ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತನ್ನ ವರದಿಗಾರನನ್ನು ಬಂಧಿಸಿ ಥಳಿತ' ಬಿಬಿಸಿ ಆರೋಪದ ಬಳಿಕ ಚೀನಾ ಪ್ರತಿಕ್ರಿಯೆ

|
Google Oneindia Kannada News

ಬೀಜಿಂಗ್ ನವೆಂಬರ್ 28: ವಾರಾಂತ್ಯದಲ್ಲಿ ಶಾಂಘೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಂಧಿತ ಬಿಬಿಸಿ ವರದಿಗಾರ ತನ್ನನ್ನು ಪತ್ರಕರ್ತ ಎಂದು ಗುರುತಿಸಿಕೊಂಡಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ.

ದೇಶದ ಶೂನ್ಯ-ಕೋವಿಡ್ ನೀತಿಯ ವಿರುದ್ಧ ಪ್ರತಿಭಟನೆಗಳನ್ನು ವರದಿ ಮಾಡುವಾಗ ಚೀನಾದಲ್ಲಿ ತನ್ನ ಪತ್ರಕರ್ತರೊಬ್ಬರನ್ನು ಪೊಲೀಸರು ಬಂಧಿಸಿ ಥಳಿಸಿದ್ದಾರೆ ಎಂದು ಬಿಬಿಸಿ ಭಾನುವಾರ ಹೇಳಿದೆ. ಚೀನಾದ ಪ್ರಮುಖ ನಗರಗಳಲ್ಲಿ ಭಾನುವಾರ ನೂರಾರು ಜನರು ಬೀದಿಗಿಳಿದಿದ್ದು, ಶೂನ್ಯ-ಕೋವಿಡ್ ನೀತಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶಾಂಘೈ ಸೇರಿದಂತೆ ಚೀನಾದ ಅನೇಕ ನಗರಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಈ ವೇಳೆ ತನ್ನ ಪತ್ರಕರ್ತರನ್ನು ಬಂಧಿಸಿದ್ದಾರೆ ಎಂದು ಬಿಬಿಸಿ ಹೇಳಿಕೊಂಡಿತ್ತು.

ಕೋವಿಡ್ ಪ್ರತಿಭಟನೆ: ವರದಿ ಮಾಡುತ್ತಿದ್ದ ಬಿಬಿಸಿ ಪತ್ರಕರ್ತರನ್ನು ಬಂಧಿಸಿದ ಚೀನಾಕೋವಿಡ್ ಪ್ರತಿಭಟನೆ: ವರದಿ ಮಾಡುತ್ತಿದ್ದ ಬಿಬಿಸಿ ಪತ್ರಕರ್ತರನ್ನು ಬಂಧಿಸಿದ ಚೀನಾ

ಆದರೆ ಬಿಬಿಸಿ ಹೇಳಿಕೆ ಸುಳ್ಳು. ವ್ಯಕ್ತಿ ಬಂಧನದ ವೇಳೆ ತಾನು ಬಿಬಿಸಿ ವರದಿಗಾರ ಎಂದು ಹೇಳಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ. "ಬಂಧಿತ ವ್ಯಕ್ತಿ ಅವರು ತಮ್ಮನ್ನು ತಾವು ಪತ್ರಕರ್ತ ಎಂದು ಗುರುತಿಸಿಕೊಳ್ಳಲಿಲ್ಲ ಮತ್ತು ಅವರ ಪ್ರೆಸ್ ಐಡಿಯನ್ನು ಸ್ವಯಂಪ್ರೇರಣೆಯಿಂದ ಪ್ರಸ್ತುತಪಡಿಸಲಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದರು, "ಚೀನಾದಲ್ಲಿರುವಾಗ ಚೀನಾದ ಕಾನೂನು ಮತ್ತು ನಿಬಂಧನೆಗಳನ್ನು ಅನುಸರಿಸಲು" ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಸೂಚನೆ ನೀಡಿದರು.

Covid protest: Chinas reaction after BBC accusations

ಆಗಿದ್ದೇನು?

ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏರಿಕೆಯಾದ ಬೆನ್ನಲ್ಲೇ ಹಲವೆಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಕ್ಸಿಂಜಿಯಾಂಗ್ ಪ್ರದೇಶದ ರಾಜಧಾನಿ ಉರುಂಕಿಯಲ್ಲಿನ ಬಹುಮಹಡಿ ಕಟ್ಟಡಕ್ಕೆ ಕಳೆದ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಅನೇಕ ಜನ ಕಟ್ಟಡದಲ್ಲಿ ಮೃತಪಟ್ಟಿದ್ದಾರೆ. ಕೊರೊನಾದಿಂದಾಗಿ ಈ ಕಟ್ಟಡವನ್ನು ಭಾಗಶ: ಲಾಕ್‌ಡೌನ್‌ ಮಾಡಿದ್ದರಿಂದ ಜನ ಹೊರಬರಲು ಆಗದೆ ಸಾವನ್ನಪ್ಪಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಈ ಘಟನೆ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಚೀನಾದ ಅತಿ ಹೆಚ್ಚು ಜನಸಂಖ್ಯೆಯ ನಗರ ಮತ್ತು ಆರ್ಥಿಕ ಹಬ್ ಶಾಂಘೈನಲ್ಲಿನ ವುಲುಮುಖಿ ರಸ್ತೆಯಲ್ಲಿ ಶನಿವಾರ ರಾತ್ರಿ ಸೇರಿಕೊಂಡ ನಿವಾಸಿಗಳು ಭಾನುವಾರ ಮುಂಜಾನೆ ಬೃಹತ್ ಪ್ರತಿಭಟನೆ ಆರಂಭಿಸಿದರು."ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಧಿಕ್ಕಾರ, ಕ್ಸಿ ಜಿನ್‌ಪಿಂಗ್‌ಗೆ ಧಿಕ್ಕಾರ, ಉರುಂಕಿಯನ್ನು ಸ್ವತಂತ್ರಗೊಳಿಸಿ" ಎಂದೂ ದೊಡ್ಡ ಗುಂಪೊಂದು ಘೋಷಣೆ ಕೂಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸರ್ವಾಧಿಕಾರ ಆಡಳಿತದ ಚೀನಾದಲ್ಲಿ ಸರ್ಕಾರಿ ವಿರೋಧಿ ಸಾರ್ವಜನಿಕ ಪ್ರತಿಭಟನೆಗಳು ತೀರಾ ಅಪರೂಪದ್ದಾಗಿದೆ. ಪೊಲೀಸರು ಈ ಗುಂಪುಗಳನ್ನು ಚೆದುರಿಸಿ ಪ್ರತಿಭಟನೆ ವಿಫಲಗೊಳಿಸಲು ಪ್ರಯತ್ನಿಸಿದ್ದಾರೆ.

ಈ ಶಾಂಘೈನಲ್ಲಿ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಂಧಿಸಿ ಕೈಕೋಳ ಹಾಕಲ್ಪಟ್ಟ ಬಿಬಿಸಿ ಪತ್ರಕರ್ತ ಎಡ್ ಲಾರೆನ್ಸ್ ಅವರನ್ನು ಸ್ಥಳೀಯ ಪೊಲೀಸರು ಥಳಿಸಿದ್ದಾರೆ ಎನ್ನಲಾಗುತ್ತಿದೆ.

English summary
China's Foreign Ministry has responded to the BBC, which accused the Chinese police of arresting and beating its reporter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X