ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಅಪಾಯ: ಲಕ್ಷದ ಗಡಿ ದಾಟುತ್ತದೆಯಾ ಸಾವಿನ ಸಂಖ್ಯೆ?

|
Google Oneindia Kannada News

ಲಂಡನ್, ಮಾರ್ಚ್.20: ಕೊರೊನಾ ವೈರಸ್ ನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ಮಧ್ಯ ಆಘಾತಕಾರಿ ವಿಚಾರವನ್ನು ಲಂಡನ್ ನಲ್ಲಿ ಇರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ತೆರೆದಿಟ್ಟಿದ್ದಾರೆ.

ಲಂಡನ್ ಇಂಪೀರಿಯರ್ ಕಾಲೇಜ್ ನಲ್ಲಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿಯಲ್ಲಿ ಕೊರೊನಾ ವೈರಸ್ ನಿಂದ ಅಮೆರಿಕಾ ದೇಶವೊಂದರಲ್ಲೇ ಪ್ರಾಣ ಬಿಡುವವರ ಸಂಖ್ಯೆ ಲಕ್ಷದ ಗಡಿ ದಾಟಲಿದೆ ಎಂದು ತಿಳಿದು ಬಂದಿದೆ.

48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್!48 ಗಂಟೆ ಬಳಿಕ ಕೊಡಗಿನ ವ್ಯಕ್ತಿಗೆ ಕೊರೊನಾ ವೈರಸ್ ಕನ್ಫರ್ಮ್!

ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ಈಗಾಗಲೇ 10,495ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, 2,55,729ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನೊಂದೆಡೆ 89,918 ಜನರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ.

ಅಮೆರಿಕಾದಲ್ಲಿ ಕೊರೊನಾಗೆ ಲಕ್ಷಾಂತರ ಜನರು ಸಾವು?

ಅಮೆರಿಕಾದಲ್ಲಿ ಕೊರೊನಾಗೆ ಲಕ್ಷಾಂತರ ಜನರು ಸಾವು?

ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿ ಪ್ರಕಾರ ಕೊರೊನಾ ವೈರಸ್ ನಿಂದ ಯುನೈಟೆಡ್ ಸ್ಟೇಟ್ಸ್ ನಲ್ಲೇ 20 ಲಕ್ಷ 20 ಸಾವಿರಕ್ಕೂ ಅಧಿಕ ಜನರು ಪ್ರಾಣ ಬಿಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊರೊನಾ ವೈರಸ್ ನಿಂದ ಶುಕ್ರವಾರವೇ 11 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಇನ್ನು, 584 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯು 14,373ಕ್ಕೆ ಏರಿಕೆಯಾಗಿದೆ.

ಇಂಗ್ಲೆಂಡ್ ನಲ್ಲಿ ಲಕ್ಷಾಂತರ ಜನ ಮೃತಪಡುವ ಸಾಧ್ಯತೆ

ಇಂಗ್ಲೆಂಡ್ ನಲ್ಲಿ ಲಕ್ಷಾಂತರ ಜನ ಮೃತಪಡುವ ಸಾಧ್ಯತೆ

ಇನ್ನು, ಇಂಗ್ಲೆಂಡ್ ನಲ್ಲೂ 5 ಲಕ್ಷ 10 ಸಾವಿರ ಜನರು ಕೊರೊನಾ ವೈರಸ್ ನಿಂದ ಪ್ರಾಣ ಬಿಡುವ ಸಾಧ್ಯತೆಗಳಿವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಇದುವರೆಗೂ 144 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, 3,269 ಜನರಿಗೆ ಸೋಂಕು ಇರಿವುದು ದೃಢಪಟ್ಟಿದೆ. ಈ ಸಂಖ್ಯೆಯು ಲಕ್ಷದ ಗಡಿ ದಾಟಲಿದೆ ಎಂದು ವರದಿಯು ಎಚ್ಚರಿಕೆ ನೀಡಿದೆ.

ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ

ವರದಿ ಪರಾಮರ್ಶೆಗೂ ಮೊದಲು ಎಚ್ಚರಿಕೆ ಸಂದೇಶ ರವಾನೆ

ವರದಿ ಪರಾಮರ್ಶೆಗೂ ಮೊದಲು ಎಚ್ಚರಿಕೆ ಸಂದೇಶ ರವಾನೆ

ಇಂಪೀರಿಯರ್ ಕಾಲೇಜ್ ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡಬೇಕಿದೆ. ಅದಕ್ಕೂ ಮೊದಲೇ ಯುನೈಟೆಡ್ ಸ್ಟೇಟ್ಸ್ ಹಾಗೂ ಇಂಗ್ಲೆಂಡ್ ದೇಶಗಳು ಈ ವರದಿಯನ್ನು ಗಂಭೀರವಾಗಿ ತೆಗೆದುಕೊಂಡಿವೆ. ಈ ಹಿನ್ನೆಲೆ ಕೊರೊನಾ ವೈರಸ್ ನ್ನು ತಮಾಷೆಯಾಗಿ ನೋಡದೇ ಗಂಭೀರವಾಗಿ ಪರಿಗಣಿಸುವಂತೆ ಅಮೆರಿಕಾ ಸರ್ಕಾರವು ತೀರ್ಮಾನಿಸಿದೆ.

ರೋಗದ ಲಕ್ಷಣಗಳ ಮಾದರಿ ಕೇಂದ್ರದ ವರದಿ

ರೋಗದ ಲಕ್ಷಣಗಳ ಮಾದರಿ ಕೇಂದ್ರದ ವರದಿ

ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಹಯೋಗದ ರೋಗ ಲಕ್ಷಣಗಳ ಮಾದರಿ ಕೇಂದ್ರವು ನೀಡಿದ 9ನೇ ವರದಿಯಲ್ಲಿ ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಎಂಆರ್ ಸಿ ಸೆಂಟರ್ ಫಾರ್ ಇನ್ ಫೆಕ್ಷನ್ ಡಿಸೀಸ್ ಆನಾಲಿಸಸ್ ಮತ್ತು ಜೆ-ಐಡಿಯಾ ಕುರಿತು ಪ್ರೊಫೆಸರ್ ನೀಲ್ ಫರ್ಗ್ಯೂಸನ್ ಮತ್ತು ಲತೀಫ್ ಜಮೀಲ್ ಇನ್ ಸ್ಟಿಟ್ಯೂಟ್ ಫಾರ್ ಡಿಸೀಸ್ ಮತ್ತು ಎಮರ್ಜೆನ್ಸಿ ಅನಾಲಿಟಿಕ್ಸ್ ನಲ್ಲಿ ತಿಳಿಸಿದ್ದಾರೆ.

ಪೇಶೆಂಟ್ ನಂ.13: ಕರ್ನಾಟಕಕ್ಕೆ ಸೋಂಕಿತರ ಕೊಡುಗೆ ಕೊಡುತ್ತಾರಾ ಮಹಿಳೆ?ಪೇಶೆಂಟ್ ನಂ.13: ಕರ್ನಾಟಕಕ್ಕೆ ಸೋಂಕಿತರ ಕೊಡುಗೆ ಕೊಡುತ್ತಾರಾ ಮಹಿಳೆ?

ರೋಗಶಾಸ್ತ್ರಜ್ಞರು ನೀಡಿರುವ ವರದಿಯಲ್ಲಿ ಏನಿದೆ?

ರೋಗಶಾಸ್ತ್ರಜ್ಞರು ನೀಡಿರುವ ವರದಿಯಲ್ಲಿ ಏನಿದೆ?

ಜಾಗತಿಕ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳು ಇಂದು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಸೋಂಕಿತರು ಕಾಣಿಸಿಕೊಂಡಿರುವ ರಾಷ್ಟ್ರಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಮೊದಲು ಅರಿತುಕೊಳ್ಳಬೇಕಿದೆ. ಸೋಂಕಿನ ತೀವ್ರತೆಯನ್ನು ಅಂದಾಜು ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆಯಾದರೂ, ವಿಶ್ವದಲ್ಲೇ ಈಗಾಗಲೇ 2/3ರಷ್ಟು ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗಿದೆಯಾದರೂ ಸೋಂಕು ಹರಡಿರುವ ಅಪಾಯವಿದೆ. ಈಗಿನ ಸುರಕ್ಷತಾ ಕ್ರಮಗಳಿಂದಷ್ಟೇ ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗದು ಎನ್ನಲಾಗಿದೆ.

