ಕುವೈತ್ ಕನ್ನಡ ಕೂಟದ ದಾಸೋತ್ಸವ: ಭಾವತರಂಗ
ಕುವೈತ್, ಫೆಬ್ರವರಿ 28 : ಕುವೈತ್ ಕನ್ನಡ ಒಕ್ಕೂಟವು ತನ್ನ ಮೊದಲ ವರ್ಷದ ಕಾರ್ಯಕ್ರಮ ಭಾವತರಂಗವನ್ನು ಕುವೈತ್ ನಲ್ಲಿರುವ ಇಂಡಿಯನ್ ಕಮ್ಯುನಿಟಿ ಸೀನಿಯರ್ ಸ್ಕೂಲ್ ನ ಸಭಾಂಗಣದಲ್ಲಿ ನಡೆಸಿತು.
ದಾಸೋತ್ಸವದಲ್ಲಿ ವಿಶೇಷವಾಗಿ ಕಾಲಚಕ್ರ ಎನ್ನುವ ನಾಲ್ಕೂ ಯುಗಗಳ ಸಾರವನ್ನು ಹೇಳುವಂತಹ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತಿ ಭಾವ ಪೂರಿತ ಸಂತ, ದಾಸ, ಸತ್ಸಂಗ ಮಹಾತ್ಮರ ಜೀವನ ಮತ್ತು ಧ್ಯೇಯಗಳನ್ನು ಬಿಂಬಿಸುವ ಮತ್ತು ಕನ್ನಡ ನಾಡು ಪರಂಪರೆಯನ್ನು ಸಾರುವ ಹಾಡುಗಳು ಜನರ ಗಮನ ಸೆಳೆಯಿತು.

ಕೂಟದ ಸೃಜನ ಪ್ರತಿಭಾ ಅನಾವರಣದ ಪತ್ರಿಕೆ ಮರಳ ಮಲ್ಲಿಗೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಸುರೇಶ್ ಸಾಲಿಯಾನ್ ಅವರಿಂದ ನಗರಭಜನೆ ವಿಶೇಷವಾಗಿ ಮೂಡಿಬಂದಿತ್ತು. ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಬಸವರಾಜು, ಉಪಾಧ್ಯಕ್ಷರಾದ ತಾರೇಂದ್ರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಕಿರಣ್ ಹುಲಿಕಲ್ ಇದ್ದರು.












Click it and Unblock the Notifications