ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ವೈದ್ಯ ಸಾವು: ಸರ್ಕಾರದಿಂದ ಮತ್ತೊಂದು ಆಘಾತಕಾರಿ ಕೃತ್ಯ ಬೆಳಕಿಗೆ

|
Google Oneindia Kannada News

ಬೀಜಿಂಗ್, ಫೆಬ್ರವರಿ 10: ಕೊರೊನಾ ವೈರಸ್ಅನ್ನು ಆರಂಭದಲ್ಲಿಯೇ ಪತ್ತೆ ಮಾಡಿ ಮಾಹಿತಿ ನೀಡಿದ್ದ ಕಾರಣಕ್ಕೆ ದಂಡನೆಗೆ ಒಳಗಾಗಿದ್ದ ವೈದ್ಯ ಲಿ ವೆನ್‌ಲಿಯಾಂಗ್ ಅವರ ಸಾವಿನ ಬೆನ್ನಲ್ಲೇ, ಚೀನಾ ಸರ್ಕಾರದ ಮತ್ತೊಂದು ಆಘಾತಕಾರಿ ಕೃತ್ಯ ಬಯಲಿಗೆ ಬಂದಿದೆ.

ಕೊರೊನಾ ವೈರಸ್‌ನ ಲಕ್ಷಣಗಳನ್ನೇ ಹೋಲುವ ಸಾರ್ಸ್ ವೈರಸ್ (ಸೆವೇರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) 2003ರಲ್ಲಿ ಕಾಣಿಸಿಕೊಂಡಿತ್ತು. ಈ ಮಾರಕ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿತ್ತು. ಆಗಲೂ ಚೀನಾ ಸರ್ಕಾರ ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿತ್ತು. ಅದೇ ತಪ್ಪನ್ನು ಕೊರೊನಾ ವೈರಸ್ ವಿಚಾರದಲ್ಲಿ ಪುನರಾವರ್ತಿಸಿತ್ತು. ಈ ನಡುವೆ ಚೀನಾದಲ್ಲಿ ನಡೆದ ಇನ್ನೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್‌ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ

2003ರಲ್ಲಿ ವ್ಯಾಪಕವಾಗಿ ಹರಡಿದ್ದ ಸಾರ್ಸ್ ವೈರಸ್‌ನ ಭೀಕರತೆಯನ್ನು ಮುಚ್ಚಿಡುವ ಚೀನಾ ಸರ್ಕಾರದ ಪ್ರಯತ್ನವನ್ನು ಬಯಲಿಗೆಳೆದಿದ್ದ ಚೀನಾ ಸೇನಾ ಸರ್ಜನ್ ಅವರನ್ನು ಕಳೆದ ವರ್ಷದಿಂದ ಸಂಪೂರ್ಣ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅವರ ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದಾರೆ.

ಗೃಹಬಂಧನದಲ್ಲಿ ಜಿಯಾಂಗ್

ಗೃಹಬಂಧನದಲ್ಲಿ ಜಿಯಾಂಗ್

ಪೀಪಲ್ಸ್ ಲಿಬರೇಷನ್ ಆರ್ಮಿಯ ನಿವೃತ್ತ ಜನರಲ್ ಡಾ. ಜಿಯಾಂಗ್ ಯಾನ್‌ಯಾಂಗ್ (88) ಅವರನ್ನು ಗೃಹಬಂಧನದಲ್ಲಿ ಇರಿಸಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ಅಪಾಯವನ್ನು ಆರಂಭದಲ್ಲಿಯೇ ಗ್ರಹಿಸಿ ಮಾಹಿತಿ ನೀಡಿದ್ದ ವೈದ್ಯ ಲಿ ವೆನ್‌ಲಿಯಾಂಗ್ (34) ಕಳೆದ ಗುರುವಾರ ವೈರಸ್‌ನಿಂದ ಮೃತಪಟ್ಟಿದ್ದರು. ಈ ಘಟನೆ ತೀವ್ರ ಆಕ್ರೋಶ ಸೃಷ್ಟಿಸಿದ ಬೆನ್ನಲ್ಲೇ ಸಾರ್ಸ್ ವಿರುದ್ಧ ಹೋರಾಟ ನಡೆಸಿದ್ದ ಜಿಯಾಂಗ್ ಯಾನ್‌ಯಾಂಗ್ ಅವರನ್ನು ಜನರು ನೆನಪಿಸಿಕೊಂಡಿದ್ದರು.

