ಈಜಿಪ್ಟ್; ಮರಣದಂಡನೆ ಪ್ರಕ್ರಿಯೆ ನೇರ ಪ್ರಸಾರಕ್ಕೆ ಅವಕಾಶ
ಕೈರೋ ಜುಲೈ 25: ಸ್ತ್ರೀಹತ್ಯೆಯ ಅಪರಾಧಿಗಳ ಮರಣದಂಡನೆ ಕಾನೂನನ್ನು ಈಜಿಪ್ಟ್ ನ್ಯಾಯಾಲಯ ತಿದ್ದುಪಡಿ ಮಾಡಿದೆ. ಮಹಿಳೆಯರ ಹತ್ಯೆಯ ಅಪರಾಧಿಗಳ ಮರಣದಂಡನೆಯನ್ನು ನೇರ ಪ್ರಸಾರ ಮಾಡಲು ಈಜಿಪ್ಟ್ ನ್ಯಾಯಾಲಯ ಆದೇಶಿಸಿದೆ. ಸಾಮಾನ್ಯವಾಗಿ ಗಲ್ಲು ಶಿಕ್ಷೆ ಅಥವಾ ಮರಣದಂಡನೆ ನೇರ ಪ್ರಸಾರಕ್ಕಾಗಲಿ ಅಥವಾ ವೀಕ್ಷಣೆಗಾಗಲಿ ಅವಕಾಶ ಇಲ್ಲ. ಆದರೆ ಸ್ತ್ರೀಹತ್ಯೆಗಳನ್ನು ನಿಲ್ಲಿಸುವ ಉದ್ದೇಶದಿಂದ ಈ ತಿದ್ದುಪಡಿ ಮಾಡಲಾಗಿದೆ.
ಈಜಿಪ್ಟ್‌ನಲ್ಲಿ ಬಾಲಕಿಯ ಕೊಲೆ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಕಳೆದ ತಿಂಗಳು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ನೈರಾ ಅಶ್ರಫ್ ಯೋಜಿತ ಕೊಲೆ ಪ್ರಕರಣದಲ್ಲಿ ಮೊಹಮ್ಮದ್ ಆದಿಲ್ ತಪ್ಪಿತಸ್ಥ ಎಂದು ಸಾಬೀತಾಗಿದೆ. ಆದಿಲ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಇದರ ನೇರ ಪ್ರಸಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ.
ಕೈರೋದ ಉತ್ತರಕ್ಕೆ 130 ಕಿಲೋಮೀಟರ್ (80 ಮೈಲಿ) ದೂರದಲ್ಲಿರುವ ಮನ್ಸೌರಾದಲ್ಲಿ ಆದಿಲ್‌ಗೆ ಶಿಕ್ಷೆ ವಿಧಿಸಿದ ಕ್ರಿಮಿನಲ್ ನ್ಯಾಯಾಲಯ, ಮರಣದಂಡನೆಯನ್ನು ನಿಯಂತ್ರಿಸುವ ಕಾನೂನನ್ನು ತಿದ್ದುಪಡಿ ಮಾಡಲು ಶಾಸಕಾಂಗಕ್ಕೆ ಕರೆ ನೀಡಿದೆ. ಇದರಿಂದಾಗಿ ಮರಣದಂಡನೆಗಳನ್ನು ನೇರ ಪ್ರಸಾರ ಮಾಡಬಹುದು. ಸಂಸತ್ತಿಗೆ ಬರೆದ ಪತ್ರದಲ್ಲಿ ಅಪರಾಧಿಯನ್ನು ಶಿಕ್ಷಿಸುವ ಮೂಲಕ ಈ ತಪ್ಪನ್ನು ಮತ್ತೆ ಮಾಡದ ಸಂದೇಶವನ್ನು ರವಾನಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಅಪರಾಧಿಗೆ ನೀಡಿದ ಶಿಕ್ಷೆ ಹಾಗೂ ಅದರ ಪರಿಣಾಮಗಳನ್ನು ಜನರು ನೋಡಿದಾಗ, ಅವರು ಅಪರಾಧ ಮಾಡಲು ಹೆದರುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

1998 ರಲ್ಲಿ ಮೂವರ ಮರಣದಂಡನೆ ಪ್ರಸಾರ
