ಮಂಗಳದ ಅಂಗಳದಲ್ಲಿ ಹಳೆ ಸರೋವರ ಪತ್ತೆ ಹಚ್ಚಿದ ಕ್ಯೂರಿಯಾಸಿಟಿ
ಬೆಂಗಳೂರು, ಅಕ್ಟೋಬರ್ 08: ಅಮೆರಿಕದ ನಾಸಾದ ಕ್ಯುರಿಯಾಸಿಟಿ ರೋವರ್ ಮಂಗಳದ ಅಂಗಳದಲ್ಲಿ 'ಓಯಸಿಸ್' ಪತ್ತೆ ಹಚ್ಚಿದೆ. 2012ರಲ್ಲಿ ಮಂಗಳನ ಅಂಗಳದಲ್ಲಿ ಬೆಟ್ಟ ಗುಡ್ಡಗಳ ನಡುವೆ ಲವಣಾಂಶವಿರುವ ಕೆಸರಿನ ಕಣಗಳುಳ್ಳ ಸರೋವರವನ್ನು ಪತ್ತೆ ಹಚ್ಚಿದೆ.
ಒಣ ಪ್ರಾಚೀನ ಸರೋವರ ಗಾಲೆ ಕ್ರೇಟರ್ ಅನ್ವೇಷಣೆಯಲ್ಲಿ ಹೊಸ ಮೈಲಿಗಲ್ಲು ಇದಾಗಿದೆ. ಸಲ್ಫೇಟ್ ಲವಣಾಂಶವಿರುವ ಕೆಸರಿನ ಕಣಗಳನ್ನು ರೋವರ್ ಪತ್ತೆಹಚ್ಚಿದ್ದು, ಹಿಂದೊಮ್ಮೆ ಉಪ್ಪಿನ ಸರೋವರವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.
ಮಂಗಳನ ವಿವಿಧ ಪ್ರದೇಶಗಳಲ್ಲಿ ರೋವರ್ ಪತ್ತೆ ಹಚ್ಚಿದ ಉಪ್ಪಿನ ಶ್ರೇಣಿಯನ್ನು ಪ್ರಾಚೀನ ಕಾಲದ ಉಪ್ಪು ನೀರಿನ ಸರೋವರದ ಕುರುಹು ಎಂದು ಸಂಶೋಧಕರು ಅರ್ಥೈಸಿದ್ದಾರೆ. ಮಂಗಳನ ಮೇಲ್ಮೈನಲ್ಲಿ ಉಪ್ಪು ನೀರಿನ ರಚನೆ ಅಧಿಕವಾಗಿ ಕಂಡುಬಂದಿದ್ದು, ಈ ಗ್ರಹವು 3.5 ಬಿಲಿಯನ್ ವರ್ಷಗಳ ಹಿಂದೆ ಶುಷ್ಕ(arid) ಹವಾಮಾನಕ್ಕೆ ಬದಲಾಗಿದೆ ಎನ್ನಲಾಗಿದೆ.

ಇದೀಗ ಪತ್ತೆಯಾಗಿರುವ ಸಲ್ಫೇಟ್ ಲವಣವು 3.3 ಮತ್ತು 3.7 ಬಿಲಿಯನ್ ವರ್ಷಗಳ ಹಿಂದಿನ ಸೆಡಿಮೆಂಟರಿ ಬಂಡೆಗಳ ಮೇಲೆ ಕಂಡುಬಂದಿದೆ. ಮಂಗಳ ಗ್ರಹದ ಶುಷ್ಕ ಪರಿಸರದಿಂದಾಗಿ ಕ್ರೇಟರ್ ಲೇಕ್ ಆವಿಯಾಗಿದೆ ಎಂಬುದನ್ನು ಈಗ ಸಿಕ್ಕಿರುವ ಉಪ್ಪಿನಾಂಶ ಸಾಬೀತುಪಡಿಸಿದೆ. ಈ ಬಂಡೆಗಳು ಉಪ್ಪಿನಾಂಶದ ಅಧ್ಯಯನ ನಡೆಸಿದರೆ ಮಂಗಳದ ಮೇಲ್ಮೈ ಹೇಗೆ ಒಣಗಿತು ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು ಎಂದು ನಾಸಾ ಹೇಳಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications