ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಚೀನಾ ಲ್ಯಾಬ್‌ನಿಂದ ಸೋರಿಕೆಯಾಗಿದ್ದಲ್ಲ: WHO

|
Google Oneindia Kannada News

ಬೀಜಿಂಗ್, ಫೆಬ್ರವರಿ 9: ಕೊರೊನಾ ವೈರಸ್ ಚೀನಾದ ಲ್ಯಾಬ್‌ನಿಂದ ಸೋರಿಕೆಯಾಗಿರುವ ಸಾಧ್ಯತೆ ತೀರಾ ಕಡಿಮೆ. ಅದು ಪ್ರಾಣಿಯೊಂದರಿಂದ ಮನುಷ್ಯರಿಗೆ ತಗುಲಿರುವ ಸಂಭವವೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ಮಂಗಳವಾರ ಹೇಳಿದ್ದಾರೆ.

ಚೀನಾದ ಕೇಂದ್ರ ನಗರ ವುಹಾನ್‌ಗೆ ಭೇಟಿ ನೀಡಿದ ಕೊನೆಯಲ್ಲಿ ಒಟ್ಟಾರೆ ಅಧ್ಯಯನದ ಮೌಲ್ಯನಿರ್ಣಯ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಹಾರ ಸುರಕ್ಷತೆ ಮತ್ತು ಪ್ರಾಣಿ ಕಾಯಿಲೆ ವಿಭಾಗದ ಪರಿಣತ ಪೀಟರ್ ಬೆನ್ ಎಂಬಾರ್ಕ್ ಈ ಹೇಳಿಕೆ ನೀಡಿದ್ದಾರೆ.

ಹೊಸ ಕೊರೊನಾ ವೈರಸ್‌ ಮೇಲೆ ಲಸಿಕೆ ಪರಿಣಾಮದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಆತಂಕ ಹೊಸ ಕೊರೊನಾ ವೈರಸ್‌ ಮೇಲೆ ಲಸಿಕೆ ಪರಿಣಾಮದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಆತಂಕ

ಚೀನಾದ ವುಹಾನ್ ವೈರಾಣು ಸಂಸ್ಥೆಯು ಭಾರಿ ಪ್ರಮಾಣದಲ್ಲಿ ವೈರಸ್ ಮಾದರಿಗಳನ್ನು ಸಂಗ್ರಹಿಸುತ್ತಿತ್ತು. ಹೀಗಾಗಿ ಈ ಸಂಸ್ಥೆಯ ಲ್ಯಾಬೊರೇಟರಿಯಿಂದಲೇ ವೈರಸ್ ಸೋರಿಕೆಯಾಗಿ, ಜನ ಸಮುದಾಯಕ್ಕೆ ಹರಡಿದೆ ಎಂದು ಆರೋಪಿಸಲಾಗಿತ್ತು. ಕೊರೊನಾ ವೈರಸ್ ತನ್ನ ನೆಲದಲ್ಲಿ ಹುಟ್ಟಿದ್ದೇ ಅಲ್ಲ, ಅದು ಬೇರೆ ದೇಶದಿಂದ ತನ್ನಲ್ಲಿಗೆ ಬಂದಿರುವುದು ಎಂದು ಚೀನಾ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸುತ್ತಾ ಬಂದಿದೆ.

 Coronavirus Unlikely To Have Leaked From Chinas Wuhan Virology Lab: WHO

ಕೊರೊನಾ ವೈರಸ್ ಮೂಲದ ಬಗ್ಗೆ ಅಧ್ಯಯನ ಮಾಡಲು ವುಹಾನ್‌ಗೆ ತೆರಳಿರುವ ಡಬ್ಲ್ಯೂಎಚ್‌ಒ ತಜ್ಞರ ತಂಡವು ಕಾಯಿಲೆಯು ಮನುಷ್ಯರಿಗೆ ಮೊದಲು ಹೇಗೆ ಹರಡಿತು ಎಂಬುದನ್ನು ಕಂಡುಕೊಳ್ಳಲು ಅನೇಕ ಬಗೆಯ ತರ್ಕಗಳನ್ನು ಪರಿಶೀಲಿಸುತ್ತಿದೆ.

'ನಮ್ಮ ಆರಂಭದ ಅಧ್ಯಯನದಲ್ಲಿ ಕಂಡುಕೊಂಡ ಸಂಗತಿಗಳ ಪ್ರಕಾರ ಮನುಷ್ಯರಿಗೆ ಸೋಂಕು ಹರಡಲು ಮಧ್ಯವರ್ತಿಯಾಗಿ ಕೆಲವು ಜೀವಿಗಳು ಕೆಲಸ ಮಾಡಿವೆ. ಇದರಲ್ಲಿ ಮತ್ತಷ್ಟು ನಿಖರತೆ ಸಿಗಲು ಇನ್ನೂ ಆಳವಾದ ಅಧ್ಯಯನದ ಅಗತ್ಯವಿದೆ' ಎಂದು ಎಂಬಾರ್ಕ್ ತಿಳಿಸಿದ್ದಾರೆ.

 ಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರು ಮೊದಲ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ವುಹಾನ್ ಆಸ್ಪತ್ರೆಯಲ್ಲಿ WHO ತಜ್ಞರು

'ಆದರೆ ವೈರಸ್‌ಗಳು ಪ್ರಯೋಗಾಲಯದಿಂದ ಸೋರಿಕೆಯಾಗಿರುವುದು ಎಂಬ ಕಲ್ಪನೆಗಳು ಬಹುತೇಕ ತಪ್ಪು ಎಂದು ನಮ್ಮ ಅಧ್ಯಯನಗಳು ತೋರಿಸಿವೆ. ಶೀತಲೀಕರಿಸಿದ ಉತ್ಪನ್ನಗಳ ಮೂಲಕವೂ ವೈರಸ್ ಹರಡಿರಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
WHO team said the Coronavirus in unlikely to have leaked from Wuhan Institute of Virology lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X