ಕರಾಚಿಯಲ್ಲಿ ಲಂಗರು ಹಾಕಿದೆ ಚೀನಾದ ನ್ಯೂಕ್ಲಿಯರ್ ಸಬ್ ಮರೀನ್

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 6: ಭಾರತದ ಯುದ್ಧ ನೌಕೆಗಳ ಚಲನವಲನದ ಮೇಲೆ ಚೀನಾ ಕಣ್ಗಾವಲಿಟ್ಟಿದೆಯಾ? ಇಂಥದ್ದೊಂದು ಅನುಮಾನ ಮೂಡಿಸುವ ಬೆಳವಣಿಗೆಯೊಂದು ಆಗಿದೆ. ಕರಾಚಿಯ ಬಂದರಿನಲ್ಲಿ ಕಳೆದ ವರ್ಷ ಲಂಗರು ಹಾಕಿದ ಚೀನಾದ ನ್ಯೂಕ್ಲಿಯರ್ ಸಬ್ ಮರೀನ್ ನ ಚಿತ್ರಗಳು ಗೂಗಲ್ ಅರ್ಥ್ ನಲ್ಲಿ ಸೆರೆ ಸಿಕ್ಕಿವೆ.

ಅದಾದ ನಂತರವೇ ಭಾರತದ ಯುದ್ಧ ನೌಕೆಗಳ ಮೇಲೆ ಚೀನಾ ಗೂಢಚಾರಿಕೆ ಮಾಡುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈ ಚಿತ್ರಗಳು ಮೊದಲಿಗೆ ಉಪಗ್ರಹಗಳ ಮೂಲಕ ಸಿಕ್ಕಿದ್ದವು. ಅದರ ಪ್ರಕಾರ ಹೇಳುವುದಾದರೆ, ಚೀನಾ ನೌಕಾದಳ ಅಣ್ವಸ್ತ್ರ ಶಕ್ತಿಯ ಅತ್ಯಾಧುನಿಕ ಸಬ್ ಮರೀನ್ ವೊಂದನ್ನು ನಿಯೋಜಿಸಿದೆ.[ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ, ಅದಕ್ಕೂ ಚೀನಾದಿಂದ ಬರ್ತಾರೆ!]

Chinese Nuclear Submarine spotted at Karachi

ಚೀನಾ ನಿಯೋಜಿಸಿರುವ ಈ ಸಬ್ ಮರೀನ್ ಬಹಳ ಶಕ್ತಿಶಾಲಿ. ಅದು ಎಷ್ಟು ದೂರದ ಗುರಿಯನ್ನಾದರೂ ತಲುಪುವ ಸಾಮರ್ಥ್ಯ ಹೊಂದಿದೆ. ಏಕೆಂದರೆ ಅವುಗಳ ನ್ಯೂಕ್ಲಿಯರ್ ರಿಯಾಕ್ಟರ್ ಗಳಿಗೆ ಇಂಧನ ತುಂಬಿಸುವ ಸಂದರ್ಭ ಎದುರಾಗುವುದೇ ಅಪರೂಪ. ಇನ್ನು ಈ ಸಬ್ ಮರೀನ್ ನೀರಿನ ಕೆಳಭಾಗದಲ್ಲಿ ತುಂಬ ದೀರ್ಘಕಾಲ ಇರಬಹುದು, ಅವುಗಳನ್ನು ಪತ್ತೆ ಹಚ್ಚುವುದು ಕೂಡ ಅಸಾಧ್ಯ.

