• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾಚಿಯ ಕ್ಲಿಫ್ಟನ್ ಉಪನಗರದಲ್ಲೇ ದಾವೂದ್ ನೆಲೆ

By Mahesh
|

ಕರಾಚಿ, ಮೇ 12: ಪಾಕಿಸ್ತಾನದ ಕರಾಚಿಯಲ್ಲೇ 1993ರ ಮುಂಬೈ ಸರಣಿ ಸ್ಪೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಇರುವುದಕ್ಕೆ ಪ್ರಬಲ ಸಾಕ್ಷಿ ಸಿಕ್ಕಿದೆ. ರಾಚಿಯ ಕ್ಲಿಫ್ಟನ್ ಉಪನಗರದಲ್ಲಿರುವ ಬಂಗಲೆಯಲ್ಲಿ ಭೂಗತ ಪಾತಕಿ ದಾವೂದ್ ಇದ್ದಾನೆ ಎಂದು ಕುಟುಕು ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

ಆಫ್ಘನ್ ನಿರಾಶ್ರಿತನೊಬ್ಬನ ನೆರವಿನಿಂದ ಕರಾಚಿಯಲ್ಲಿ ದಾವೂದ್ ಬಂಗಲೆಯನ್ನು ಸುದ್ದಿವಾಹಿನಿ ತಂಡ ಪತ್ತೆ ಹಚ್ಚಿದೆ.ಕರಾಚಿಯ ಡಿ-13, ಬ್ಲಾಕ್-4 ನಿವಾಸದಿಂದ ದುಬೈಗೆ, ಮುಂಬೈಗೆ ಫೋನ್ ಕರೆಗಳು ಹೋಗುತ್ತಿರುವುದು, ದಾವೂದ್ ಪತ್ನಿ ಹಾಗೂ ದಾವೂದ್ ಹೆಸರಿನ ಪಾಸ್ ಪೋರ್ಟ್ ವಿವರಗಳು ಈಗಾಗಲೇ ಬಹಿರಂಗಗೊಂಡಿದೆ. ಕಳೆದ 23ವರ್ಷದಿಂದ ದಾವೂದ್ ಪಾಕಿಸ್ತಾನದ ನಿವಾಸಿಯಾಗಿ ಸುರಕ್ಷಿತವಾಗಿದ್ದಾನೆ ಎಂದು ತಿಳಿದು ಬಂದಿದೆ.

ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆಯ ವಿಡಿಯೋವನ್ನೂ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಅಧಿಕಾರಿಗಳು ಕೂಡಾ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಜತೆ ದಾವೂದ್ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಹಿಂದೂಸ್ತಾನ್ ಟೈಮ್ಸ್ ಹಾಗೂ ಸಿಎನ್ಎನ್ ನ್ಯೂಸ್ 18 ಸಹಭಾಗಿತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

English summary
The whereabouts of underworld don Dawood Ibrahim, wanted for the 1993 Mumbai serial blasts, have reportedly been found in Pakistan. Corroborating an earlier claim of Hindustan Times, CNN News18 said in a report that Ibrahim is indeed living in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more