ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ತಂತ್ರ ಹೂಡಿದ ‘ಡೆಮಾಕ್ರಟಿಕ್’ ನಾಯಕರು!
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೀಗೆ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಒಂದಾದ ನಂತರ ಒಂದೊಂದು ಐಡಿಯಾಗಳನ್ನ ಟ್ರಂಪ್ ವಿರುದ್ಧ ಪ್ರಯೋಗ ಮಾಡುತ್ತಿದ್ದಾರೆ 'ಡೆಮಾಕ್ರಟಿಕ್' ನಾಯಕರು. ಅದರಲ್ಲೂ ಜೋ ಬೈಡನ್ ವಿರುದ್ಧ ಸುಲಭವಾಗಿ ಗೆದ್ದು ಬೀಗುವ ನಿರೀಕ್ಷೆ ಇಟ್ಟುಕೊಂಡಿದ್ದ ಡೊನಾಲ್ಡ್ ಟ್ರಂಪ್ ಇದೀಗ, ಕಮಲಾ ಹ್ಯಾರಿಸ್ ವಿರುದ್ಧ ಹೀನಾಯವಾಗಿ ಸೋಲುವ ಭಯದಲ್ಲಿ ಇದ್ದಾರೆ! ಇದು ಸಾಧ್ಯವಾಗಿದ್ದು ಹೇಗೆ ಗೊತ್ತಾ? ಬನ್ನಿ ತಿಳಿಯೋಣ.
ಅಮೆರಿಕದ ಚುನಾವಣೆ ಇದೀಗ ಡೊನಾಲ್ಡ್ ಟ್ರಂಪ್ ಪಾಲಿಗೆ ಕಬ್ಬಿಣದ ಕಡಲೆ ಆಗುತ್ತಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಬಹುತೇಕ ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ಕುರಿತಾಗಿ ಈಗಾಗಲೇ ಹೊರಬಿದ್ದಿರುವ ಹಲವು ಸಮೀಕ್ಷಗಳು ಡೊನಾಲ್ಡ್ ಟ್ರಂಪ್ ಅವರು ಹಿಂದುಳಿದು, ಕಮಲಾ ಹ್ಯಾರಿಸ್ ಗೆಲ್ಲುವ ಕುದುರೆ ಆಗಿದ್ದಾರೆ ಎನ್ನುತ್ತಿವೆ. ಹೀಗಿದ್ದಾಗ ಡಿಸೈನ್ ಡಿಸೈನ್ ಆಗಿ ಡೊನಾಲ್ಡ್ ಟ್ರಂಪ್‌ಗೆ ಆಘಾತ ನೀಡಲು ಬರಾಕ್ ಒಬಾಮಾ, ಕ್ಲಿಂಟನ್, ಬೈಡನ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ!

ಡೊನಾಲ್ಡ್ ಟ್ರಂಪ್ ಸೋಲು ಗ್ಯಾರಂಟಿ?
ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಪರವಾಗಿ ಇಡೀ ಅಮೆರಿಕದಲ್ಲಿ ದೊಡ್ಡ ಅಲೆ ಸೃಷ್ಟಿಯಾಗಿದೆ. ಯಾಕಂದ್ರೆ ಕಮಲಾ ಹ್ಯಾರಿಸ್ ಈಗಾಗಲೇ ಉಪಾಧ್ಯಕ್ಷರಾಗಿ & ಅಮೆರಿಕದ ವಿವಿಧ ಹಂತಗಳಲ್ಲಿ ಅಧಿಕಾರ ನಿರ್ವಹಿಸಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್‌ಗೆ ಮತ ಹಾಕಲು ಅಮೆರಿಕದ ಯುವ ಸಮುದಾಯ & ಹಿಂದುಳಿದ ಸಮುದಾಯಗಳು ನಿರ್ಧಾರಕ್ಕೆ ಬಂದಿವೆ ಎಂಬುದು ಸಮೀಕ್ಷೆಗಳಿಂದ ಬಯಲಾಗುತ್ತಿದೆ, ಎಂಬುದು ಡೆಮಾಕ್ರಟಿಕ್ ನಾಯಕರ ವಾದ. ಈ ಕಾರಣಕ್ಕೆ ಕಮಲಾ ಹ್ಯಾರಿಸ್ ಪರ ಬೆಂಬಲ ಮತ್ತಷ್ಟು ಹೆಚ್ಚಾಗುವಂತೆ ಮಾಡಲು ಇದೀಗ ಡೆಮಾಕ್ರಟಿಕ್ ಪಕ್ಷದ ನಾಯಕರು ಅಮೆರಿಕದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯ ತಂತ್ರಗಳನ್ನ ಅನುಸರಿಸುತ್ತಿದ್ದಾರೆ.
ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?
ಅಂದಹಾಗೆ ಈಗಿನ ಸ್ಥಿತಿ ನೋಡಿದರೆ ಕಮಲಾ ಹ್ಯಾರಿಸ್ ಅವರ ಗೆಲುವು ಗ್ಯಾರಂಟಿ ಆಗಿದೆ. ಇದೇ ಕಾರಣಕ್ಕೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್ ಪರವಾಗಿ ಮತ್ತಷ್ಟು ಗಟ್ಟಿ ಹಾಗೂ ನಿಖರವಾದ ಚುನಾವಣಾ ಪ್ರಚಾರಕ್ಕೆ 'ಡೆಮಾಕ್ರಟಿಕ್' ಪಕ್ಷದ ನಾಯಕರು ಮುಂದೆ ಬಂದಿದ್ದಾರೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಕೂಡ ಅಬ್ಬರದಿಂದ ಚುನಾವಣಾ ಪ್ರಚಾರದ ಸಭೆಗಳನ್ನ ನಡೆಸುತ್ತಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ & ಕಮಲಾ ಹ್ಯಾರಿಸ್ ಪರ ವಿಶೇಷ ರೀತಿಯಲ್ಲಿ ಕ್ಯಾಂಪೇನ್ ನಡೆಸಲು ಮುಂದೆ ಬಂದಿದ್ದಾರೆ 'ಡೆಮಾಕ್ರಟಿಕ್' ನಾಯಕರು.
ಅದರಲ್ಲೂ ಆಫ್ರಿಕನ್-ಅಮೆರಿಕನ್ ಮತದಾರರು & ಇಂಡಿಯನ್-ಅಮೆರಿಕನ್ ಮತದಾರರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ಪ್ರಚಾರ ಸಭೆಗಳನ್ನ ಆಯೋಜಿಸುವ ಮೂಲಕ ಟ್ರಂಪ್ & ಬೆಂಬಲಿಗರಿಗೆ ಆಘಾತ ಕೊಡಲು ಮುಂದಾಗಿದ್ದಾರೆ ಕಮಲಾ ಹ್ಯಾರಿಸ್. ಇದಕ್ಕೆ ಬೇಕಾದ ಚುನಾವಣಾ ನಿಧಿ ಕೂಡ ಭಾರಿ ಪ್ರಮಾಣದಲ್ಲಿ ಸಂಗ್ರಹ ಆಗುತ್ತಿರುವುದು & ಈ ಹಣವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿ.












Click it and Unblock the Notifications