಂಪೂರ್ಣ ಸೇನೆ ಕರೆಸಿಕೊಂಡರು. ಅಲ್ಲಿಗೆ ಅಫ್ಘಾನಿಸ್ತಾನ ಜನರ ನೆಮ್ಮದಿ ಹಾರಿಹೋಗಿತ್ತು. ಅಲ್ಲಿನ ಜನಕ್ಕೆ ನೆಮ್ಮದಿಯಾಗಿ ಬದುಕು ನಡೆಸುವ ಹಕ್ಕು ಕೂಡ ಇಲ್ಲದಂತಾಗಿದೆ. ತಾಲಿಬಾನ್ ಉಗ್ರರ ಆಡಳಿತಕ್ಕೆ ಸಿಲುಕಿ ನರಳುತ್ತಿರುವ ಸಮಯದಲ್ಲೇ ಅಫ್ಘಾನ್‌ನ ರಾಜಧಾನಿಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

ಬಾಂಬ್ ಬ್ಲಾಸ್ಟ್ ಆಗಿದ್ದು ಹೇಗೆ? ಎಲ್ಲಿ?
ಹೌದು, ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಮಿನಿ ಬಸ್ ಸ್ಫೋಟಗೊಂಡ ಪರಿಣಾಮ 7 ಪ್ರಜೆಗಳು ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಾಬೂಲ್‌ನ, ಪಶ್ಚಿಮ ಭಾಗದ ದಷ್ಟಿ ಬಾರ್ಚಿ ಪ್ರದೇಶದಲ್ಲಿ ಈ ಡೆಡ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಆದರೆ, ಸ್ಫೋಟಕ್ಕೆ ಕಾರಣವೇನು ಎಂಬ ಸತ್ಯ ಸದ್ಯಕ್ಕೆ ಬಯಲಾಗಿಲ್ಲ. ಹೀಗಾಗಿ, ತನಿಖೆ ಆರಂಭಿಸಲಾಗಿದೆ ಎಂದು ಸ್ಥಳೀಯ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಎಸ್ ಉಗ್ರರಿಂದಲೇ ಬಾಂಬ್ ಬ್ಲಾಸ್ಟ್?
ಮತ್ತೊಂದು ಕಡೆ ಸ್ಫೋಟ ಸಂಭವಿಸಿ ಸಾಕಷ್ಟು ಸಮಯ ಕಳೆದರೂ ಯಾವುದೆ ಸಂಘಟನೆ ಈ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಆದರೂ ಐಎಸ್‌ಐಎಸ್ ಉಗ್ರರಿಂದಲೇ ಬಾಂಬ್ ಸ್ಫೋಟ ನಡೆದಿರುವ ಅನುಮಾನ ಕಾಡ್ತಿದೆ. ಏಕೆಂದರೆ, ಇದೇ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹಲವು ಬಾರಿ ಈ ಜಾಗದಲ್ಲಿ ಬಾಂಬ್ ದಾಳಿ ಮಾಡಿತ್ತು ಎನ್ನಲಾಗಿದೆ. ಹೀಗಾಗಿ ಘಟನೆಯನ್ನು ತಾಲಿಬಾನ್ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೃತ್ಯ ಎಸಗಿದವರನ್ನು ಹುಡುಕಾಡುತ್ತಿದೆ.

ಒಟ್ನಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೇಕು ಅಂತಲೇ ಈ ರೀತಿ ಕೃತ್ಯ ಎಸಗಲಾಗುತ್ತಿದೆ ಎಂಬ ಆರೋಪ ಇದೆ. ಅದ್ರಲ್ಲೂ ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಉಗ್ರರ ಉಪಟಳ ಹೆಚ್ಚಾಗಿತ್ತು, ಆದರೆ ಈಗ ನೇರವಾಗಿ ಅಫ್ಘಾನ್ ರಾಜಧಾನಿ ಕಾಬೂಲ್ ಒಳಗಡೆ ಭೀಕರ ದಾಳಿ ನಡೆಸಲಾಗಿದೆ. ಹೀಗಾಗಿ ತಾಲಿಬಾನ್ ಸರ್ಕಾರ ಅಲರ್ಟ್ ಆಗಿ, ಈ ಸ್ಫೋಟ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದೆ.












Click it and Unblock the Notifications