ಕೊರೊನಾಗೆ ಮದ್ದು ಸಿಗುವವರೆಗೂ ಅಪಾಯ ತಪ್ಪಿದ್ದಲ್ಲ

ಕೊರೊನಾಗೆ ಮದ್ದು ಸಿಗುವವರೆಗೂ ಅಪಾಯ ತಪ್ಪಿದ್ದಲ್ಲ

ಅತಿಹೆಚ್ಚು ಜನರು ಒಂದು ಕಡೆ ಸೇರದಂತೆ ಮುನ್ನೆಚ್ಚರಿಕೆಯನ್ನು ವಹಿಸಿವುದು. ಕೆಳಮಟ್ಟದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಸರಣವು ಹೆಚ್ಚಾಗಿ ಇರುವುದರಿಂದ ಜನರನ್ನು ವಿಂಗಡಿಸುವ ಕ್ರಮವು ಅತ್ಯಗತ್ಯವಾಗಿದೆ. ಸಾಮಾಜಿಕ ವಲಯದಲ್ಲಿ ಜನರ ಮಧ್ಯೆ ಅಂತರ ಕಾಯ್ದುಕೊಳ್ಳಬೇಕು. ತಿಂಗಳುಗಳ ಕಾಲ ಜನರು ಒಂದು ಸ್ಥಳದಲ್ಲಿ ಪ್ರತ್ಯೇಕವಾಗಿ ಇರುವುದು ಸೂಕ್ತ ಎಂದು ವರದಿಯು ತಿಳಿಸಿದೆ.

 ಇಂಗ್ಲೆಂಡ್ ವೈಜ್ಞಾನಿಕ ಸಲಹೆಗಾರ ಹಾಗೂ ಟ್ರಂಪ್ ಅವರಿಗೆ ವರದಿ

ಇಂಗ್ಲೆಂಡ್ ವೈಜ್ಞಾನಿಕ ಸಲಹೆಗಾರ ಹಾಗೂ ಟ್ರಂಪ್ ಅವರಿಗೆ ವರದಿ

ಇಂಪೀರಿಯರ್ ಕಾಲೇಜ್ ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನೀಡಿರುವ ವರದಿಯ ಒಂದು ಪ್ರತಿಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಂಗ್ಲೆಂಡ್ ನ ವೈಜ್ಞಾನಿಕ ಸಲಹಾ ಸಮಿತಿ ಮುಖ್ಯಸ್ಥ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಅವರಿಗೆ ನೀಡಲಾಗಿದೆ ಎಂದು ಪ್ರೊಫೆಸರ್ ನೀಲ್ ಫರ್ಗ್ಯೂಸನ್ ಸಿಎನ್ಎನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇನ್ನು, ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸೋಂಕು ಹರಡುವಿಕೆಗೆ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಚಿಂತಿಸಲಾಗುತ್ತದೆ ಎಂದು ಇಂಗ್ಲೆಂಡ್ ಸರ್ಕಾರವು ತಿಳಿಸಿದೆ.

ಸಿಎನ್ಎನ್ ಸಂಸ್ಥೆ ತಿಳಿಸಿದ ವರದಿಯ ಪ್ರಮುಖ ಅಂಶಗಳು

ಸಿಎನ್ಎನ್ ಸಂಸ್ಥೆ ತಿಳಿಸಿದ ವರದಿಯ ಪ್ರಮುಖ ಅಂಶಗಳು

ಇಂಪೀರಿಯರ್ ಕಾಲೇಜ್ ನ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ವರದಿಯಲ್ಲಿ ಇರುವ ಪ್ರಮುಖ ಅಂಶಗಳನ್ನು ಸಿಎನ್ಎನ್ ಆಯ್ಕೆ ಮಾಡಿದೆ. ಈ ವರದಿಯಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

- ಸೋಂಕು ಹರಡುವುದನ್ನ ತಡೆಯುವುದಕ್ಕಿಂತ ಮೊದಲು ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವುದು

- ಸೋಂಕಿತರಿಗೆ ಚಿಕಿತ್ಸೆ ನೀಡುವುದರಿಂದ ಕೊರೊನಾ ಸೋಂಕಿತರನ್ನು ಗುಣಪಡಿಸುವಲ್ಲಿ ನಿಗಾ ವಹಿಸುವುದು

- ಕೆಳಹಂತದಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು

- ಆಸ್ಪತ್ರೆಗಳಲ್ಲಿ ಸೋಂಕು ನಿಯಂತ್ರಣ ಮತ್ತು ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ನೀತಿಗಳನ್ನು ರೂಪಿಸುವುದು

- ಕೊರೊನಾ ಶಂಕಿತ ಸೋಂಕಿತರನ್ನು ಆಸ್ಪತ್ರೆ ಬದಲು ಗೃಹ ದಿಗ್ಬಂಧನದಲ್ಲಿ ಇರಿಸುವುದು

- ಕೊರೊನಾ ಸೋಂಕಿತರು ಮತ್ತು ಶಂಕಿತರ ನಡುವೆ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ

- 2/3ರಷ್ಟು ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ

ಯಾರಿಗೂ ಮೈ ಮರೆತು ಕೂರುವಷ್ಟು ಸಮಯವಿಲ್ಲ

ಯಾರಿಗೂ ಮೈ ಮರೆತು ಕೂರುವಷ್ಟು ಸಮಯವಿಲ್ಲ

ಕೊರೊನಾ ವೈರಸ್ ಶರವೇಗದಲ್ಲಿ ವಿಶ್ವಕ್ಕೆ ಪಸರಿಸುತ್ತಿದ್ದು, ಮೈಮರೆತು ಕೂರುವಷ್ಟು ಸಮಯ ಯಾರಿಗೂ ಇಲ್ಲ. ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲೇಬೇಕಾದಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಕನಿಷ್ಠ 18 ತಿಂಗಳ ಕಾಲ ಅಂದರೆ ಕೊರೊನಾಗೆ ಮದ್ದು ಕಂಡುಹಿಡಿಯುವವರೆಗೂ ಎಚ್ಚರಿಕೆ ವಹಿಸಬೇಕಾಗಿದೆ. ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತರಬೇಕಿದೆ.

ಕೊರೊನಾ ವೈರಸ್ ಕುರಿತು WHO ಸಲಹೆ ಸೂಚನೆ

ಕೊರೊನಾ ವೈರಸ್ ಕುರಿತು WHO ಸಲಹೆ ಸೂಚನೆ

ವಿಶೇಷವಾಗಿ ಪ್ರಾಥಮಿಕ ಅಂಕಿ-ಅಂಶಗಳ ಮೇಲೆ ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಲ್ಲಿ ಈ ವರದಿಯನ್ನು ರೂಪಿಸಲಾಗಿದೆ. ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ ಶೇ.80ರಷ್ಟು ಶಂಕಿತರಿಗೆ ಸೋಂಕು ಪ್ರಾಥಮಿಕ ಹಂತದಲ್ಲಿದೆ. ಶೇ.15ರಷ್ಟು ಜನರಲ್ಲಿ ಸೋಂಕು ತೀವ್ರವಾಗಿದ್ದು, ಶೇ.5ರಷ್ಟು ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತೀವ್ರ ಸ್ಥಿತಿಯಲ್ಲಿ ಇರುವವರಿಗೆ ಆಮ್ಲಜನಕದ ಅವಶ್ಯಕತೆಯಿದ್ದು, ಗಂಭೀರ ಸ್ಥಿತಿ ಎದುರಿಸುತ್ತಿರುವ ಸೋಂಕಿತರನ್ನು ವೆಂಟಿಲೇಶನ್ ನಲ್ಲಿ ಇರಿಸಲಾಗುತ್ತಿದೆ ಎಂದು WHO ತಿಳಿಸಿದೆ.

ಕೊರೊನಾ ವೈರಸ್ ಸೋಂಕನ್ನು ಹೊಗಲಾಡಿಸಲು ವಿಶ್ವದ ಎಲ್ಲ ರಾಷ್ಟ್ರಗಳು ಸಮಗ್ರ ಮತ್ತು ಸಂಯೋಜಿತ ತಂತ್ರಗಳನ್ನು ರೂಪಿಸುವಂತೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಸಲಹೆ ನೀಡಿದೆ. ಕೊರೊನಾ ವೈರಸ್ ಸೋಂಕಿತರ ತಪಾಸಣೆ ನಡೆಸುವುದು, ಅವರ ಸಂಪರ್ಕದಲ್ಲಿ ಇರುವ ಜನರನ್ನು ಪತ್ತೆ ಮಾಡುವ ಕಾರ್ಯವು ನಿರಂತರವಾಗಿ ನಡೆಯಬೇಕಿದೆ. ಇದು ಕೇವಲ ಒಂದು ರಾಷ್ಟ್ರದ ರಕ್ಷಣೆಗಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಸೋಂಕಿಗೆ ಕಡಿವಾಣ ಹಾಕಲು ಸಹಕಾರಿ ಆಗಲಿದೆ ಎಂದು ಮಾರ್ಗದರ್ಶನ ನೀಡಿದೆ.

English summary
Coronavirus: Forecasts Up 20 Lakh Peoples Death From Covid-19 In USA. Report From London Imperial College Epidemiologists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X