ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಚೀನಾ ಮಾರುಕಟ್ಟೆಯಲ್ಲಿ ಕೊವಿಡ್-19 ಹರಡುವ ಮಾಂಸ ಮಾರಾಟ!

|
Google Oneindia Kannada News

ನವದೆಹಲಿ, ಆಗಸ್ಟ್ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆಗೆ ಚೀನಾ ರಾಷ್ಟ್ರದ ಕುತಂತ್ರ ನೀತಿಯೇ ಪ್ರಮುಖ ಕಾರಣವಾಗಿದೆ ಎಂದು ಜಾಗತಿಕ ಸಮುದಾಯ ಮೇಲಿಂದ ಮೇಲೆ ಆರೋಪಿಸುತ್ತಲೇ ಬಂದಿದೆ. ಈ ಎಲ್ಲ ಆರೋಪಗಳಿಗೆ ಪುಷ್ಟಿ ನೀಡುವಂತಾ ಮತ್ತೊಂದು ಅಂಶ ಇದೀಗ ಬಹಿರಂಗಗೊಂಡಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಾರಣವಾಗುವ ಹಲವು ಪ್ರಾಣಿಗಳ ಮಾಂಸವನ್ನು ಚೀನಾದ ಮಾರುಕಟ್ಟೆಗಳಲ್ಲಿ ಸಾರ್ವಜನಿಕವಾಗಿಯೇ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಜಗತ್ತಿಗೆ ಕೊವಿಡ್-19 ಸೋಂಕು ವ್ಯಾಪಿಸುವುದಕ್ಕೆ ಕಾರಣವಾದ ಚೀನಾದಲ್ಲಿ ಇಂದು ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆ. ಚೀನಾದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 94,546ಕ್ಕೆ ಏರಿಕೆಯಾಗಿದ್ದು, 4636 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇದರ ಹೊರತಾಗಿ ಕೇವಲ 1866 ಸಕ್ರಿಯ ಪ್ರಕರಣಗಳಿವೆ.

ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌ಚೀನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದ ಬರುತ್ತಿದೆ ಎಂದು ನಾನು ಹೇಳಿದ್ದು ಸರಿ ಎಂದ ಟ್ರಂಪ್‌

ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಕೆನಡಾದ ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ವುಹಾನ್, ಹಲವಾರು ಮಾರುಕಟ್ಟೆಗಳು, ಸ್ಟ್ರೀಟ್ ಫುಡ್ ಮಾರುಕಟ್ಟೆಯ ಅಂಕಿ-ಅಂಶಗಳು ಹಾಗೂ ಫೋಟೋಗಳ ಮೂಲಕ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಫೋಟೋಗಳಿಂದ ಕೊವಿಡ್-19 ಸೋಂಕು ಹರಡುವ ಪ್ರಾಣಿಗಳ ಮಾಂಸವನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

38 ಜಾತಿ ಪ್ರಾಣಿಗಳ ಮಾಂಸದಿಂದ ಕೊವಿಡ್-19

ಚೀನಾದ ವುಹಾನ್ ಮಾರುಕಟ್ಟೆಯಲ್ಲಿ ಕಳೆದ 2017ರ ಮೇ ತಿಂಗಳಿನಿಂದ 2019ರ ನವೆಂಬರ್ ತಿಂಗಳ ಅವಧಿಯಲ್ಲಿ 38 ಜಾತಿಯ 47,381 ಮಾರಾಟದ ವಹಿವಾಟುಗಳು ನಡೆದಿರುವುದು ಅಂಕಿ-ಅಂಶಗಳಿಂದ ಗೊತ್ತಾಗಿದೆ. ಹೀಗೆ ಮಾರಾಟವಾದ ಪ್ರಾಣಿಗಳ ಮಾಂಸವನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಕೊವಿಡ್-19 ಸೋಂಕಿನ ಲಕ್ಷಣಗಳಿರುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಸ್ವಚ್ಛತೆ ಇಲ್ಲದ್ದರಿಂದ ಕೊರೊನಾವೈರಸ್ ಸೋಂಕು

ಸ್ವಚ್ಛತೆ ಇಲ್ಲದ್ದರಿಂದ ಕೊರೊನಾವೈರಸ್ ಸೋಂಕು

ಚೀನಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ವುಹಾನ್ ಮಾರುಕಟ್ಟೆಯಲ್ಲಿ ಕೊವಿಡ್-19 ಸೋಂಕು ಹರಡುವ ಪ್ರಾಣಿಗಳ ಮಾಂಸ ಮಾರಾಟ ಮಾಡಿರುವುದು ಒಂದು ಅಂಶವಾಗಿದೆ. ಇನ್ನೊಂದು ಕಡೆಯಲ್ಲಿ ಕೊರೊನಾವೈರಸ್ ಸೋಂಕು ಹರಡುವುದಕ್ಕೆ ವುಹಾನ್ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲದಿರುವುದೇ ಮುಖ್ಯ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ವೈದ್ಯಕೀಯ ಸಮುದಾಯವನ್ನು ವಂಚಿಸಿತಾ ಚೀನಾ?