ಜೂನ್‌ನಲ್ಲಿ ಕೊಲೆಗಾರನ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆದಿಲ್ ಮನ್ಸೌರಾದಲ್ಲಿನ ತನ್ನ ವಿಶ್ವವಿದ್ಯಾಲಯದ ಹೊರಗೆ ವಿದ್ಯಾರ್ಥಿಗೆ ಇರಿದಿರುವುದನ್ನು ತೋರಿಸುತ್ತದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ, ಈಜಿಪ್ಟ್‌ನಲ್ಲಿ ಕೊಲೆಗೆ ಗರಿಷ್ಠ ಶಿಕ್ಷೆ ಮರಣ ದಂಡನೆಯಾಗಿದೆ. ಕಳೆದ ವರ್ಷ ಈಜಿಪ್ಟ್ ಮೂರನೇ ಅತಿ ಹೆಚ್ಚು ಮರಣದಂಡನೆಗಳನ್ನು ಜಾರಿಗೊಳಿಸಿತು. ಮರಣದಂಡನೆಯನ್ನು ಸಾರ್ವಜನಿಕವಾಗಿ ವಿರಳವಾಗಿ ನೀಡಲಾಗುತ್ತದೆ. ಇದಕ್ಕೂ ಮೊದಲು ರಾಷ್ಟ್ರೀಯ ದೂರದರ್ಶನ 1998 ರಲ್ಲಿ ಮೂವರ ಮರಣದಂಡನೆಯನ್ನು ಪ್ರಸಾರ ಮಾಡಿತ್ತು. ಈ ಪುರುಷರು ರಾಜಧಾನಿ ಕೈರೋದ ಮನೆಯೊಂದರಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಕೊಂದಿದ್ದರು.

ಟಿವಿ ನಿರೂಪಕಿ ಶೈಮಾ ಜಮಾಲ್ ಅವರ ಹತ್ಯೆ
ಇತ್ತೀಚಿನ ತಿಂಗಳುಗಳಲ್ಲಿ ಈಜಿಪ್ಟ್‌ನಲ್ಲಿ ಹೆಚ್ಚೆಚ್ಚು ಮಹಿಳೆಯರ ಹತ್ಯೆಗಳು ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿವೆ. ಜೂನ್‌ನಲ್ಲಿ ಟಿವಿ ನಿರೂಪಕಿ ಶೈಮಾ ಜಮಾಲ್ ಅವರ ಹತ್ಯೆ ಉತ್ತರ ಆಫ್ರಿಕಾದ ದೇಶದಲ್ಲಿ ವಿವಾದವನ್ನು ಹುಟ್ಟುಹಾಕಿತು. ಮಾರ್ಚ್‌ನಲ್ಲಿ, ಶಾಲಾ ವಿದ್ಯಾರ್ಥಿನಿಯ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಹದಿಹರೆಯದ ಆರೋಪಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಮಹಿಳೆಯರ ಹಕ್ಕುಗಳಿಗೆ ಕಡಿವಾಣ
ಈಜಿಪ್ಟ್‌ನಲ್ಲಿನ ಪಿತೃಪ್ರಭುತ್ವದ ಕಾನೂನು ಮತ್ತು ಇಸ್ಲಾಂನ ಸಂಪ್ರದಾಯವಾದಿ ವ್ಯಾಖ್ಯಾನಗಳು ಮಹಿಳೆಯರ ಹಕ್ಕುಗಳನ್ನು ತೀವ್ರವಾಗಿ ಸೀಮಿತಗೊಳಿಸಲು ಕೊಡುಗೆ ನೀಡಿವೆ. 2015 ರಲ್ಲಿ ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ, ಸುಮಾರು ಎಂಟು ಮಿಲಿಯನ್ ಈಜಿಪ್ಟ್ ಮಹಿಳೆಯರು ತಮ್ಮ ಪಾಲುದಾರರು ಅಥವಾ ಸಂಬಂಧಿಕರು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತರಿಂದ ಹಿಂಸೆಗೆ ಬಲಿಯಾಗಿದ್ದಾರೆ.

