ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನ ಪ್ರಜೆಗಳನ್ನು ರಕ್ಷಿಸಲು 3 ಬಾರಿ ಮದುವೆ ಮುಂದೂಡಿದ ಪ್ರಧಾನಿ

|
Google Oneindia Kannada News

ಕೋಪನ್ ಹೇಗನ್, ಜೂನ್ 27: ತನ್ನ ದೇಶದ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ಎರಡು ಬಾರಿ ತನ್ನ ಮದುವೆಯನ್ನು ಮುಂದೂಡಿದ್ದ ಡೆನ್ಮಾರ್ಕ್ ದೇಶದ ಪ್ರಧಾನಿ ಮೆಟಿ ಫ್ರೆಡೆರಿಕ್ಸೆನ್, ಮೂರನೆಯ ಬಾರಿಯೂ ಮದುವೆಯನ್ನು ಮುಂದಕ್ಕೆ ಹಾಕಿದ್ದಾರೆ.

Recommended Video

Railway service to be cancelled till August 12th | Oneindia Kannada

"ಕೊನೆಗೂ ನನ್ನ ಮದುವೆಗೆ ದಿನ ನಿಗದಿಯಾಯಿತು ಎಂದು ಅಂದುಕೊಂಡಿದ್ದೆ. ಆದರೆ, ಇಯು ಶೃಂಗಸಭೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕಿರುವುದರಿಂದ, ಮೂರನೇ ಬಾರಿಯೂ ಮುಂದೂಡಬೇಕಾಯಿತು"ಎಂದು ಸಾಮಾಜಿಕ ತಾಣದಲ್ಲಿ ಫ್ರೆಡೆರಿಕ್ಸೆನ್ ಬರೆದುಕೊಂಡಿದ್ದಾರೆ.

ಜುಲೈ 15ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದುಜುಲೈ 15ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು

"ಈ ಅದ್ಭುತ ವ್ಯಕ್ತಿಯನ್ನು ವಿವಾಹವಾಗಲು ನಾನು ನಿಜವಾಗಿಯೂ ದಿನವನ್ನು ಎದುರು ನೋಡುತ್ತಿದ್ದೇನೆ" ಎಂದು ಫ್ರೆಡೆರಿಕ್ಸೆನ್, ವರ ಬೋ ಜೊತೆಗಿರುವ ಫೋಟೋ ಶೇರ್ ಮಾಡಿ ಫೇಸ್‌ಬುಕ್ ನಲ್ಲಿ ಪೋಸ್ಟ್‌ ಮಾಡಿದ್ದರು.

To Protect Denmarks Interest: Danish PM Postpones Wedding Third Time

"ಜುಲೈನಲ್ಲಿ ನಾವು ಮದುವೆಯಾಗಲು ಯೋಜಿಸಿದ್ದೆವು. ಆದರೆ, ಬ್ರುಸೆಲ್ಸ್ ನಲ್ಲಿ ನಡೆಯುವ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಬೇಕಿದೆ. ನನ್ನ ಕೆಲಸ ಮತ್ತು ಡೆನ್ಮಾರ್ಕ್‌ ದೇಶದ ಹಿತಾಸಕ್ತಿಯನ್ನು ನೋಡಿಕೊಳ್ಳಬೇಕಿದೆ. ಹಾಗಾಗಿ, ಮದುವೆಯನ್ನು ಮತ್ತೆ ಮುಂದೂಡಿದ್ದೇವೆ" ಎಂದು ಫ್ರೆಡೆರಿಕ್ಸೆನ್ ಹೇಳಿದ್ದಾರೆ.

"ನನ್ನ ಅದೃಷ್ಟ ಬೋ ತುಂಬಾ ತಾಳ್ಮೆಯಿಂದ ಇದ್ದಾರೆ. ಶೀಘ್ರದಲ್ಲೇ ನಾವು ಮದುವೆಯಾಗಲು ಸಾಧ್ಯವಾಗುತ್ತದೆ ಎನ್ನುವ ಆಶಾಭಾವನೆಯಲ್ಲಿದ್ದೇವೆ" ಎಂದು ಡೆನ್ಮಾರ್ಕ್‌ ದೇಶದ ಪ್ರಧಾನಿ ಮೆಟಿ ಫ್ರೆಡೆರಿಕ್ಸೆನ್ ಹೇಳಿದ್ದಾರೆ.

ಮಾಸ್ಕ್‌ ಎಲ್ಲಿಯವರೆಗೆ ಧರಿಸಬೇಕು: ನರೇಂದ್ರ ಮೋದಿ ಏನಂದ್ರು?ಮಾಸ್ಕ್‌ ಎಲ್ಲಿಯವರೆಗೆ ಧರಿಸಬೇಕು: ನರೇಂದ್ರ ಮೋದಿ ಏನಂದ್ರು?

27 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರ ಯುರೋಪಿಯನ್ ಕೌನ್ಸಿಲ್ ಸಭೆ ಬ್ರುಸೆಲ್ಸ್ ನಲ್ಲಿ ನಡೆಯಲಿದೆ. ಕೊರೊನಾ ವೈರಸ್ ಲಾಕ್‌ಡೌನ್ ನಿಂದಾಗಿ ಈ ಸಭೆ ನಡೆದಿರಲಿಲ್ಲ.

English summary
To Protect Denmark's Interest": Danish PM Postpones Wedding Third Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X