ವೈದ್ಯಕೀಯ ಸಮುದಾಯವನ್ನು ವಂಚಿಸಿತಾ ಚೀನಾ?

ಆಸ್ಟ್ರೇಲಿಯಾ ಆತಿಥೇಯ ಸ್ಕೈ ಸುದ್ದಿ ವಾಹಿನಿಯ ಆಂಡ್ರೋ ಬೋಲ್ಟ್ ಫ್ಲಿಂಡರ್ಸ್ ವೈದ್ಯಕೀಯ ಕೇಂದ್ರದ ಅಂತಃಸ್ರಾವ ಶಾಸ್ತ್ರ ವಿಭಾಗದ ನಿರ್ದೇಶಕ ನಿಕೋಲೈ ಪೆಟ್ರೊಸ್ಕಿ ಜೊತೆ ಕಳೆದ ಮೇ 26ರಂದು ಈ ಬಗ್ಗೆ ಮಾತನಾಡಿದ್ದರು. ಇಡೀ ಜಗತ್ತಿನ ವೈದ್ಯಕೀಯ ಸಮುದಾಯವನ್ನು ಚೀನಾ ವಂಚಿಸಿದೆ ಎಂದು ಪೆಟ್ರೊಸ್ಕಿ ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ. ಆಂಡ್ರ್ಯೂ ಬೋಲ್ಟ್ ಕೂಡ ತಮ್ಮ ಕಾರ್ಯಕ್ರಮದ ದಿ ಬೋಲ್ಟ್ ರಿಪೋರ್ಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಅಂತೂ ಇತ್ತೀಚಿಗೆ ಬಹಳಷ್ಟು ತಜ್ಞರು ಸರಿಯಾಗಿ ಹೇಳುತ್ತಿದ್ದಾರೆ. ಈ ವೈರಸ್ ಚೀನಾದ ಲ್ಯಾಬ್‌ನಿಂದ ತಪ್ಪಿಸಿಕೊಂಡಂತೆ ಕಾಣುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ.

COVID-19 ರೋಗಾಣು ಪ್ಯಾಂಗೊಲಿನ್‌ಗಳಿಂದ ಹುಟ್ಟಿಕೊಂಡಿದೆ ಎಂದು ಚೀನಾದ ಕೆಲವು ವಿಜ್ಞಾನಿಗಳು ಹೇಳಿದ್ದರು. ಆದರೆ ಹಾಗೆ ಆಗುವುದಕ್ಕೆ ಯಾವುದೇ ಸಾಧ್ಯತೆ ಇಲ್ಲ ಎಂದು ಪ್ರೊಫೆಸರ್ ನಿಕೋಲೈ ಪೆಟ್ರೊಸ್ಕಿ ತಿಳಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ದತ್ತಾಂಶ ನೀಡಲು ನಿರಾಕರಣೆ

ವಿಶ್ವ ಆರೋಗ್ಯ ಸಂಸ್ಥೆಗೆ ದತ್ತಾಂಶ ನೀಡಲು ನಿರಾಕರಣೆ

ಕೊರೊನಾವೈರಸ್ ಸೋಂಕಿನ ಮೂಲವನ್ನು ಹುಡುಕಿ ಹೊರಟ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡಕ್ಕೆ ವುಹಾನ್ ನಗರ ಸೂಕ್ಷ್ಮರೋಗಾಣು ಶಾಸ್ತ್ರ ಅಧ್ಯಯನ ಸಂಸ್ಥೆಯಿಂದ ರೋಗಾಣು ಸೋರಿಕೆ ಆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆದರೆ ಇತ್ತೀಚಿಗೆ ಅದೇ WHO ತನಿಖಾ ತಂಡದಲ್ಲಿದ್ದ ಸದಸ್ಯರೊಬ್ಬರು ಚೀನಾದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ವುಹಾನ್ ನಗರ ವೈರಾಲಜಿ ಸಂಸ್ಥೆಗೆ ಪ್ರವೇಶಿಸಲು ಹಾಗೂ ಕೊವಿಡ್-19 ಸೋಂಕಿನ ಆರಂಭಿಕ ಹಂತದ ದತ್ತಾಂಶವನ್ನು ನೀಡಲು ಚೀನಾ ನಿರಾಕರಿಸಿತ್ತು ಎಂದು ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿತ್ತು.

English summary
Coronavirus Spreading Animal Meat Sales In China's Wuhan Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X