ಡಿಸೆಂಬರ್‌ನಲ್ಲಿ ಬಳಕೆಗೆ ಲಭ್ಯವಾಗುವ ಚೀನಾದ ಕೊರೊನಾ ಲಸಿಕೆ ಬೆಲೆ ಎಷ್ಟು?
ಬೀಜಿಂಗ್, ಆಗಸ್ಟ್ 19: ಡಿಸೆಂಬರ್‌ನಲ್ಲಿ ಬಳಕೆಗೆ ಲಭ್ಯವಾಗಲಿರುವ ಚೀನಾದ ಕೊರೊನಾ ಲಸಿಕೆಯ ಬೆಲೆ ಎಷ್ಟು ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲಿ ಉದ್ಭವವಾಗಿದೆ.
Recommended Video
ಚೀನಾದ ಕೊವಿಡ್ 19 ಲಸಿಕೆ ವರ್ಷಾಂತ್ಯಕ್ಕೆ ಲಭ್ಯವಾಗಲಿದೆ ಎಂದು ಚೀನಾದ ಔಷಧೀಯ ಕಂಪನಿ ಸಿನೋಫಾರ್ಮ್ ತಿಳಿಸಿದೆ. ಸಿನೋಫಾರ್ಮ್ ಮುಖ್ಯಸ್ಥ ಲಿಯು ಜಿಂಗ್‌ಸೆನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಒಂದು ಲಸಿಕೆಗೆ 1 ಸಾವಿರ ಯುವಾನ್ ಅಷ್ಟು ವೆಚ್ಚ ತಗುಲಲಿದೆ, ಎರಡು ಶಾಟ್ಸ್ ನೀಡಲಾಗುತ್ತದೆ. 28 ದಿನಗಳಲ್ಲಿ ಎರಡು ಡೋಸ್ ನೀಡಲಾಗುತ್ತೆ.
ಪ್ರಮುಖನಗರಗಳಲ್ಲಿರುವ ಮಕ್ಕಳು ಹಾಗೂ ನೌಕರರು ಲಸಿಕೆ ಪಡೆಯುತ್ತಾರೆ, ಆದರೆ ಹಳ್ಳಿ ಪ್ರದೇಶಗಳಿಗೆ ತಲುಪುವುದು ಕಷ್ಟ ಎಂದಿದ್ದಾರೆ.ಸಿನೋಫಾರ್ಮ್ ಎರಡು ಲಸಿಕೆಗಳ ಮೇಲೆ ಪ್ರಯೋಗ ನಡೆಸುತ್ತಿದೆ. ಪ್ರತಿ ವರ್ಷ 220 ಮಿಲಿಯನ್ ಅಷ್ಟು ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಲಿಯು ಕೂಡ ಈ ಲಸಿಕೆಯನ್ನು ತಮ್ಮ ಮೇಲೆ ಪ್ರಯೋಗಿಸಿಕೊಳ್ಳಲಿದ್ದಾರೆ.

ಈ ಲಸಿಕೆಯು 1,000 ಯುವಾನ್ ಅಂದರೆ 10 ಸಾವಿರ ರೂಗೆ ಎರಡು ಡೋಸ್ ಲಭ್ಯವಿರಲಿದೆ. ಈಗಾಗಲೇ ಕೊನೆಯ ಹಂತದ ಪ್ರಯೋಗ ನಡೆಯಲಿದೆ. ಸಾವಿರಾರು ಮಂದಿ ಮೇಲೆ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ಕೂಡ ಲಭ್ಯವಾಗಿದೆ.ಸಿನೊಫಾರ್ಮ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸಂಭವನೀಯ ಲಸಿಕೆಯ 3 ನೇ ಹಂತದ ಪ್ರಯೋಗವನ್ನು ನಡೆಸುತ್ತಿದೆ, 15,000 ಜನರನ್ನು ನೇಮಕ ಮಾಡುವ ನಿರೀಕ್ಷೆಯಿದೆ.
ಪ್ರಯೋಗ ಒಪ್ಪಂದದ ಪ್ರಕಾರ ಸಾಕಷ್ಟು ಮಂದಿಯನ್ನು ಪಾಕಿಸ್ತಾನಕ್ಕೂ ಕೂಡ ಕಳಿಸುತ್ತಿದೆ. ಈ ಲಸಿಕೆಯು ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಮೊದಲು ಹಾಗೂ ಎರಡನೇ ಹಂತದಲ್ಲಿ 320 ಮಂದಿ ಮೇಲೆ ಪ್ರಯೋಗ ನಡೆದಿದೆ.
ಸಿನೋಫಾರ್ಮ್ ಚೇರ್ಮನ್ ಮಾತನಾಡಿ, ಈ ವರ್ಷದ ಅಂತ್ಯದಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸಲಿದ್ದು, ಮೂರು ತಿಂಗಳಲ್ಲಿ ಪ್ರಯೋಗ ಮುಗಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಕೊರೊನಾ ವೈರಸ್ ವಿಶ್ವದಾದ್ಯಂತ 7,50,000 ಮಂದಿಯ ಹತ್ಯೆಗೆ ಕಾರಣವಾಗಿದೆ. 150 ಕ್ಕೂ ಹೆಚ್ಚು ಕಂಪನಿಗಳು ಕೊರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ವಿಶ್ವದಲ್ಲೇ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಗಿದೆ.












Click it and Unblock the Notifications