ಡೀಸೆಲ್ ಬಳಕೆ ಮಾಡುವ ಸಬ್ ಮರೀನ್ ಗಳಿಗಿಂತ ನ್ಯೂಕ್ಲಿಯರ್ ಸಬ್ ಮರೀನ್ ಗಳು ತುಂಬ ವೇಗವಾಗಿ ಕಾರ್ಯನಿರ್ವಹಿಸುತ್ತವೆ. ಜತೆಗೆ ಡೀಸೆಲ್ ಮರೀನ್ ಕಡಿಮೆ ಅಂತರದ ಸ್ಥಳಗಳಿಗೆ ಹಾಗೂ ಕೆಲವು ವಾರಗಳ ಕಾಲಾವಧಿಗೆ ಮಾತ್ರ ಬಳಕೆ ಆಗುವಂಥದ್ದು. ಹಿಂದೂ ಮಹಾಸಾಗರದಲ್ಲಿ ಚೀನಾ ಸಬ್ ಮರೀನ್ ಇರುವ ವಿಚಾರ ಭಾರತಕ್ಕೆ ಗೊತ್ತಿದೆ ಎಂದು ಹೇಳಲಾಗಿದೆ.[ದಾವೂದ್ ಇಬ್ರಾಹಿಂನ 15 ಸಾವಿರ ಕೋಟಿ ಆಸ್ತಿ ವಶಪಡಿಸಿಕೊಂಡ ಯುಎಇ]

ನೌಕಾ ದಳದ ಮುಖ್ಯಸ್ಥ ಸುನೀಲ್ ಲಾಂಬಾ ಇತ್ತೀಚೆಗೆ, ಚೀನಾದ ಸಬ್ ಮರೀನ್ ಗಳು ಹಾಗೂ ನೌಕೆಗಳ ಚಲನವಲನವನ್ನು ಭಾರತೀಯ ನೌಕಾ ದಳ ಗಮನಿಸುತ್ತಿದೆ. ಅವುಗಳ ಇರುವಿಕೆಯನ್ನು ಪತ್ತೆ ಹಚ್ಚುವುದಕ್ಕೆ ಅಂತಲೇ ಹಡಗುಗಳು ಹಾಗೂ ಏರ್ ಕ್ರಾಫ್ಟ್ ಗಳ ಮೂಲಕ ಕಣ್ಣಿರಿಸಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಪಾಕಿಸ್ತಾನ್ ನ ಸರಕಾರಿ ರೇಡಿಯೋದಲ್ಲಿ ಘೋಷಣೆ ಮಾಡಿದ ಪ್ರಕಾರ, ಚೀನಾದ ಯುವಾನ್-ಕ್ಲಾಸ್ ಡೀಸೆಲ್ ಹಾಗೂ ಎಲೆಕ್ಟ್ರಿಕಲ್ ಸಬ್ ಮರೀನ್ ಗಳ ಖರೀದಿಗೆ ಪಾಕ್ ಒಪ್ಪಂದ ಮಾಡಿಕೊಂಡಿದೆ. ಮೊದಲ ನಾಲ್ಕು ಸಬ್ ಮರೀನ್ ಗಳು 2023ರ ಕೊನೆ ಹೊತ್ತಿಗೆ ಪಾಕ್ ಗೆ ರವಾನೆಯಾಗುತ್ತವೆ.[ಅಮೆರಿಕಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ಕೊಟ್ಟಿತೆ ರಷ್ಯಾ!]

ಇನ್ನು ಉಳಿದವು 2028ರ ವೇಳೆಗೆ ಕರಾಚಿಯಲ್ಲಿ ಜೋಡಣೆ ಮಾಡಲಾಗುತ್ತವೆ. ಈ ಖರೀದಿ ಒಪ್ಪಂದವು ಚೀನಾ ಹಾಗೂ ಪಾಕಿಸ್ತಾನದ ಮಧ್ಯೆ ನೌಕಾ ಬಾಂಧವ್ಯ ಹೆಚ್ಚುತ್ತಿರುವುದರ ಸೂಚನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Is Beijing scrutinising Indian warship movements? A Chinese nuclear submarine docked in the harbour at Karachi last year was captured by Google Earth raising fears that China may be spying on Indian warships.
Please Wait while comments are loading...