• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ; ಕ್ಯಾಲಿಫೋರ್ನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

|

ಕ್ಯಾಲಿಫೋರ್ನಿಯಾ, ಮಾರ್ಚ್ 05 : ಕ್ಯಾಲಿಫೋರ್ನಿಯಾದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಕಮೀಷನ್ ಹೇಳಿದೆ.

ಕ್ಯಾಲಿಫೋರ್ನಿಯಾದಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಮೊದಲ ಸಾವಿನ ಪ್ರಕರಣ ದಾಖಲಾಗಿದೆ. ಆದ್ದರಿಂದ, ರಾಜ್ಯಪಾಲರು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನೂ 53 ಪ್ರಕರಣಗಳು ಖಚಿತವಾಗಿವೆ.

ಭಾರತದಲ್ಲಿ 29 ಮಂದಿಗೆ ಕೊರೊನಾ: ವಿಶ್ವದಲ್ಲಿ 3,285ಕ್ಕೂ ಹೆಚ್ಚು ಮಂದಿ ಬಲಿ

ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ. ಬುಧವಾರ ಹೊಸದಾಗಿ 139 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು 80,409 ಪ್ರಕರಗಳು ದಾಖಲಾಗಿವೆ.

ಹೈದರಾಬಾದ್; ಟೆಕ್ಕಿಗೆ ಕೊರೊನಾ ಶಂಕೆ, ಐಟಿ ಪಾರ್ಕ್‌ಗೆ ಬೀಗ

ಪ್ರಪಂಚದಾದ್ಯಂತ ಇದುವರೆಗೂ 3286 ಜನರು ಕೊರೊನಾಗೆ ಬಲಿಯಾಗಿದ್ದಾರೆ. 53,688 ಜನರು ಗುಣಮುಖರಾಗಿದ್ದಾರೆ. ಒಟ್ಟು 84 ದೇಶಗಳಲ್ಲಿ ಕೊರೊನಾ ವೈರಸ್ ಸೋಂಕು ಹಬ್ಬಿದೆ. ದಕ್ಷಿಣ ಕೋರಿಯಾ, ಇಟಲಿ, ಇರಾನ್‌ನಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಹಾಂಕ್ ಕಾಂಗ್‌ನಲ್ಲಿ ಮನುಷ್ಯನಿಂದ ನಾಯಿಗೆ ಕೊರೊನಾ ಸೋಂಕು

ಅಮೆರಿಕದಲ್ಲಿ ಒಟ್ಟು 159 ಪ್ರಕರಣ ದಾಖಲಾಗಿದೆ. 11 ಜನರು ಇದುವರೆಗೂ ಮೃತಪಟ್ಟಿದ್ದಾರೆ. 139 ಮಂದಿ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
California Governor Gavin Newsom has declared a state of emergency after coronavirus after the state reported its first death from the disease. Stated had 53 confirmed cases of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X