ಹೊರಜಗತ್ತಿನ ಸಂಪರ್ಕವಿಲ್ಲ

ಕಳೆದ ವರ್ಷದ ಏಪ್ರಿಲ್‌ನಿಂದಲೇ ಜಿಯಾಂಗ್ ಅವರು ಹೊರ ಜಗತ್ತಿನ ಜತೆಗೆ ಹೊಂದಿದ್ದ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸಲಾಗಿದೆ. ಹಾಗೂ ಅವರ ಚಲನವಲನಗಳಮೇಲೆ ನಿರ್ಬಂಧ ಹೇರಲಾಗಿದೆ. 1989ರ ಟಿಯಾನ್‌ಮೆನ್ ಸ್ಕೇರ್‌ನಲ್ಲಿ ನಡೆದಿದ್ದ ಪ್ರಜಾಪ್ರಭುತ್ವ ಪರ ಚಳವಳಿಯ ಮರುಮೌಲ್ಯಮಾಪನ ಮಾಡುವಂತೆ ಜಿಯಾಂಗ್ ಅವರು ಚೀನಾದ ಉನ್ನತಾಧಿಕಾರಕ್ಕೆ ಪತ್ರ ಬರೆದಿದ್ದರು. ಅಂದಿನಿಂದಲೇ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?

ಮಾನಸಿಕ ಸ್ಥಿತಿ ಚೆನ್ನಾಗಿಲ್ಲ

ಮಾನಸಿಕ ಸ್ಥಿತಿ ಚೆನ್ನಾಗಿಲ್ಲ

ಜಿಯಾಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದನ್ನು ಅವರ ಪತ್ನಿ ಹುವಾ ಝೋಂಗ್‌ವೀ ಖಚಿತಪಡಿಸಿದ್ದಾರೆ. 'ಅವರನ್ನು ಹೊರಗಿನ ಜನರೊಂದಿಗೆ ಸಂಪರ್ಕಿಸಲು ಅವಕಾಶ ನೀಡುತ್ತಿಲ್ಲ. ಅವರು ಮನೆಯಲ್ಲಿಯೇ ಇದ್ದಾರೆ. ಆದರೆ ಹೊರಗಿನವರೊಂದಿಗೆ ಯಾವ ಸಂವಹನವೂ ಇಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ. ಅಷ್ಟೇ ಅಲ್ಲ, ಅವರ ಮಾನಸಿಕ ಸ್ಥಿತಿಯೂ ಸರಿಯಾಗಿಲ್ಲ. ಅವರ ಅನಾರೋಗ್ಯ ಹದಗೆಟ್ಟಿದೆ' ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅವರಿಗೆ ನ್ಯುಮೋನಿಯಾ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗಿತ್ತು. ಇಷ್ಟಲ್ಲೆ ಬೇರೇನನ್ನೂ ನನ್ನಿಂದ ಹೇಳಲು ಸಾಧ್ಯವಿಲ್ಲ ಎಂದು ಹುವಾ ಹೇಳಿದ್ದಾರೆ.

ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ

ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ

ಸುಮಾರು 60 ವರ್ಷ ವೈದ್ಯರಾಗಿ ಸೇವೆಸಲ್ಲಿಸಿದ್ದ 301 ಸೇನಾ ಆಸ್ಪತ್ರೆಯಲ್ಲಿಯೇ ಜಿಯಾಂಗ್ ಅವರಿಗೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ಸುಮಾರು ಒಂದು ತಿಂಗಳು ಚಿಕಿತ್ಸೆ ನೀಡಲಾಗಿತ್ತು. ಆಗ ಅವರನ್ನು ಭಾರಿ ಭದ್ರತೆಯಲ್ಲಿ ಇರಿಸಲಾಗಿತ್ತು. ಅವರು ಕುಟುಂಬದ ಸದಸ್ಯರ ಭೇಟಿಗೂ ನಿರ್ಬಂಧ ವಿಧಿಸಲಾಗಿತ್ತು. ಜಿಯಾಂಗ್ ತೀವ್ರ ಕ್ಷೋಬೆಗೊಳಗಾಗಿದ್ದರು. ವೈದ್ಯರು ನೀಡಿದ್ದ ಔಷಧದಿಂದ ಅವರಿಗೆ ನೆನಪಿನ ಶಕ್ತಿ ಕೂಡ ಹೋಗಿದೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ಸಾವಿರಾರು ಮಂದಿಯ ಹತ್ಯಾಕಾಂಡ

31 ವರ್ಷಗಳ ಹಿಂದೆ ಅತ್ಯಂತ ಕ್ರೂರವಾಗಿ ಹತ್ತಿಕ್ಕಲಾಗಿದ್ದ ಟಿಯಾನ್‌ಮೆನ್ ಪ್ರಜಾಪ್ರಭುತ್ವ ಪರ ಹೋರಾಟವನ್ನು ಮರು ಮೌಲ್ಯಮಾಪನ ಮಾಡುವಂತೆ ಜಿಯಾಂಗ್ ಅವರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದು ಚೀನಾದ ಅತಿ ಸೂಕ್ಷ್ಮ ರಾಜಕೀಯ ವಿಚಾರವಾಗಿ ಉಳಿದುಕೊಂಡಿದೆ. ಈ ಚಳವಳಿಯನ್ನು ಹತ್ತಿಕ್ಕುವ ವೇಳೆ ಚೀನಾ ಸೇನೆ ಸಾವಿರಾರು ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ ಎನ್ನಲಾಗಿದೆ. ಆದರೆ ಅದರ ನಿಖರ ಸಂಖ್ಯೆ ಇಂದಿಗೂ ತಿಳಿದುಬಂದಿಲ್ಲ.

ರಾಷ್ಟ್ರೀಯ ಹೀರೋ ಜಿಯಾಂಗ್

ರಾಷ್ಟ್ರೀಯ ಹೀರೋ ಜಿಯಾಂಗ್

2003ರಲ್ಲಿ ಮಾರಕ ಸಾರ್ಸ್ ವೈರಸ್ ಹರಡುತ್ತಿರುವ ವಿಚಾರವನ್ನು ಮುಚ್ಚಿಟ್ಟಿದ್ದ ಚೀನಾ ಸರ್ಕಾರದ ನಡೆಯನ್ನು ಬಯಲಿಗೆಳೆದಿದ್ದ ಜಿಯಾಂಗ್, ರಾಷ್ಟ್ರೀಯ ಹೀರೋ ಎನಿಸಿಕೊಂಡಿದ್ದರು. 1989ರಲ್ಲಿ ನಡೆದಿದ್ದ ವಿದ್ಯಾರ್ಥಿ ಚಳವಳಿಯು ದೇಶಭಕ್ತಿಯ ಚಳವಳಿ ಎಂದು ಕರೆದಿದ್ದ ಅವರನ್ನು ಬಂಧಿಸಿ ಬಲವಂತವಾಗಿ 'ಬ್ರೈನ್‌ವಾಷಿಂಗ್ ಸೆಷನ್'ಗಳಿಗೆ ಒಳಪಡಿಸಲಾಗಿತ್ತು.

ವೈದ್ಯನ ಮುಖ್ಯ ಕರ್ತವ್ಯ ನಿಜ ಹೇಳುವುದು

ವೈದ್ಯನ ಮುಖ್ಯ ಕರ್ತವ್ಯ ನಿಜ ಹೇಳುವುದು

'ವೈದ್ಯನಾಗಿ ನನಗೆ ರೋಗಿಗಳ ಆರೋಗ್ಯ ಮತ್ತು ಜೀವವನ್ನು ರಕ್ಷಿಸುವುದು ಮೊದಲ ಆದ್ಯತೆ. ಅದಕ್ಕಿಂತಲೂ ಮುಖ್ಯವಾಗಿ ವೈದ್ಯರಿಗೆ ಇರಬೇಕಾದ ಅಗತ್ಯವೆಂದರೆ ಸತ್ಯ ನುಡಿಯುವುದು. ಕಳೆದ ಐವತ್ತು ವರ್ಷಗಳಲ್ಲಿ ನಾನು ಅನೇಕ ರಾಜಕೀಯ ಚಳವಳಿಗಳನ್ನು ನೋಡಿದ್ದೇನೆ. ಸುಳ್ಳು ಹೇಳುವುದು ಬಹಳ ಸುಲಭ. ಹೀಗಾಗಿ ನಾನು ಸುಳ್ಳು ಹೇಳಬಾರದು ಎಂದು ಪಣತೊಟ್ಟಿದ್ದೇನೆ. ಹೀಗೆ ಸತ್ಯ ಹೇಳಿದ್ದಕ್ಕೆ ತಕ್ಕ ಪರಿಣಾಮವನ್ನೂ ಎದುರಿಸಿದ್ದೇನೆ' ಎಂದು ಅವರು 2013ರಲ್ಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಸಾರ್ಸ್ ಕುರಿತ ಮಾಹಿತಿ ನೀಡಿದ್ದ ಜಿಯಾಂಗ್

ಸಾರ್ಸ್ ಕುರಿತ ಮಾಹಿತಿ ನೀಡಿದ್ದ ಜಿಯಾಂಗ್

2002ರ ಅಂತ್ಯ ಮತ್ತು 2003ರ ಆರಂಭದಲ್ಲಿ ಚೀನಾದಲ್ಲಿ ಸಾರ್ಸ್ ವೈರಸ್ ಹರಡತೊಡಗಿತ್ತು. ಇದನ್ನು ಚೀನಾ ಸರ್ಕಾರ ನಿರ್ಲಕ್ಷಿಸಿತ್ತು. 2003ರ ಏಪ್ರಿಲ್ 4ರಂದು ಇದರ ಬಗ್ಗೆ ಅವರು ಚೀನಾ ಮತ್ತು ಹಾಂಕಾಂಗ್ ಟೆಲಿವಿಷನ್‌ಗಳಿಗೆ 800 ಪದಗಳ ಇಮೇಲ್ ರವಾನಿಸಿದ್ದರು. ಆದರೆ ಇವು ಪ್ರಕಟವಾಗಲಿಲ್ಲ. ಈ ಸುದ್ದಿ ಪಾಶ್ಚಿಮಾತ್ಯ ಸುದ್ದಿ ಸಂಸ್ಥೆಗಳಲ್ಲಿ ಸೋರಿಕೆಯಾಯಿತು. ವಿದೇಶಿ ಮಾಧ್ಯಮಗಳು ಜಿಯಾಂಗ್ ಅವರನ್ನು ಭೇಟಿ ಮಾಡಿ ಸಂದರ್ಶನಗಳನ್ನು ತೆಗೆದುಕೊಂಡರು. 'ಬೀಜಿಂಗ್ ಸಾರ್ಸ್ ದಾಳಿ' ಜಗತ್ತಿನಾದ್ಯಂತ ಸುದ್ದಿಯಾಯಿತು. ಆದರೆ ಅಂದಿನಿಂದ ಜಿಯಾಂಗ್ ಅವರು ನಿರಂತರವಾಗಿ ಚೀನಾ ಸರ್ಕಾರದ ಕಠಿಣ ಕ್ರಮಗಳನ್ನು ಎದುರಿಸುತ್ತಾ ಬಂದಿದ್ದಾರೆ.

English summary
Doctor Jiang Yanyong who exposed 2003 Sars epidemic cover-up is under house arrest in China since April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X