1000 ಚದರ ಕಿಲೋ ಮೀಟರ್ ಗಡಿಯುದ್ದಕ್ಕೂ ಚೀನಾ ನಿಯಂತ್ರಣ!

ನವದೆಹಲಿ, ಸಪ್ಟೆಂಬರ್.01: ಭಾರತ-ಚೀನಾದ ನಡುವಿನ ಲಡಾಖ್ ಗಡಿಯ 1000 ಚದರ ಕಿಲೋ ಮೀಟರ್ ನಿಗದಿತ ಗಡಿ ರೇಖೆ(ಎಲ್ಎಸಿ) ಮೇಲೆ ಚೀನಾ ಸೇನಾಪಡೆಗಳು ನಿಯಂತ್ರಣವನ್ನು ಸಾಧಿಸುತ್ತಿವೆ ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ರವಾನಿಸಿದೆ.

Recommended Video

      China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

      ಕಳೆದ ಏಪ್ರಿಲ್ ತಿಂಗಳಿನಿಂದಲೂ ಗಡಿಯಲ್ಲಿ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುತ್ತಾ ಬರುತ್ತಿದೆ. ಡೆಪ್ಸಾಂಗ್ ಬಯಲು ಪ್ರದೇಶದಿಂದ ಚುಶುಲ್ ವರೆಗೆ ವಿವರಿಸಲಾಗದ ನಿಗದಿತ ಗಡಿ ರೇಖೆಯುದ್ದಕ್ಕೂ ಚೀನಾದ ಸೇನೆಯು ವ್ಯವಸ್ಥಿತವಾಗಿ ಸಜ್ಜುಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ಹಿಂದೂಗೆ ಮಾಹಿತಿ ನೀಡಿದ್ದಾರೆ.

      ಪೆಟ್ರೋಲಿಂಗ್ ಪಾಯಿಂಟ್ 10-13 ರಿಂದ ಡೆಪ್ಸಾಂಗ್ ಬಯಲಿನಲ್ಲಿ "ಎಲ್ಎಸಿಯ ಬಗ್ಗೆ ಚೀನೀ ನಿಯಂತ್ರಣದ ಪ್ರಮಾಣವು ಸುಮಾರು 900 ಚದರ ಕಿ.ಮೀ. ಎಂಬುದನ್ನು ಭಾರತವು ಗ್ರಹಿಸಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

      ಯಾವೆಲ್ಲ ಪ್ರದೇಶಗಳ ಮೇಲೆ ಚೀನಾ ನಿಯಂತ್ರಣ?

      ಯಾವೆಲ್ಲ ಪ್ರದೇಶಗಳ ಮೇಲೆ ಚೀನಾ ನಿಯಂತ್ರಣ?

      ಗಾಲ್ವಾನ್ ಕಣಿವೆಯ 20 ಚದರ ಕಿಲೋ ಮೀಟರ್, ಹಾಟ್ ಸ್ಪಿಂಗ್ ಪ್ರದೇಶದ 12 ಚದರ ಕಿಲೋ ಮೀಟರ್ ಚೀನಾದ ನಿಯಂತ್ರಣದಲ್ಲಿದೆ ಎಂದು ನಂಬಲಾಗಿದೆ. ಇದರ ಜೊತೆಗೆ ಪ್ಯಾಂಗಾಂಗ್ ತ್ಸೋ ಸರೋವರದ 65 ಚದರ ಕಿಲೋ ಮೀಟರ್ ಮತ್ತು ಚುಶುಲ್ ನ 20 ಚದರ ಕಿಲೋ ಮೀಟರ್ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಸಾಧಿಸಿದೆ ಎಂದು ವರದಿಯಾಗಿದೆ.