ಅನೇಕ ವಿದ್ವಾಂಸರು ಹಾಗೂ ರಾಜನೀತಿಜ್ಞರು ವಾದಗಳು
ಅಮೆರಿಕಾ, ಭಾರತ, ಚೀನಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳಲ್ಲಿ ಮರಣದಂಡನೆ ಅಥವಾ ಗಲ್ಲು ಶಿಕ್ಷೆ ಜಾರಿಯಲ್ಲಿದೆಯಾದರೂ ಮುಂದುವರೆಯುತ್ತಿರುವ ಅನೇಕ ರಾಷ್ಟ್ರಗಳಲ್ಲಿ ‘ಗಲ್ಲು ಶಿಕ್ಷೆ' ಜಾರಿಯಲ್ಲಿಲ್ಲ. ಅಂತಹ ದೇಶಗಳಲ್ಲಿ ಯಾವುದೇ ಶಿಕ್ಷೆ ಮಾಡಿದರೂ ಜೀವನ ಪರ್ಯಂತ ಸೆರೆಮನೆ ವಾಸ ಅನುಭವಿಸಬೇಕಾಗುತ್ತದೆ. ಮರಣದಂಡನೆಯನ್ನು ‘ಮಾನವ ಹಕ್ಕುಗಳ ಉಲ್ಲಂಘನೆ' ಎಂದೇ ಅನೇಕ ವಿದ್ವಾಂಸರು ಹಾಗೂ ರಾಜನೀತಿಜ್ಞರು ಪ್ರತಿಪಾದಿಸುತ್ತಾರೆ.
ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುವುದರಿಂದ ಬಲವಂತವಾಗಿ ಗಲ್ಲಿಗೇರಿಸುವುದು ದಮನಕಾರಿ ನೀತಿ ಮಾತ್ರವಲ್ಲದೆ, ಅದೊಂದು ಅಮಾನವೀಯ ಹಾಗೂ ಅನಾಗರೀಕ ಶಿಕ್ಷಾ ಸ್ವರೂಪ ಎಂದು ವಾದಿಸುತ್ತಾರೆ. ಆದರೆ ಈ ವಾದಕ್ಕೆ ಪ್ರತಿ ವಾದವನ್ನು ಮಂಡಿಸುವ ಮರಣದಂಡನೆ ಶಿಕ್ಷಾಪರರು ‘ಮರಣದಂಡನೆ' ಶಿಕ್ಷೆ ಇಲ್ಲದೆ ಹೋದರೆ ಅಂತಹ ದೇಶಗಳಲ್ಲಿ ಅರಾಜಕತೆ, ಅನಿಶ್ಚಿತತೆ ಮನೆ ಮಾಡುತ್ತದೆ ಮಾತ್ರವಲ್ಲದೆ, ಅಂತಹ ದೇಶಗಳಲ್ಲಿ ಕಾನೂನಾತ್ಮಕ ಆಡಳಿತ (ರೂಲ್ ಆಫ್ ಲಾ) ಇರುವುದಿಲ್ಲವೆಂದು ಹೇಳುತ್ತಾರೆ.
ಅದೂ ಅಲ್ಲದೆ ‘ಮರಣದಂಡನೆ' ಶಿಕ್ಷೆಯನ್ನು ಸಾರಾಸಗಟಾಗಿ, ವಿವೇಚನೆ ಇಲ್ಲದೆ ಎಲ್ಲಾ ರೀತಿಯ ಅಪರಾಧಿಗಳ ಮೇಲೂ ವಿಧಿಸಲಾಗುವುದಿಲ್ಲ. ಬದಲಿಗೆ ವಿರಾಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ವಿಧಿಸಲಾಗುತ್ತದೆ. ಸ್ವಾತಂತ್ರ್ತೋತ್ತರ ಭಾರತದ ಇತಿಹಾಸ ಅವಲೋಕಿಸಿದರೆ, ಮರಣದಂಡನೆಯನ್ನು ಅತ್ಯಂತ ವಿರಳ ಪ್ರಸಂಗಗಳಲ್ಲಿ ಮಾತ್ರ ವಿಧಿಸಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications