ಕೊರೊನಾ ಮರಣ ಮೃದಂಗ: ಕಳೆದ 24 ಗಂಟೆಗಳಲ್ಲಿ 1000 ಕ್ಕೂ ಅಧಿಕ ಸಾವು!

ಮಾರ್ಚ್ 21: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 1370 ಮಂದಿ ಡೆಡ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಆ ಮೂಲಕ ವಿಶ್ವದಲ್ಲಿ ಕೋವಿಡ್-19 ನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 11,401 ಆಗಿದೆ.

ಕೋವಿಡ್-19 ಕೇಂದ್ರ ಸ್ಥಾನ ಆಗಿರುವ ಯೂರೋಪ್ ನಲ್ಲಿ 5000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಟಲಿ, ಸ್ಪೇನ್ ಮತ್ತು ಜರ್ಮನಿಯಲ್ಲಿ ಹೆಚ್ಚು ಜನರನ್ನು ಮಹಾಮಾರಿ ಕೊರೊನಾ ವೈರಸ್ ಬಲಿಪಡೆಯುತ್ತಿದೆ.

ಕೊರೊನಾ ವೈರಸ್ ತವರು ಚೀನಾಗಿಂತ ಇಟಲಿಯಲ್ಲಿ ಸಾವಿಗೀಡಾದವರ ಸಂಖ್ಯೆ ಹೆಚ್ಚಿದೆ. ಸ್ಪೇನ್ ಮತ್ತು ಇರಾನ್ ನಲ್ಲೂ ಮರಣ ಮೃದಂಗ ಮುಂದುವರೆದಿದೆ.

ಇಟಲಿಯಲ್ಲಿ ಹೆಚ್ಚಿದ ಸಾವಿನ ಪ್ರಮಾಣ.!

ಇಟಲಿಯಲ್ಲಿ ಹೆಚ್ಚಿದ ಸಾವಿನ ಪ್ರಮಾಣ.!

ಕಳೆದ ಒಂದು ವಾರದಿಂದ ಇಟಲಿಯಲ್ಲಿ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಮಾರ್ಚ್ 13 ರಂದು 250 ಮಂದಿ, ಮಾರ್ಚ್ 15 ರಂದು 368 ಮಂದಿ, ಮಾರ್ಚ್ 18 ರಂದು 475 ಮಂದಿಯ ಪ್ರಾಣವನ್ನು ನುಂಗಿಹಾಕಿದ್ದ ಕೊರೊನಾ ವೈರಸ್ ಮಾರ್ಚ್ 20 ರಂದು 627 ಮಂದಿಯನ್ನು ಬಲಿ ಪಡೆದಿದೆ. ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ಇಲ್ಲಿಯವರೆಗೆ 4,032 ಮಂದಿ ಜೀವ ಕಳೆದುಕೊಂಡಿದ್ದಾರೆ.

ಇಟಲಿಯ ಅಂಕಿ-ಅಂಶ

ಇಟಲಿಯ ಅಂಕಿ-ಅಂಶ

ಇಟಲಿಯಲ್ಲಿ ಇಲ್ಲಿಯವರೆಗೆ 47,021 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 5986 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಲ್ಲಿಯವರೆಗೂ 5129 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 2655 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

ಸ್ಪೇನ್ ನಲ್ಲಿ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಸ್ಪೇನ್ ನಲ್ಲಿ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಸ್ಪೇನ್ ನಲ್ಲಿ ನಿನ್ನೆ ಒಂದೇ ದಿನ ಕೊರೊನಾ ವೈರಸ್ ನಿಂದಾಗಿ 262 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸ್ಪೇನ್ ನಲ್ಲಿ ಸಾವಿನ ಪ್ರಮಾಣ 1093ಕ್ಕೆ ಏರಿದೆ. 21,571 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ನಿನ್ನೆ 3494 ಹೊಸ ಪ್ರಕರಣಗಳು ದಾಖಲಾಗಿವೆ. ಸ್ಪೇನ್ ನಲ್ಲಿ ಇಲ್ಲಿಯವರೆಗೂ 1588 ಮಂದಿ ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇರಾನ್ ನಲ್ಲೂ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಇರಾನ್ ನಲ್ಲೂ ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ಇರಾನ್ ನಲ್ಲಿ ನಿನ್ನೆ 149 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇರಾನ್ ನಲ್ಲಿ ಇಲ್ಲಿಯವರೆಗೂ 1433 ಮಂದಿಯ ಪ್ರಾಣವನ್ನು ಕೊರೊನಾ ವೈರಸ್ ನುಂಗಿ ಹಾಕಿದೆ. ಜರ್ಮನಿ, ಯು.ಎಸ್.ಎ, ಫ್ರಾನ್ಸ್, ದಕ್ಷಿಣ ಕೊರಿಯಾ, ಸ್ವಿಟ್ಜರ್ಲ್ಯಾಂಡ್ ನಲ್ಲೂ ಸೋಂಕು ಪೀಡಿತರು ಮತ್ತು ಸಾವಿನ ಸಂಖ್ಯೆ ಏರುತ್ತಲೇ ಇದೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ಒಟ್ಟು ಕೊರೊನಾ ಪೀಡಿತರ ಸಂಖ್ಯೆ: 276,007

ಒಟ್ಟು ಮೃತರ ಸಂಖ್ಯೆ: 11,401

ಸಂಪೂರ್ಣವಾಗಿ ಗುಣಮುಖರಾದವರ ಸಂಖ್ಯೆ: 91,952

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 7,911

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+