ಹುಡುಗಿಯರಿಗೆ ವಾಟ್ಸಾಪ್‌ನಲ್ಲಿ ರೆಡ್ ಹಾರ್ಟ್ ಎಮೋಜಿ ಕಳಿಸುತ್ತಿದ್ದರೆ ಎಚ್ಚರ!

ದುಬೈ, ಆಗಸ್ಟ್. 01: ಚಾಟ್ ಮಾಡುವಾಗ ಸಾಮಾನ್ಯವಾಗಿ ಖುಷಿಯಾದಗ, ಏನಾದರೂ ನಮಗಿಷ್ಟವಾಗಿದ್ದು ಅವರಿಗೂ ಇಷ್ಟವಾಗಿದ್ದಾಗ ಹಾರ್ಟ್ ಎಮೋಜಿ ಕಳುಹಿಸುತ್ತಾರೆ. ಪ್ರೀತಿ, ಸ್ಪಂದನೆ, ಸಾಂತ್ವನ ಸೂಚಿಸಲು ದಿನದಲ್ಲಿ ಹಲವು ಬಾರಿ ಈ ಕೆಂಪು ಹೃದಯದ ಎಮೋಜಿಯನ್ನು ಬಳಸುತ್ತೇವೆ. ಆದರೆ, ಈ ದೇಶದಲ್ಲಿ ಹುಡುಗಿಯರಿಗೆ ನೀವು ಹಾರ್ಟ್ ಎಮೋಜಿ ಕಳುಹಿಸಿದರೇ ನೀವು ಜೈಲಿನ ಕಂಬಿಗಳನ್ನು ಎಣಿಸಬೇಕಾಗಬಹುದು!.

ಆಶ್ಚರ್ಯ ಆದರೂ ಇದು ಸತ್ಯ. ಸೌದಿ ಅರೇಬಿಯಾ ಮತ್ತು ಕುವೈತ್‌ನಲ್ಲಿ ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಗೆ ಹೃದಯದ ಎಮೋಜಿಯನ್ನು ಕಳುಹಿಸುವುದನ್ನು ಈಗ ದುಷ್ಕೃತ್ಯಕ್ಕೆ ಪ್ರೇರೇಪಿಸುವ ಅಪರಾಧವೆಂದು ಪರಿಗಣಿಸಲಾಗಿದ್ದು, ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.

Did you know sending heart emoji can land you in jail?

ಕುವೈತ್ ವಕೀಲರಾದ ಹಯಾ ಅಲ್ ಶಲಾಹಿ ಅವರ ಪ್ರಕಾರ, ಹುಡುಗಿಯರಿಗೆ ರೆಡ್ ಹಾರ್ಟ್ ಕಳುಹಿಸಿದ ಅಪರಾಧಕ್ಕೆ ಶಿಕ್ಷೆಗೊಳಗಾದವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕು. ಇದರ ಜೊತೆಗೆ 2,000 ಕುವೈತ್ ದಿನಾರ್‌ಗಳನ್ನು ದಂಡದ ರೀತಿಯಲ್ಲಿ ಪಾವತಿಸಬೇಕಾಗುತ್ತದೆ. ಅದೇ ರೀತಿ, ನೆರೆಯ ಸೌದಿ ಅರೇಬಿಯಾದಲ್ಲಿ, ವಾಟ್ಸಾಪ್‌ನಲ್ಲಿ 'ಕೆಂಪು ಹೃದಯ' ಎಮೋಜಿಗಳನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು" ಎಂದಿದ್ದಾರೆ.

ಸೌದಿ ಅರೇಬಿಯಾ ಕಾನೂನಿನ ಪ್ರಕಾರ, ಈ ಕೃತ್ಯದ ತಪ್ಪಿತಸ್ಥರು 1,00,000 ಸೌದಿ ರಿಯಾಲ್‌ಗಳ ದಂಡದೊಂದಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬಹುದು. ಸೌದಿ ಅರೇಬಿಯಾ ಸೈಬರ್ ಕ್ರೈಮ್ ತಜ್ಞರ ಪ್ರಕಾರ, ವಾಟ್ಸಾಪ್‌ನಲ್ಲಿ ಕೆಂಪು ಹೃದಯಗಳನ್ನು ಕಳುಹಿಸುವುದನ್ನು ದೇಶದ ನ್ಯಾಯವ್ಯಾಪ್ತಿಯಲ್ಲಿ "ಕಿರುಕುಳ" ಎಂದು ಅರ್ಥೈಸಬಹುದಾಗಿದೆ.

Did you know sending heart emoji can land you in jail?

ಸೌದಿ ಅರೇಬಿಯಾದ ಆಂಟಿ-ಫ್ರಾಡ್ ಅಸೋಸಿಯೇಷನ್‌ನ ಸದಸ್ಯ ಅಲ್ ಮೊಟಾಜ್ ಕುಟ್ಬಿ, "ಆನ್‌ಲೈನ್ ಸಂಭಾಷಣೆಯ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸುವುದರ ವಿರುದ್ಧ ಸಂತ್ರಸ್ತ ವ್ಯಕ್ತಿ ಮೊಕದ್ದಮೆ ಹೂಡಿದರೆ ಅದು ಕಿರುಕುಳದ ಅಪರಾಧವಾಗಿ ಬದಲಾಗಬಹುದು" ಎಂದು ಒತ್ತಿ ಹೇಳಿದ್ದಾರೆ. ಇದೇ ಅಪರಾದ ಮತ್ತೆ ಮಾಡಿದರೇ ದಂಡವು 3,00,000 ಸೌದಿ ರಿಯಾಲ್‌ಗಳಿಗೆ ಏರಿಕೆಯಾಗಲಿದೆ. ಜೊತೆಗೆ ಜೈಲು ಶಿಕ್ಷೆಯನ್ನು ಗರಿಷ್ಠ ಐದು ವರ್ಷಗಳವರೆಗೆ ಹೆಚ್ಚಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+