ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಸಂಜೆ 5 ಗಂಟೆಯ ವರೆಗೆ ಕೊರೊನಾ ವೈರಸ್ ಗೆ ವಿಶ್ರಾಂತಿ!

|
Google Oneindia Kannada News

ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಸ್ ಗೆ ಜಾತಿ, ಧರ್ಮದ ಬೇಧಭಾವವಿಲ್ಲ, ಯಾರೋ ಕೆಲವರು ಮಾಡಿದ ತಪ್ಪಿಗಾಗಿ, ಇಡೀ ಸಮುದಾಯವನ್ನು ದೂಷಿಸುವುದು ತರವಲ್ಲ ಎಂದು, ಭಾರತದ ಪ್ರಧಾನಿ, ಸಿಎಂ ಬಿಎಸ್ವೈ ಹೇಳಿದ್ದರು.

ಪಾಕಿಸ್ತಾನದಲ್ಲಿ ಜನರನ್ನು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಹೇಗೆ ಯಾಮಾರಿಸುತ್ತಾರೆ ಎನ್ನುವುದಕ್ಕೆ ಈ ಸುದ್ದಿಯೊಂದು ಉತ್ತಮ ಉದಾಹರಣೆಯಾಗಬಲ್ಲದು. ಮುಸ್ಲಿಮರ ಪವಿತ್ರ ಈದ್-ಉಲ್-ಫಿತರ್ (ರಮ್ಜಾನ್) ಮಾಸ ಈಗ ಚಾಲ್ತಿಯಲ್ಲಿದೆ.

ವಿಚಿತ್ರ ಕಾರಣಕ್ಕಾಗಿ ಪಾಕಿಸ್ತಾನಿಗಳ ಬಳಿ ಭಿಕ್ಷೆ ಬೇಡಿದ ಜಾವೇದ್ ಮಿಯಾಂದಾದ್ ವಿಚಿತ್ರ ಕಾರಣಕ್ಕಾಗಿ ಪಾಕಿಸ್ತಾನಿಗಳ ಬಳಿ ಭಿಕ್ಷೆ ಬೇಡಿದ ಜಾವೇದ್ ಮಿಯಾಂದಾದ್

ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಅರ್ಭಟ ಜೋರಾಗಿಯೇ ಇದೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 37ಸಾವಿರ ದಾಟಿದ್ದು, ಇದುವರೆಗೆ, 800ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ, ಜನರು, "ಕೊರೊನಾ ಜೊತೆ ಬದುಕಲು ಕಲಿಯಬೇಕು"ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳುವ ಮೂಲಕ, ಲಾಕ್ ಡೌನ್ ಸಡಿಲಿಸುವ ಸೂಚನೆಯನ್ನು ನೀಡಿದ್ದಾರೆ.

Coronavirus Will Spread Only After 5PM In Pakistan: Funny Video Clipping Viral

ವಿಚಾರ ಅದಲ್ಲ. ಪಾಕಿಸ್ತಾನದಲ್ಲಿ ಹೇಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದರೆ, ಸಂಜೆ ಐದು ಗಂಟೆಯವರೆಗೆ ಕೊರೊನಾ ವೈರಸ್ ಹರಡುವುದಿಲ್ಲ. ಏನಿದ್ದರೂ, ಅದರ ಸೋಂಕು ಹರಡುವುದು ಸಂಜೆ ಐದು ಗಂಟೆಯ ನಂತರ ಎನ್ನುವುದನ್ನು ಜನರ ಮನಸ್ಸಿಗೆ ಬಿತ್ತಲಾಗುತ್ತಿದೆ.

ಪಾಕಿಸ್ತಾನದ ಟಿವಿ ವಾಹಿನಿಯೊಂದರ, ಖ್ಯಾತ ಇತಿಹಾಸ ತಜ್ಞ ಮತ್ತು ಟಿವಿ ನಿರೂಪಕರೂ ಆಗಿರುವ ಕಮ್ರನ್ ಶಹೀದ್ ನಿರೂಪಣೆ ಮಾಡುತ್ತಿದ್ದ ಸುದ್ದಿಯ ಕ್ಲಿಪ್ಪಿಂಗ್ ಒಂದು ವೈರಲ್ ಆಗಿದ್ದು. ಇದರಲ್ಲಿ ಕಮ್ರನ್, ಪಾಕಿಸ್ತಾನದಲ್ಲಿ ಈ ರೀತಿಯ ಸುದ್ದಿಯನ್ನು ಹರಿಯಬಿಡಲಾಗಿದೆ ಎಂದು ಹೇಳಿದ್ದಾರೆ.

ಬದರಿನಾಥ ದೇವಾಲಯ ತೆರೆದಾಗ ನಡೆದ ಅಪರೂಪದ ವಿಸ್ಮಯ, ದೇಶಕ್ಕೆ ಶುಭ ಸೂಚನೆ ಬದರಿನಾಥ ದೇವಾಲಯ ತೆರೆದಾಗ ನಡೆದ ಅಪರೂಪದ ವಿಸ್ಮಯ, ದೇಶಕ್ಕೆ ಶುಭ ಸೂಚನೆ

ಐದು ಗಂಟೆಯ ಮುಂಚೆ ಕೊರೊನಾ ಇರುವುದಿಲ್ಲ. ಹಾಗಾಗಿ, ಈ ಸಮಯದಲ್ಲಿ ಜನರು ಏನು ಬೇಕಾದರೂ ಮಾಡಬಹುದು, ಮನೆಯಿಂದ ಹೊರಗೆ ಬಂದು ವಸ್ತುಗಳನ್ನು ಖರೀದಿಸಬಹುದು. ಐದು ಗಂಟೆಯ ನಂತರ ಮನೆಯಿಂದ ಹೊರಗೆ ಬರಬೇಡಿ ಎನ್ನುವ ಸುದ್ದಿಯನ್ನು ಹಬ್ಬಿಸಲಾಗಿದೆ. ಐದು ಗಂಟೆಯ ಮೇಲೆ ಕೊರೊನಾ ಹರಡುತ್ತದೆ ಎನ್ನುವುದು ಇಡೀ ವಿಶ್ವಕ್ಕೆ ಒಂದು ಸುದ್ದಿಯಾಗಿದೆ ಎಂದು ಕಮ್ರನ್ ಹೇಳಿರುವುದು ಕ್ಲಿಪಿಂಗ್ ನಲ್ಲಿ ದಾಖಲಾಗಿದೆ.

English summary
Coronavirus Will Spread Only After 5PM In Pakistan: Funny Video Clipping Viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X