Syria Christmas Tree: ಕ್ರಿಸ್ಮಸ್‌ ಸಂಭ್ರಮಾಚರಣೆಯ ನಡುವೆಯೇ ಸಿರಿಯಾದಲ್ಲಿ ಸಂಘರ್ಷ

ವಿಶ್ವದಾದ್ಯಂತ ಇಂದು ಅತ್ಯಂತ ಸಂಭ್ರಮದಿಂದ ಕ್ರಿಸ್ಮಸ್‌ ಸಂಭ್ರಮಾಚರಣೆ ನಡೆತಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಕ್ರಿಸ್ಮಸ್‌ ದಿನವೇ ಕಿಡಿಗೇಡಿಗಳು ಸಿರಿಯಾದಲ್ಲಿ ಬೃಹತ್‌ ಕ್ರಿಸ್ಮಸ್‌ ಟ್ರೀಗೆ ಬೆಂಕಿ ಹಚ್ಚಿದ್ದಾರೆ. ಇದು ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಇಲ್ಲಿ ಕ್ರೈಸ್ತ ಸಮುದಾಯದ ಜನ ಅಲ್ಪಸಂಖ್ಯಾತರಾಗಿದ್ದಾರೆ. ಇಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲೇ ಅವಘಡ ನಡೆದಿದೆ. ಇನ್ನು ಯುದ್ಧದ ಕಾರ್ಮೋಡದ ನಡುವೆಯೇ ಬೆಥ್ ಲೆಹೆಮ್‌ನಲ್ಲೂ ಕ್ರಿಸ್ಮಸ್‌ ಆಚರಣೆ ಮಾಡಲಾಗಿದೆ. ಕ್ರಿಸ್ಮಸ್‌ ಅನ್ನು ಇಲ್ಲಿ ಅತ್ಯಂತ ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿತ್ತು. ಆದರೆ, ಕಳೆದ ಒಂದು ದಶಕದಿಂದಲೂ ಇಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

ಗಾಜಾದಲ್ಲಿ ಪರಿಸ್ಥಿತಿ ಸುಧಾರಿಸದೆ ಇರುವುದರಿಂದ ಇಲ್ಲೂ ಕ್ರಿಸ್ಮಸ್ ಸಂಭ್ರಮಾಚರಣೆ ಕಳೆಗುಂದಿದೆ. ಈ ರೀತಿ ಇರುವಾಗಲೇ ಕಿಡಿಗೇಡಿಗಳು ಸಿರಿಯಾದಲ್ಲೂ ವಿಕೃತಿ ಮುಂದುವರಿಸಿದ್ದಾರೆ. ಇಲ್ಲಿ ನಿರ್ಮಿಸಲಾಗಿದ್ದ ಬೃಹತ್‌ ಕ್ರಿಸ್‌ಮಸ್ ಟ್ರೀಗೆ ಬೆಂಕಿ ಹಚ್ಚಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿರಿಯಾದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಸುಖೈಲಬಿಯಾ ಎನ್ನುವ ಪ್ರದೇಶದಲ್ಲಿ ಕೈಸ್ತ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ರಿಸ್ಮಸ್‌ ದಿನ ಈ ರೀತಿ ಆಗಿರುವುದಕ್ಕೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

Christmas tree set on fire in Syria drawing protests from Christian

ಸಿರಿಯಾದಲ್ಲಿ ಸಂಘರ್ಷ: ಸಿರಿಯಾದಲ್ಲಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಜೋರಾಗಿದೆ. ಅಲ್ಲದೇ ಸಿರಿಯಾದ ಸರ್ವಾಧಿಕಾರಿ ಅಧ್ಯಕ್ಷ ಬಶರ್ ಅಲ್‌ ಅಸ್ಸಾದ್ ಸರ್ಕಾರ ಈಚೆಗೆ ಪತನವಾಗಿದೆ. ಇಲ್ಲಿನ ಸರ್ವಾಧಿಕಾರಿ ದೊರೆಯ ವಿರುದ್ಧ ಮೊಹಮ್ಮದ್ ಅಲ್‌ ಗೋಲಾನಿ ಅಧ್ಯಕ್ಷತೆಯಲ್ಲಿ ಹಯಾತ್ ತೆಹ್ರೀರ್ ಅಲ್-ಶಾಮ್ ಎನ್ನುವ ಬಂಡುಕೋರರ ಬಣವು ಸಿರಿಯಾದಲ್ಲಿ ಹಿಡಿತ ಸಾಧಿಸಿದೆ. ಸರ್ವಾಧಿಕಾರಿ ಆಡಳಿತ ಅಂತ್ಯವಾದ ಮೇಲೆ ಇಲ್ಲಿ ಪ್ರಜಾಪ್ರಭುತ್ವ ನಿರ್ಮಾಣವಾಗುವ ಆಸೆಯನ್ನು ಇಲ್ಲಿನ ಜನ ಕಂಡಿದ್ದರು. ಅಲ್ಲದೆ, ಈ ದೇಶದಲ್ಲಿ ಸಂಘರ್ಷ ಪ್ರಾರಂಭವಾಗಿದ್ದೇ ಪ್ರಜಾಪ್ರಭುತ್ವ ಬೇಕು ಎನ್ನುವ ಕಾರಣಕ್ಕಾಗಿ. ಆದರೆ, ತಿಂಗಳ ಒಳಗಾಗಿ ಇಲ್ಲಿನ ಅಲ್ಪಸಂಖ್ಯಾತರು ಆತಂಕಕ್ಕೆ ಒಳಗಾಗಿರುವುದು ವರದಿಯಾಗಿದೆ.

ಕ್ರೈಸ್ತರು ಹೆಚ್ಚಾಗಿ ಇರುವ ಮಧ್ಯ ಸಿರಿಯಾದ ಸುಖೈಲಬಿಯಾ ನಗರದಲ್ಲಿರುವ ಮುಖ್ಯ ಸರ್ಕಲ್‌ನಲ್ಲಿ ಕ್ರಿಸ್ಮಸ್‌ ಟ್ರೀ ಇರಿಸಲಾಗಿತ್ತು. ಇದಕ್ಕೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ಧ: ಇನ್ನು ಇಲ್ಲಿನ ಬಂಡುಕೋರ ಬಣವು ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ಧರಾಗಿ ಇರುವುದಾಗಿ ಹೇಳಿದೆ. ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಹಕ್ಕು, ಸ್ವಾತಂತ್ರ್ಯ ಹಾಗೂ ರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದೆ. ಅಲ್ಲದೆ ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಅದರಲ್ಲಿ ವಿದೇಶಿಗರೂ ಸಹ ಇದ್ದಾರೆ ಎಂದು ಹೇಳಲಾಗಿದೆ.

ಅಮೆರಿಕ ಈ ಹಿಂದೆಯೇ ಈ ವಿಚಾರವಾಗಿ ಬಂಡುಕೋರರಿಗೆ ಎಚ್ಚರಿಕೆಯನ್ನು ನೀಡಿತ್ತು. ಇಲ್ಲಿರುವ ಅಲ್ಪಸಂಖಾತರ ರಕ್ಷಣೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಇದರ ಹೊರತಾಗಿಯೂ ಕ್ರಿಸ್ಮಸ್‌ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+