ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ವಿದೇಶದಲ್ಲಿದ್ದರೂ ಭಾರತೀಯನ ಬೆನ್ನು ಬಿಡದ ಸೋಂಕು

|
Google Oneindia Kannada News

ದುಬೈ, ಫೆಬ್ರವರಿ.11: ಕೊರೊನಾ ವೈರಸ್ ಎಂಬ ಸೋಂಕು ಇದೀಗ ಚೀನಾದ ಮಟ್ಟಿಗಷ್ಟೇ ಸೀಮಿತವಾಗಿಲ್ಲ. ಜಾಗತಿಕ ಮಟ್ಟದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಸೋಂಕು ಭಾರತೀಯನಿಗೂ ತಗಲಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿವೆ.

ಯುನೈಟೆಡ್ ಅರಬ್ ಎಮರೈಟ್ಸ್ ನಲ್ಲಿ ನೆಲೆಸಿದ್ದ ಒಬ್ಬ ಭಾರತೀಯನಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಅಲ್ಲಿನ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಒಕ್ಕೂಟ ರಾಷ್ಟ್ರಗಳಲ್ಲಿ ಇದುವರೆಗೂ ಎಂಟು ಜನರಿಗೆ ಮಾರಕ ವೈರಸ್ ತಗಲಿರುವ ಬಗ್ಗೆ ತಿಳಿದು ಬಂದಿದೆ.

ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

ಇನ್ನು, ಚೀನಾದಲ್ಲಿ ಮಂಗಳವಾರದ ಮಟ್ಟಿಗೆ ಸಾವಿನ ಸಂಖ್ಯೆ ಬರೋಬ್ಬರಿ ಸಾವಿರದ ಗಡಿ ದಾಟಿದ್ದು 1,016 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಇದರ ಜೊತೆಗೆ 42, 638 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.

Coronavirus: One Indian National Get Infected Result In United Arab Emirates

ಫೆಬ್ರವರಿ.09ರಂದು ಯುನೈಟೆಡ್ ಅರಬ್ ಎಮರೈಟ್ಸ್ ನಲ್ಲಿ ಇಬ್ಬರು ಕೊರೊನಾ ವೈರಸ್ ಸೋಂಕಿತರು ಇರುವ ಬಗ್ಗೆ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿತ್ತು. ಈ ಪೈಕಿ ಒಬ್ಬ ಫಿಲಿಫೈನ್ಸ್ ಹಾಗೂ ಮತ್ತೊಬ್ಬ ಚೀನಾ ಮೂಲದ ಪ್ರಜೆ ಎಂದು ಹೇಳಲಾಗಿತ್ತು. ಕಳೆದ ವಾರ ಚೀನಾದ ವುಹಾನ್ ನಗರದಿಂದ ರಜೆ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಕ್ಕೆ ಆಗಮಿಸಿದ ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಇನ್ನು, ಐದನೇ ವ್ಯಕ್ತಿ ಕೂಡಾ ಚೀನಾದಿಂದಲೇ ಆಗಮಿಸಿದ್ದ ಎಂದು ಹೇಳಲಾಗುತ್ತಿದೆ.

ಕೊರೊನಾ ಭೀತಿ: ರಾಮೇಶ್ವರಂನಿಂದ ಚೀನಾ ಪ್ರವಾಸಿ ವಾಪಸ್ಕೊರೊನಾ ಭೀತಿ: ರಾಮೇಶ್ವರಂನಿಂದ ಚೀನಾ ಪ್ರವಾಸಿ ವಾಪಸ್

ಚೀನಾ ಹೊರತಾಗಿ ಹಾಂಗ್ ಕಾಂಗ್ ಮತ್ತು ಫಿಲಿಫೈನ್ಸ್ ನಲ್ಲಿ ಇಬ್ಬರು ಕೊರೊನಾ ವೈರಸ್ ಗೆ ಪ್ರಾಣ ಬಿಟ್ಟಿದ್ದಾರೆ. ಜರ್ಮನಿ, ಬ್ರಿಟನ್, ಇಟಲಿ, ಅಲ್ಲದೇ ಫ್ರಾನ್ಸ್, ರಷ್ಯಾ, ಬೆಲ್ಜಿಯಂ, ಸ್ವೀಡನ್, ಫಿನ್ ಲ್ಯಾಂಡ್ ಮತ್ತು ಸ್ಪೇನ್ ನಲ್ಲೂ ಕೂಡಾ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

English summary
Coronavirus: One Indian National Get Infected Result In United Arab Emirates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X