• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈದ್ಯನ ವಾರ್ನಿಂಗ್: ಯು.ಎಸ್.ಎ ಗೆ ಕಾದಿದೆ ದೊಡ್ಡ ಆಪತ್ತು!

|

ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಟಲಿ ಜರ್ಜರಿತವಾಗಿದೆ. ಇಟಲಿಯೊಂದರಲ್ಲೇ ಕೋವಿಡ್-19 ನಿಂದ ಇಲ್ಲಿಯವರೆಗೂ 4,032 ಮಂದಿ ಜೀವ ಕಳೆದುಕೊಂಡಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರೋಗಿಗಳ ಪ್ರಾಣ ಕಾಪಾಡಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ.

ಕೋವಿಡ್-19 ತಡೆಗಟ್ಟಲು ಸೂಕ್ತ ಕ್ರಮಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳದ ಕಾರಣ ಇಟಲಿಯಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯ ಹಲವು ವೈದ್ಯರು ಮತ್ತು ಹೆಲ್ತ್ ವರ್ಕರ್ಸ್ ಗೂ ಕೊರೊನಾ ಸೋಂಕು ತಗುಲಿರುವುದು ಕಳವಳಕಾರಿ ವಿಷಯ.

ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳದೆ ಇದ್ದರೆ, ಇಟಲಿಯ ಪರಿಸ್ಥಿತಿ ಯು.ಎಸ್ ಗೂ ಬಂದೀತು ಎಂದು ದಿ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಟಾಮ್ ಫ್ರೀಡೆನ್ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

''ಆರೋಗ್ಯವಂತರು ಆಗಾಗ ಕೈತೊಳೆದುಕೊಳ್ಳುತ್ತಿರಬೇಕು. ಎಲ್ಲರಿಂದಲೂ 6 ಅಡಿ ಅಂತರ ಕಾಯ್ದುಕೊಂಡರೆ, ಎಲ್ಲರಿಗೂ ಉತ್ತಮ. ರೋಗದ ಲಕ್ಷಣ ಹೊಂದಿರುವವರು ಸ್ವಯಂ ಪ್ರತ್ಯೇಕಗೊಳ್ಳಬೇಕು. ಯು.ಎಸ್ ನಲ್ಲೂ ಹಲವು ಹೆಲ್ತ್ ವರ್ಕರ್ ಗಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಉತ್ತಮ ಬೆಳವಣಿಗೆ ಅಲ್ಲ'' ಎಂದು ಡಾ.ಟಾಮ್ ಫ್ರೀಡೆನ್ ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ಮಿಲಿಯನ್ ಸಾವು ಸಂಭವಿಸುವ ಸಾಧ್ಯತೆ

ಒಂದು ಮಿಲಿಯನ್ ಸಾವು ಸಂಭವಿಸುವ ಸಾಧ್ಯತೆ

''ಕಟ್ಟುನಿಟ್ಟಾಗಿ ಸೋಷಿಯಲ್ ಡಿಸ್ಟೆನ್ಸಿಂಗ್ (ಸಾಮಾಜಿಕ ಅಂತರ) ಕಾಯ್ದುಕೊಳ್ಳದೆ ಇದ್ದರೆ, ಯುಎಸ್ ಒಂದರಲ್ಲೇ ಒಂದು ಮಿಲಿಯನ್ ಸಾವು ಸಂಭವಿಸುವ ಸಾಧ್ಯತೆ ಇದೆ'' ಎಂದು ಡಾ.ಟಾಮ್ ಫ್ರೀಡೆನ್ ವಾರ್ನಿಂಗ್ ಕೊಟ್ಟಿದ್ದಾರೆ.

ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ

ದೊಡ್ಡ ಆಪತ್ತು ಕಾದಿದೆ

ದೊಡ್ಡ ಆಪತ್ತು ಕಾದಿದೆ

''ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಅಮೇರಿಕನ್ನರು ಫೇಲ್ ಆದರೆ, ದೊಡ್ಡ ಆಪತ್ತು ಎದುರಾಗಲಿದೆ'' ಎಂದಿದ್ದಾರೆ ಡಾ.ಟಾಮ್ ಫ್ರೀಡೆನ್. ಈ ನಡುವೆ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಅಮೇರಿಕಾದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 75 ಮಿಲಿಯನ್ ಅಮೇರಿಕನ್ನರನ್ನು ಕಡ್ಡಾಯವಾಗಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಯು.ಎಸ್.ಎ ಅಂಕಿ ಅಂಶ

ಯು.ಎಸ್.ಎ ಅಂಕಿ ಅಂಶ

ಕೊರೊನಾ ಸೋಂಕು ಪೀಡಿತರ ಸಂಖ್ಯೆ- 19,774

ಕೊರೊನಾ ಸೋಂಕಿನಿಂದಾಗಿ ಮೃತಪಟ್ಟವರು - 275

ಕೊರೊನಾ ಸೋಂಕಿನಿಂದ ಗುಣಮುಖರಾದವರು - 147

ಚಿಂತಾಜನಕ ಸ್ಥಿತಿಯಲ್ಲಿ ಇರುವವರು - 64

English summary
Coronavirus: Italy's Nightmare could happen in US warns Dr Tom Frieden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X