ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಪರೀಕ್ಷೆ ಒಳಗಾದ ಪೋಪ್ ಫ್ರಾನ್ಸಿಸ್

|
Google Oneindia Kannada News

ಇಟಲಿ, ಮಾರ್ಚ್ 3: ಚೀನಾದಿಂದ ಶುರುವಾದ ಕೊರೊನಾ ವೈರಸ್ ಭೀತಿ ಬೇರೆ ಬೇರೆ ದೇಶಕ್ಕೆ ಹಬ್ಬಿದೆ. ಇದೀಗ ಇಟಲಿಯ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್‌ ಸಹ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಿದ್ದಾರೆ.

ವ್ಯಾಟಿಕನ್ ಸಿಟಿಯ ಹಿರಿಯ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಭಾನುವಾರ ಆಧ್ಯಾತ್ಮಿಕ ಸಭೆಯೊಂದರಲ್ಲಿ ಭಾಗಿಯಾಗಬೇಕಿತ್ತು. ಆದರೆ, ಅನಾರೋಗ್ಯ ಕಾರಣದಿಂದ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಲಿಲ್ಲ. ''ನಾನು ಶೀತದಿಂದ ಬಳಲುತ್ತಿದ್ದೇನೆ'' ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದ್ದರು.

ಕೊರೊನಾ ಬಗ್ಗೆ ಆತಂಕ ಬೇಡ, 24 ಗಂಟೆ ಕೆಲಸ ಮಾಡ್ತೀವಿ: ಶ್ರೀರಾಮುಲುಕೊರೊನಾ ಬಗ್ಗೆ ಆತಂಕ ಬೇಡ, 24 ಗಂಟೆ ಕೆಲಸ ಮಾಡ್ತೀವಿ: ಶ್ರೀರಾಮುಲು

ಕೊರೊನಾ ವೈರಸ್ ರೋಗದ ಲಕ್ಷಣದಲ್ಲಿ ಶೀತ ಕೂಡ ಇದ್ದು, ಕೆಲವರು ಆತಂಕಗೊಂಡಿದ್ದರು. ಶೀತ ಮಾತ್ರವಲ್ಲದೆ, ಜ್ವರ ಹಾಗೂ ಕೆಮ್ಮು ಕೂಡ ಇತ್ತು. ಹೀಗಾಗಿ, ಅವರಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ''ನೆಗೆಟಿವ್'' ಎಂದು ತಿಳಿಸಿದ್ದಾರೆ.

Coronavirus Pope Francis Tested Negative

ಪೋಪ್ ಫ್ರಾನ್ಸಿಸ್‌ರಿಗೆ 83 ವರ್ಷ ವಯಸ್ಸಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಅವರು ತಮ್ಮ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಿಗೆ ತಪ್ಪಿಕೊಂಡಿರಲಿಲ್ಲ. ಆದರೆ, ಕೊರೊನಾ ವೈರಸ್ ಆತಂಕದಿಂದ ಅವರು ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ.

ಅಂದಹಾಗೆ, ಇಟಲಿಯಲ್ಲಿ ಈವರೆಗೆ 34 ಜನರು ಕೊರೊನಾ ವೈರಸ್ ನಿಂದ ಸಾವನಪ್ಪಿದ್ದಾರೆ. ಏಷ್ಯದಲ್ಲಿಯೇ ಇಟಲಿಯಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸಾವಿನ ಪ್ರಕರಣಗಳು ನಡೆದಿವೆ.

English summary
Coronavirus: Pope Francis tested negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X