ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾರ್ಮೋಡ: Self-Isolation ನಿರಾಕರಿಸಿದ್ರೆ 1000 ಪೌಂಡ್ ದಂಡ!

|
Google Oneindia Kannada News

ಲಂಡನ್, ಮಾರ್ಚ್ 17: ಸ್ವಯಂ ಪ್ರತ್ಯೇಕವಾಗಿ (Self-Isolation) ಇರಲು ನಿರಾಕರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತುರ್ತು ಅಧಿಕಾರ ಇಂಗ್ಲೆಂಡ್ ಮತ್ತು ವೇಲ್ಸ್ ಪೊಲೀಸರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ.

ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿದವರಿಗೆ 1000 ಪೌಂಡ್ (ಅಂದಾಜು 90 ಸಾವಿರ ರೂಪಾಯಿ) ದಂಡ ವಿಧಿಸಲು ಅಥವಾ ಅಂಥವರನ್ನು ಬಂಧಿಸುವ ಕುರಿತು ಇಂಗ್ಲೆಂಡ್ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಪತ್ರಿಕೆಯೊಂದು ವರದಿ ಪ್ರಕಟಿಸಿದೆ.

14 ದಿನ ಐಸೊಲೇಷನ್ ನಲ್ಲಿದ್ದ ದೆಹಲಿಯ ಕೊರೊನಾ ಪೀಡಿತ ಏನೇನೆಲ್ಲಾ ಮಾಡಿದ್ದ ಗೊತ್ತಾ?14 ದಿನ ಐಸೊಲೇಷನ್ ನಲ್ಲಿದ್ದ ದೆಹಲಿಯ ಕೊರೊನಾ ಪೀಡಿತ ಏನೇನೆಲ್ಲಾ ಮಾಡಿದ್ದ ಗೊತ್ತಾ?

70 ವರ್ಷದ ಮೇಲ್ಪಟ್ಟವರು ಅನಾರೋಗ್ಯಕ್ಕೆ ತುತ್ತಾಗದಿದ್ದರೂ, ನಾಲ್ಕು ತಿಂಗಳ ಕಾಲ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ.

Coronavirus Scare: 1000 Pound Fine For Those Who Refuse Self Isolation

ಹೆಲ್ತ್ ಪ್ರೊಟೆಕ್ಷನ್ ರೆಗ್ಯುಲೇಷನ್ 2020 (ಕೊರೊನಾ ವೈರಸ್) ಪ್ರಕಾರ, ಕೊರೊನಾ ಸೋಂಕಿತರು ಅಥವಾ ಕೊರೊನಾ ಶಂಕಿತರು 14 ದಿನಗಳ ಕಾಲ ಪ್ರತ್ಯೇಕ ಜಾಗದಲ್ಲಿ ಸುರಕ್ಷಿತವಾಗಿರಬೇಕು. ಒಂದು ವೇಳೆ ಪ್ರತ್ಯೇಕವಾಗಿರಲು ಧಿಕ್ಕರಿಸಿದರೆ, ಅಂಥವರನ್ನು ಬಂಧಿಸಲು ಚಿಂತನೆ ನಡೆಸಲಾಗಿದೆ.

ಇಸೊಲೇಷನ್ ನಿಂದ ತಪ್ಪಿಸಿಕೊಂಡವರಿಗೆ ಸಾವಿರ ಪೌಂಡ್ ದಂಡ ಹಾಕಲು ಹಾಗೂ ಅಪ್ಪಿ-ತಪ್ಪಿ ದಂಡ ಕಟ್ಟಲಿಲ್ಲ ಅಂದ್ರೆ ಅಂಥವರಿಗೆ ಜೈಲು ಶಿಕ್ಷೆ ನೀಡಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ಯು.ಕೆನಲ್ಲಿ ಇಲ್ಲಿಯವರೆಗೂ 1543 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 55 ಮಂದಿ ಈಗಾಗಲೇ ಸಾವನ್ನಪ್ಪಿದ್ದು, 52 ಮಂದಿ ಗುಣಮುಖರಾಗಿದ್ದಾರೆ. ದಿನೇ ದಿನೇ ಯೂರೋಪ್ ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕಠಿಣ ಕ್ರಮಗಳತ್ತ ಇಂಗ್ಲೆಂಡ್ ಮುಖ ಮಾಡಿದೆ.

English summary
Coronavirus Scare: 1000 Pound Fine For Those Who Refuse Self Isolation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X