      ಭಾರತದ ವಿರುದ್ಧ ಬೊಟ್ಟು ಮಾಡುತ್ತಿರುವ ಚೀನಾ

      ಭಾರತದ ವಿರುದ್ಧ ಬೊಟ್ಟು ಮಾಡುತ್ತಿರುವ ಚೀನಾ

      ಭಾರತೀಯ ಸೇನೆಯು ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ನಿಗದಿತ ಗಡಿ ರೇಖೆಯಿಂದ 4200 ಮೀಟರ್ ದಾಟಿದ್ದು, ಅತಿಕ್ರಮವಾಗಿ ಸೇನಾ ಚಟುವಟಿಕೆಗಳನ್ನು ನಡೆಸುತ್ತಿದೆ. ಇದರಿಂದಾಗಿ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ ಎಂದು ಚೀನಾ ಸೇನೆಯು ದೂಷಿಸುತ್ತಿದೆ. ಚೀನಾದ ಪ್ರಾದೇಶಿಕ ಸಾರ್ವಭೌಮತ್ವಕ್ಕೆ ಧಕ್ಕೆ ಬರುವಂತೆ ಭಾರತೀಯ ಸೇನೆಯು ಗಡಿರೇಖೆಯನ್ನು ಉಲ್ಲಂಘಿಸಿದೆ. ಇದಕ್ಕೆ ಪ್ರತಿಯಾಗಿ ಪೀಪಲ್ಸ್ ಲಿಬರೇಷನ್ ಆರ್ಮಿಯು ತಕ್ಕ ಉತ್ತರ ನೀಡಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಿಎಲ್ಎ ಪ್ರಾದೇಶಿಕ ಕಮಾಂಡರ್ ತಿಳಿಸಿದ್ದಾರೆ.

      ಚೀನಾದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

      ಚೀನಾದ ಬಗ್ಗೆ ಭಾರತೀಯ ಸೇನೆ ಹೇಳಿದ್ದೇನು?

      ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿರುವುದು ಗೊತ್ತಾಗಿದೆ. ಕಳೆದ ಜೂನ್.15ರಿಂದಲೂ ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನಾಪಡೆಗಳು ಅಲರ್ಟ್ ಆಗಿವೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ಪೂರ್ವಭಾವಿಯಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.

      ಚೀನಾ ವಿದೇಶಾಂಗ ವಕ್ತಾರ ನೀಡಿದ ಸ್ಪಷ್ಟನೆಯೇನು?

      ಚೀನಾ ವಿದೇಶಾಂಗ ವಕ್ತಾರ ನೀಡಿದ ಸ್ಪಷ್ಟನೆಯೇನು?

      ಭಾರತ ಚೀನಾ ಗಡಿ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲೂ ಚೀನಾದ ಸೇನಾಪಡೆಯು ನಿಗದಿತ ಗಡಿ ರೇಖೆ ದಾಟಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ. ಭಾರತೀಯ ಸೇನೆ ಹೇಳಿಕೆ ನೀಡಿರುವ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೊ ಲಿಜಿಯಾನ್ ಸ್ಪಷ್ಟನೆ ನೀಡಿದ್ದಾರೆ. ಚೀನಾದ ಪೀಪಲ್ಸ್ ಲಿಬರ್ಟಿ ಆರ್ಮಿ ಯೋಧರು ನಿಗದಿತ ಗಡಿ ರೇಖೆಯನ್ನು ದಾಟಿ ಹೋಗಿಲ್ಲ. ಎರಡೂ ಕಡೆಗಳಲ್ಲಿ ಸದ್ಯದ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿ ಚೀನಾ ಸೇನೆ ಯಾವುದೇ ರೀತಿ ಪ್ರಚೋದನಾತ್ಮಕ ಚಟುವಟಿಕೆಗಳನ್ನು ನಡೆಸಿಲ್ಲ. ಉಭಯ ರಾಷ್ಟ್ರಗಳ ಗಡಿಯಲ್ಲಿ ಯಥಾಸ್ಥಿತಿಗೆ ಧಕ್ಕೆ ಉಂಟಾಗುವಂತಾ ಯಾವುದೇ ಚಟುವಟಿಕೆಗಳನ್ನು ನಡೆಸುತ್ತಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+