Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಕಮಲಾ!
ಭಾರತ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕ ಚುನಾವಣೆಯಲ್ಲಿ ಭರ್ಜರಿ ಬೆಂಬಲ ಸಿಗುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಲು & ಈ ಮೂಲಕ ಹೊಸ ಇತಿಹಾಸ ನಿರ್ಮಿಸಲು ಸೂಕ್ತ ವೇದಿಕೆ ನಿರ್ಮಾಣ ಆಗುತ್ತಿದೆ. ಹೀಗೆ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ಮಾತಿನ ಮಹಾ ಸಮರ ಜೋರಾಗಿರುವ ಸಮಯದಲ್ಲೇ, ಕಮಲಾ ಹ್ಯಾರಿಸ್ ಮತ್ತೊಂದು ಬಾಂಬ್ ಇಟ್ಟಿದ್ದಾರೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಬಗ್ಗೆ ಕಮಲಾ ಹ್ಯಾರಿಸ್ ಹೇಳಿದ್ದು ಏನು? ಬನ್ನಿ ತಿಳಿಯೋಣ.
ಡೊನಾಲ್ಡ್ ಟ್ರಂಪ್ ಬಾಯಿ ಬಿಟ್ಟರೆ ಸಾಕು ಏನಾದರು ಒಂದು ಕಿರಿಕ್ ಗ್ಯಾರಂಟಿ. ಡೊನಾಲ್ಡ್ ಟ್ರಂಪ್ ಪ್ರತಿ ಮಾತಿನಲ್ಲೂ ಏನಾದರು ಒಂದು ಕಿರಿಕ್ ಮಾಡುತ್ತಲೇ ಇರುತ್ತಾರೆ. ಈ ಕುರಿತು ಈಗಾಗಲೇ ಅಮೆರಿಕದಲ್ಲಿ ಭಾರಿ ದೊಡ್ಡ ಆಕ್ರೋಶ ಮೊಳಗಿದ್ದು, ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಗಳ ಮೂಲಕವೇ ವಿವಾದ ಎಬ್ಬಿಸುತ್ತಿದ್ದಾರೆ.

ಇದೆಲ್ಲಾ ತಮ್ಮ ಅಸ್ತ್ರ ಮಾಡಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಮಲಾ ಹ್ಯಾರಿಸ್ ಈಗ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ಈಗಾಗಲೇ, ಅಮೆರಿಕದ ಮತದಾರರು ಕಮಲಾ ಹ್ಯಾರಿಸ್ ಅವರ ಅಭಿವೃದ್ಧಿ ಪರ ಚಿಂತನೆಗಳನ್ನ ಬೆಂಬಲಿಸಿದ್ದು, ಇದೇ ಸಮಯದಲ್ಲಿ ಟ್ರಂಪ್ ವಿರುದ್ಧ ಕೂಡ ಕಮಲಾ ಹ್ಯಾರಿಸ್ ವಾಗ್ದಾಳಿ ಶುರು ಮಾಡಿದ್ದಾರೆ.
ಟ್ರಂಪ್ ವಿರುದ್ಧ ಇದೇನಿದು ಆರೋಪ?
ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಸೇರಿದಂತೆ ಘಟಾನುಘಟಿ ನಾಯಕರೇ ಪ್ರಚಾರ ನಡೆಸುತ್ತಿದ್ದಾರೆ. ಕಮಲಾ ಹ್ಯಾರಿಸ್ ಗೆಲ್ಲಬೇಕು ಎಂಬ ಒನ್‌ಲೈನ್ ಅಜೆಂಡಾ ಇಟ್ಟುಕೊಂಡು ಈ ಹೋರಾಟ ನಡೆಯುತ್ತಿದೆ. ಇಂತಹ ವೇಳೆ, ಕಮಲಾ ಹ್ಯಾರಿಸ್ ಅವರು ಡೊನಾಲ್ಡ್ ಟ್ರಂಪ್ ಬಗ್ಗೆ 'ಅಸ್ಥಿರ ವ್ಯಕ್ತಿ' ಎಂಬ ಪದ ಬಳಸಿದ್ದು ಭಾರಿ ವೈರಲ್ ಆಗುತ್ತಿದೆ. ಕಮಲಾ ಹ್ಯಾರಿಸ್ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ 'ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಸ್ಥಿರ ವ್ಯಕ್ತಿ ಮತ್ತು ಸೇಡು ತೀರಿಸಿಕೊಳ್ಳುವ ಗುಣ ಇಟ್ಟುಕೊಂಡಿದ್ದಾರೆ' ಅಂತ ಆರೋಪಿಸಿದ್ದಾರೆ ಕಮಲಾ ಹ್ಯಾರಿಸ್ ಅವರು.
ಕಮಲಾ ಹ್ಯಾರಿಸ್ ಫುಲ್ ಆಕ್ಟಿವ್
ಅಂದಹಾಗೆ ಅಮೆರಿಕದಲ್ಲಿ ಇನ್ನೇನು ಮುಂದಿನ ವಾರವೇ ಅಂದ್ರೆ ನವೆಂಬರ್ 5ಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ 60 ವರ್ಷದ ಕಮಲಾ ಹ್ಯಾರಿಸ್ & 78 ವರ್ಷದ ಡೊನಾಲ್ಡ್ ಟ್ರಂಪ್ ಮುಖಾಮುಖಿ ತಿಕ್ಕಾಟ ಶುರು ಮಾಡಿದ್ದಾರೆ. ಹೀಗಿದ್ದಾಗ ಇಬ್ಬರೂ ಚುನಾವಣೆ ಪ್ರಚಾರದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ನಡೆಸುತ್ತಿದ್ದಾರೆ. ಕಮಲಾ ಹ್ಯಾರಿಸ್ ಈಗ ಮತ್ತಷ್ಟು ಗಟ್ಟಿಯಾಗಿ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅಮೆರಿಕದ ಮತದಾರ ಪ್ರಭುವಿನ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ.












Click it and Unblock the Notifications